ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಿ ಇಲ್ಲದಿದ್ದರೆ 16 ರಂದು ಸುವರ್ಣ ಸೌಧ ಮುತ್ತಿಗೆ:ವೈಟ್ ಫೀಲ್ಡ್ ಮುರುಗೇಶ ಹೇಳಿಕೆ…

ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಿ ಇಲ್ಲದಿದ್ದರೆ 16 ರಂದು ಸುವರ್ಣ ಸೌಧ ಮುತ್ತಿಗೆ:ವೈಟ್ ಫೀಲ್ಡ್ ಮುರುಗೇಶ ಹೇಳಿಕೆ…

ಗಂಗಾವತಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರ ವೋಟುಗಳನ್ನು ಮತ ಬ್ಯಾಂಕ್ ಗಳನ್ನಾಗಿ ಮಾಡಿಕೊಂಡು ರಾಜ್ಯ ವಿಧಾನಸಭೆಯಲ್ಲಿ ಅತ್ಯಂತ ಬಹುಮತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೆಂಗಳೂರಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷದಿಂದ ಪಾದಯಾತ್ರೆಯ ಮೂಲಕ ಮನವಿ ಪತ್ರದ ಮೂಲಕ ಆಗ್ರಹಿಸಿದರು ಸಹ ಕಣ್ಣು ಕಿವಿ ಬಾಯಿ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರವಾಗಿ ಬೃಹತ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದು ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ ಹೇಳಿದರು. ಅವರು ಗುರುವಾರದಂದು ನಗರದ ಸರ್ಕಿಟ್ ಹೌಸ್ ನಲ್ಲಿ ಭೀಮ್ ಪ್ರಜಾ ಸಂಘ ಜಿಲ್ಲಾ ಘಟಕ ಹಾಗೂ ತಾಲೂಕ ಘಟಕ ಪದಾಧಿಕಾರಿಗಳ ನೇಮಕಗೊಳಿಸಿ ಮಾತನಾಡಿದರು. ಪುತ್ತಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಬೀದರ್ ನಿಂದ ಬೆಂಗಳೂರು ವರೆಗೆ 1035 ಕಿಲೋಮೀಟರ್ ಪಾದಯಾತ್ರೆ ಹಾಗೂ ಕೋಲಾರ ದಿಂದ ಬೆಂಗಳೂರು ಅವರಿಗೆ ಪಾದಯಾತ್ರೆ ನಡೆಸಿದರು ಸಹ ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಇದ್ದದ್ದು ಗಮನಿಸಿದರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ದಿನಾಂಕ 16 ರಂದು ಬೆಳಗಾವಿಯಲ್ಲಿ ಜರುಗುತ್ತಿರುವ ಅಧಿವೇಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ ರು.ಈಗಾಗಲೇ ಆಂಧ್ರಪ್ರದೇಶ ತೆಲಂಗಾಣ ಇತರೆ ರಾಜ್ಯಗಳಲ್ಲಿ ಬೃಹತ್ ಪುತ್ತಳಿಯನ್ನು ನಿರ್ಮಾಣ ಮಾಡಿದ್ದು ನಿಜಕ್ಕೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಇರುವ ಗೌರವ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾಗಿ ನಾಗರಾಜ ಕಟ್ಟಿಮನಿ. ಜಿಲ್ಲಾ ಉಪಾಧ್ಯಕ್ಷರಾಗಿ ನರಸಿಂಹ. ಗಂಗಾವತಿ ತಾಲೂಕ ಅಧ್ಯಕ್ಷರಾಗಿ ಗಣೇಶ ಬಸಾಪಟ್ಟಣ.ಉಪಾಧ್ಯಕ್ಷರಾಗಿ ಶಾಮೀದ್ ಅಲಿ. ಕಾರ್ಯದರ್ಶಿ ವೀರೇಶ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಿ ಮಾತನಾಡಿದರು.

Leave a Reply

Your email address will not be published. Required fields are marked *