ಕಂಪ್ಲಿ ವಾಯುವಿಹಾರ ಬಳಗದ ಅಧ್ಯಕ್ಷರಾಗಿ ಸಿ.ಪುಲ್ಲಯ್ಯ ಅವಿರೋಧ ಆಯ್ಕೆ.

ಬಳ್ಳಾರಿ / ಕಂಪ್ಲಿ : ಪಟ್ಟಣದ ಪ್ರತಿಷ್ಠಿತ ವಾಯುವಿಹಾರ ಬಳಗದ ಅಧ್ಯಕ್ಷರಾಗಿ ಸಿ.ಪುಲ್ಲಯ್ಯ ಅವಿರೋಧವಾಗಿ ಆಯ್ಕೆಯಾದರು.ತಾಲ್ಲೂಕಿನ ರಾಮಸಾಗರ ಹೊರವಲಯದ ಪಂಪಾವಿದ್ಯಾಪೀಠದ ಹತ್ತಿರದಲ್ಲಿರುವ ತುಂಗಭದ್ರಾ ರಿವರ್ ವೀವ್ ರೆಸಾರ್ಟ್ ನಲ್ಲಿ ಮಂಗಳವಾರ ನಡೆದ ವಾಯುವಿಹಾರ ಬಳಗದ ಸರ್ವ ಸದಸ್ಯರ ಸಭೆಯಲ್ಲಿ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಬಳಗದ ಹಿರಿಯ ಸದಸ್ಯ ನರಶೆಟ್ಟಿ ಕೊಂಡಯ್ಯ ವಹಿಸಿದ್ದರು. ಬಳಗದ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರನ್ನಾಗಿ ಸತತ ೫ನೇ ಬಾರಿಗೆ ಸಿ.ಪುಲ್ಲಯ್ಯನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇನ್ನುಳಿದ ಪದಾಧಿಕಾರಿಗಳನ್ನು ನಂತರ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.ಹಿರಿಯ ವರದಿಗಾರ ಜಿ.ಚಂದ್ರಶೇಖರಗೌಡ ಮಾತನಾಡಿ, ಕಳೆದ ಹಲವು ವರ್ಷಗಳಿಂದ ವಾಯುವಿಹಾರ ಬಳಗವು ಪಟ್ಟಣದಲ್ಲಿ ಹತ್ತು ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಕೇವಲ ತಾವು ಮಾತ್ರ ಪ್ರತಿದಿನ ವಾಯುವಿಹಾರ ಮಾಡದೇ ಹಲವಾರು ಜನರಿಗೆ ಮಾರ್ಗದರ್ಶನ ಮಾಡುತ್ತಿರುವುದರ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ತಮ್ಮೊಂದಿಗೆ ಕುಟುಂಬದ ಸದಸ್ಯರಿಗೂ ಸಹಿತ ಉತ್ತಮ ಆರೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುತ್ತಿದೆ ಎಂದರು.ನಂತರ ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಟ್ಟ ಪ್ರಸಾದ್, ಸದಸ್ಯರಾದ ಎಸ್.ಎಂ.ನಾಗರಾಜಸ್ವಾಮಿ, ಡಾ.ವಿ.ಎಲ್.ಬಾಬು, ಬಳಗದ ಸದಸ್ಯರಾದ ವೀರಯ್ಯಸ್ವಾಮಿ ಸಾಲಿಮಠ, ಪ್ರಸಾದ್ ಗಡಾದ, ವೀರಾರೆಡ್ಡಿ,ಯಣ್ಣಿ ವೆಂಕಟೇಶ್, ಡಿ.ಕೆ.ಜಂಬಣ್ಣ, ಪಿ.ವೆಂಕಟೇಶ್, ಗರಡಿ ವಿರೂಪಾಕ್ಷಿ, ಚನ್ನಬಸವರಾಜ, ಮಹೇಂದ್ರ ಜೈನ್, ಹೀರಾಚಂದ್, ಹೊನ್ನೂರುಸಾಬ್, ಹರಿನಾಥ್ ಚಕ್ರಿಣಿ,ಸುರೇಶ್, ಮಾಧವರೆಡ್ಡಿ,ರಮೇಶ್ ರೆಡ್ಡಿ,ಶಿವರಾಮಪ್ರಸಾದ್,ಮುಖಂಡರಾದ ಜಿ.ಸತ್ತನಾರಾಣಬಾಬು, ಗನಿಸಾಬ್,ಶಾಂತಿಲಾಲ್ ಜೈನ್ ಸಿಂಘ್ವಿ, ಸೇರಿದಂತೆ ಇತರರು ಇದ್ದರು.ವರದಿ : ಜಿಲಾನಸಾಬ್ ಬಡಿಗೇರ್
