ನಿರ್ಮಲ ಭಾರತ್ ತುಂಗಭದ್ರಾ ಅಭಿಯಾನಕ್ಕೆ ವಿಕಲ ಚೇತನರ ಒಕ್ಕೂಟ ಬೆಂಬಲ..

ಗಂಗಾವತಿ: ನಗರದ ಲಯನ್ಸ್ ಕ್ಲಬ್ ಆವರಣದಲ್ಲಿ ನಿರ್ಮಲ ಭಾರತ್ ತುಂಗಭದ್ರಾ ಅಭಿಯಾನಕ್ಕೆ ವಿಕಲ ಚೇತನರ ಸಂಘ-ಸಂಸ್ಥೆಗಳ ಒಕ್ಕೂಟ ವತಿಯಿಂದ ಅಭಿಯಾನಕ್ಕೆ ಬೆಂಬಲ ನೀಡಲಾಯಿತು. ವಿಕಲ ಚೇತನರ ಸಂಘಟನೆಗಳಿಂದ ಅಭಿಯಾನಕ್ಕೆ ಎಲ್ಲಾ ವಿಕಲಚೇತನರು ಈ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುತ್ತೇವೆಂದು ಮತ್ತು ತುಂಗಭದ್ರಾ ಅಭಿಯಾನ ಸ್ವಚ್ಛತೆಗಾಗಿ ನಾವು ಸಹ ಬೆಂಬಲ ನೀಡಿದ್ದೇವೆ ಎಂದು ವಿಕಲಚೇತನ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಪದಾಧಿಕಾರಿಗಳ ಪ್ರಮುಖ ಮುಖಂಡ ಮಂಜುನಾಥ ಹೊಸಕೇರಿ ಮಾತನಾಡಿ, ನಮ್ಮ ನಾಡಿನಲ್ಲಿ ನದಿಗಳನ್ನು ದೈವಿ ಸ್ವರೂಪಗಳೆಂದು ಕರೆಯುತ್ತೇವೆ ಮತ್ತು ಆರಾಧಿಸುತ್ತೇವೆ ಇಂದು ಅವುಗಳ ಸ್ಥಿತಿ ಚಿಂತಾ ಜನಕವಾಗಿದೆ ಮುಂದಿನ ಯುವ ಪೀಳಿಗೆಗೆ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ತುಂಗಭದ್ರ ನದಿಗೆ ತ್ಯಾಜ್ಯವನ್ನು ಹರಿಸದಂತೆ ಸಾರ್ವಜನಿಕರು ಗಮನ ಹರಿಸಬೇಕಾಗಿದೆ ಮತ್ತು ಸರ್ಕಾರ ಇದಕ್ಕೆ ಪ್ರತ್ಯೇಕವಾದ ಕಾನೂನಿನಲ್ಲಿ ತಿದ್ದುಪಡಿ ತರಬೇಕಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ನಿರ್ಮಲ್ ಭಾರತ್ ಅಭಿಯಾನದ ಪ್ರಮುಖರಾದ ಡಾ:ಶಿವಕುಮಾರ್ ಮಾಲಿ ಪಾಟೀಲ್, ಮಹಮ್ಮದ್ ರಫಿ ಶ್ರೀ ರಾಮನಗರ, ರಾಕೇಶ್, ರಾಮಕೃಷ್ಣ, ರಾಘವೇಂದ್ರ, ವಿಕಲಚೇತನರ ಸಂಘಟನೆ ಅಧ್ಯಕ್ಷರಾದ ಮಂಜುನಾಥ ಹೊಸಕೇರಾ, ತಾಲೂಕ ಅಧ್ಯಕ್ಷರಾದ ಹುಲುಗಪ್ಪ ಕಾಗೇರಿ, ಪಾಲಕರ ಒಕ್ಕೂಟದ ತಾಲೂಕ ಅಧ್ಯಕ್ಷರಾದ ಬಸವರಾಜ್ ಗೋನಾಳ, ಕರವೇ ವಿಕಲಚೇತನರ ವಿಭಾಗದ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ, ವಿಕಲಚೇತನರ ಒಕ್ಕೂಟದ ಪದಾಧಿಕಾರಿಗಳಾದ ಶರಣಯ್ಯ ಸ್ವಾಮಿ ಕರಡಿಮಠ,ರಾಘವೇಂದ್ರ ಸಿದ್ದಿಕೇರಿ, ನಾಗರಾಜ ರೇವಣಕರ್, ಶೇಕ್ಷವಲಿ, ಉಮೇಶ್ ಕಲ್ಮನಿ, ಜಂಬೂನಾಥ ಮರಳಿ, ವೆಂಕೋಬ, ಯಮನಮ್ಮ, ಭುವನೇಶ್ವರಿ, ಸರಸ್ವತಿ, ಶಾಮಿಯಾ ಸೇರಿದಂತೆ ಇನ್ನು ಮುಂತಾದ ವಿಕಲಚೇತನರು ಈ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
