ದಲಿತ ವಿಮೋಚನಾ ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರದಂದು ಸಂವಿಧಾನ ಸಭಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಸಮಾವೇಶ…

ಗಂಗಾವತಿ. ನವಂಬರ್ 26 ಸಂವಿಧಾನ ಸಮರ್ಪಣಾ ದಿನಾಚರಣೆ ಪ್ರಯುಕ್ತ ಶುಕ್ರವಾರದಂದು ದಲಿತ ವಿಮೋಚನಾ ಸೇನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಸಮಾವೇಶವನ್ನು ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸೇನೆಯ ರಾಜ್ಯ ಉಪಾಧ್ಯಕ್ಷ ಎಸ್ ದುರ್ಗಪ್ಪ. ಜಿಲ್ಲಾ ಪ್ರಧಾನ ಜಿಲ್ಲಾಕಾರ್ಯದರ್ಶಿ ಹುಲುಗಪ್ಪ ಟೀ ಪುಡಿ ಹೇಳಿದರು. ಅವರು ಗುರುವಾರದಂದು ಶ್ರೀ ಕೃಷ್ಣದೇವರಾಯ ಕಲಾಭವನದ ಮುಂದೆ ಅನಂತಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿ. ದೇಶಕ್ಕೆ ಬೃಹತ್ ಸಂವಿಧಾನವನ್ನು ಕಲ್ಪಿಸಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನ ಅರ್ಪಣೆ ಪ್ರಯುಕ್ತ ಜಿಲ್ಲಾ ಸಮಾವೇಶವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ವೃತ್ತದಿಂದ ಆರಂಭಗೊಂಡು ಬಳಿಕ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಉದ್ಘಾಟಿಸಲಿದ್ದು ಗಂಗಾವತಿಯ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಜ್ಯೋತಿ ಬೆಳಗಿಸುವರು. ಸಂಸ್ಥಾಪಕ ರಾಜ್ಯಾಧ್ಯಕ್ಷರು ದಲಿತ ವಿಮೋಚನ ಸೇನೆ ಬೆಂಗಳೂರು ಮಾ. ಮುನಿರಾಜ್ ಪಲಿಸಲಿದ್ದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹಾಗೂ ಪ್ರೊಫೆಸರ್ ಬಿ ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯ ಮೂಲಕ ಸಭಾರಂಬ ಚಾಲನೆ ಯನ್ನು ಕೊಪ್ಪಳದ ಸಂಸದ ರಾಜಶೇಖರ್ ಹಿಟ್ನಾಳ್ ನಡೆಸುವರು.. ಅತಿಥಿಗಳಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರುಗಳು ಮಾಜಿ ಸಚಿವರು ಮಾಜಿ ಶಾಸಕರು ವಿವಿಧ ಪಕ್ಷದ ಮುಖಂಡರು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ವಾಣಿಜ್ಯೋದ್ಯಮಿಗಳು ಜಿಲ್ಲಾ ಮಟ್ಟದ ಅಧಿಕಾರಿ ವರ್ಗದವರು ತಹಸೀಲ್ದಾರರು ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿ ವರ್ಗದವರು ಸೇರಿದಂತೆ ಸೀನಿಯ ಪದಾಧಿಕಾರಿಗಳು ಸೇನೆಯ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕ ಘಟಕದ ಅಧ್ಯಕ್ಷ ಸದಸ್ಯರು ಭಾಗವಹಿಸಲಿದ್ದು. ಸಮಾವೇಶದಲ್ಲಿ ಪ್ರಸ್ತುತ ದಿನಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊಲೆ ಸುಲಿಗೆ ಅತ್ಯಾಚಾರ. ಮತ್ತೆ ತರ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

