ಸಮತಾ ರಾಜ್ಯದ ಕನಸುಗಳೊಂದಿಗೆ..ಶ್ರಮ ಶಕ್ತಿಯ ಸಂಘರ್ಷದ ಶತಮಾನದ ಪಯಣ.

ಸಮತಾ ರಾಜ್ಯದ ಕನಸುಗಳೊಂದಿಗೆ..ಶ್ರಮ ಶಕ್ತಿಯ ಸಂಘರ್ಷದ ಶತಮಾನದ ಪಯಣ.

ಭಾರತ ಕಮ್ಯುನಿಸ್ಟ್ ಪಕ್ಷ ಭಾರತದ ದುಡಿಯುವ ಜನರ ಮೊಟ್ಟ ಮೊದಲ ರಾಜಕೀಯ ಪಕ್ಷ ದೇಶ ಜಮೀನ್ದಾರೀ, ಸಾಮ್ರಾಜ್ಯಶಾಹಿ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಬಳಲುತ್ತಿದ್ದಾಗ 1925ರಲ್ಲಿಯೇ ಭಾರತ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾಯಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್, ಪೋರ್ಚುಗೀಸ್, ಫ್ರೆಂಚ್ ಸಾಮ್ರಾಜ್ಯಶಾಹಿಗಳ ವಿರುದ್ಧ ಮತ್ತು ಅವರ ಜೊತೆ ಕೈಜೋಡಿಸಿದ್ದ ಭಾರತದ ಬಂಡವಾಳಶಾಹಿಗಳ ಮತ್ತು ಪಾಳೇಗಾರರ ವಿರುದ್ಧ ನಿರಂತರ ಹೋರಾಟವನ್ನು ಭಾರತ ಕಮ್ಯುನಿಸ್ಟ್ ಪಕ್ಷ ನಡೆಸಿತು. ಕರ್ನಾಟಕದ ಕಯ್ಯರು ರೈತ ಹೋರಾಟ, ಚಿತ್ತಗಾಂಗನ ಹೋರಾಟ, ತೆಲಂಗಾಣ ಸಶಸ್ತ್ರ ರೈತ ಹೋರಾಟ, ಪುನ್ನಪ್ರವಯಲಾರ್ ಸಮರ, ತೇಭಾಗ ರೈತ ಚಳುವಳಿ, ರಾಯಲ್ ಇಂಡಿಯನ್ ನೌಕಾ ಬಂಡಾಯ, ಗೋವಾ ವಿಮೋಚನಾ ಚಳುವಳಿ, ಪುದುಚೇರಿ ಸ್ವಾತಂತ್ರ್ಯ ಹೋರಾಟ ಇಂತಹ ನೂರಾರು ಹೋರಾಟಗಳಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಸಾವಿರಾರು ನಾಯಕರು, ಸದಸ್ಯರು ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಜೈಲುವಾಸ ಅನುಭವಿಸಿದ್ದಾರೆ. ಭೂಗತವಾಗಿ ಸಾಮ್ರಾಜ್ಯಶಾಹಿ ಹಾಗೂ ಅವರ ಗುಲಾಮಿ ಜಮೀನ್ದಾರ, ಪಾಳೇಗಾರರ, ಬಂಡವಾಳಗಾರರ ವಿರುದ್ಧ ಹೋರಾಡಿ ಭಾರತದ ಸ್ವಾತಂತ್ರ್ಯಕ್ಕಾಗಿ, ಬಡವರಿಗೆ, ರೈತ, ಕಾರ್ಮಿಕರಿಗೆ, ಸಾಮಾನ್ಯ ಜನರಿಗೆ ಸ್ವಾತಂತ್ರ್ಯ ಲಭಿಸಲು ನಿರಂತರವಾಗಿ ಶ್ರಮಿಸಿದ್ದಾರೆ. ಸ್ವಾತಂತ್ರ್ಯ ನಂತರವೂ ಪಡೆದ ಸ್ವಾತಂತ್ರ್ಯವನ್ನು ಜನಸಾಮಾನ್ಯರಿಗೆ ತಲುಪಿಸಲು ಜಾತಿಯಿಲ್ಲದ, ಮತಧರ್ಮಗಳ ಸಂಘರ್ಷವಿಲ್ಲದ, ಮೇಲುಕೀಳುಗಳಿಲ್ಲದ, ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಜೊತೆಗೆ ಸಮತಾ ರಾಜ್ಯದ ಕನಸುಗಳೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷ ನಡೆಸುತ್ತಿರುವ ಸಮರ ಶೀಲ ಹೋರಾಟ ಈ ಡಿಸೆಂಬರ್ 26, 2025ಕ್ಕೆ 100 ವರ್ಷ ಪೂರೈಸುತ್ತಿದೆ. ಹಿನ್ನೆಲೆಯಲ್ಲಿ ಸರಿ ಜಾತವು ಗಂಗಾವತಿ ನಗರಕ್ಕೆ ಆಗಮಿಸಿತು. ಕರ್ನಾಟಕ ರಾಜ್ಯದಾದ್ಯಂತ ಈ ಜಾಥಾ ನಡೆಸುತ್ತಿದ ಸಮತಾ ನಡಿಗೆ ಶ್ರೀ ಸಾಯಿಬಾಬಾ ದೇವಸ್ಥಾನದಿಂದ ಡಾಕ್ಟರ್ ಜಗಜೀವನ್ ರಾವ್ ಸರ್ಕಲ್ ಆಗಮಿಸಿ ಸಭೆ ನಡೆಸಲಾಯಿತು ಈ ಸಂದರ್ಭದಲ್ಲಿ ಸಿಪಿಐ ಎಎಲ್ ತಿಮ್ಮಣ್ಣ ಜಿಲ್ಲಾ ಕಾರ್ಯದರ್ಶಿಗಳು ಜಿಲ್ಲಾ ಅಧ್ಯಕ್ಷ ಏ ಹುಲ ಗಪ್ಪ. ಶೇಖಮ್ಮ. ಸೇರಿದಂತೆ ಸಿ ಪಿ ರಾಜ್ಯ ಮಂಡಳಿಯ ರಾಜ್ಯ ಕಾರ್ಯದರ್ಶಿ ಸಹ ಕಾರ್ಯದರ್ಶಿ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *