ಹೆಮ್ಮೆಯ ಅಧಿಕಾರಿ ಮಹಾಂತೇಶ್ ಬೀಳಗಿ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ..

ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 26.11.2025ರಂದು ಹೆಮ್ಮೆಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿರವರು ಅಪಘಾತಕ್ಕೆ ತುತ್ತಾಗಿ ಆಕಸ್ಮಿಕ ಮರಣ ಹೊಂದಿದ್ದರಿಂದ ಕಾಲೇಜಿನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು ಆ ಅಮರ ಚೇತನವನ್ನು ನೆನೆದು ಒಂದು ನಿಮಿಷ ಮೌನಾಚರಣೆಯನ್ನು ಸಲ್ಲಿಸಲಾಯಿತು. ತದನಂತರ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕರಿಗೂಳಿಯವರು ದೇಶ ಕಂಡ ಹಾಗೂ ಕರ್ನಾಟಕದ ಶ್ರೇಷ್ಠ ಅಧಿಕಾರಿಗಳಲ್ಲೊಬ್ಬರು ಎಂದರು , ದಾವಣಗೆರೆ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಿಗೆ ಅವರ ಕರ್ತವ್ಯ ಪರತೆಯನ್ನು ಹಾಗೂ ಅವರ ನಿಷ್ಠೆ ಎಂಥದ್ದೆಂದು ತಿಳಿಸಿದರು ಹಾಗೂ ಜೀವನದಲ್ಲಿ ಹಲವಾರು ಕಷ್ಟಗಳಿಂದ ಹೋರಾಡಿ ದೇಶದ ನಾಗರೀಕ ಸೇವೆಯ ಉನ್ನತ ಹುದ್ದೆಗೆ ಆಯ್ಕೆಯಾದ ಅವರು ಸಾವಿರಾರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಂತಿದ್ದವರು ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥಿಸಿದರು ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ ರವರು ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಅಧ್ಯಾಪಕಾರದಡಾ.ಸರಫರಾಜ್ ಅಹಮದ್ ರವರು, ಡಾ. ಶಶಿಕುಮಾರ ಹಾಗೂ ಸಹಾಯಕ ವಿರುಪಾಕ್ಷ ಕೆ, ಉಪನ್ಯಾಸಕರಾದ ಈಶಪ್ಪ ಮೇಟಿ, ಶ್ರೀಮತಿ ರಾಧಾ ಆಡಳಿತ ಸಿಬ್ಬಂದಿಯವರಾದ ಜಬೀನಾ, ವಿನಾಯಕ ಸಿಬ್ಬಂದಿಯಾದ ಶಾಂತಿ, ಚಿನ್ನ ವರಪ್ರಸಾದ್, ಶರಣಬಸವ ಹಾಜರಿದ್ದರು.

