ಕುಡತಿನಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಹಣಕಾಸು ಇಲಾಖೆ ಅನುಮತಿ ನೀಡದಿರುವುದರಿಂದ ಸೂಕ್ತ ಕ್ರಮಕೈಗೊಂಡು ಸದರಿ ಪ್ರಸ್ತಾವನೆ ಅಂಶ ಪುನಃ ಮುಂದುವರಿಸುವಂತೆ ಸಂಸದ ಈ.ತುಕಾರಾಂಗೆ ಮನವಿ..

ಕುಡತಿನಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಹಣಕಾಸು ಇಲಾಖೆ ಅನುಮತಿ ನೀಡದಿರುವುದರಿಂದ ಸೂಕ್ತ ಕ್ರಮಕೈಗೊಂಡು ಸದರಿ ಪ್ರಸ್ತಾವನೆ ಅಂಶ ಪುನಃ ಮುಂದುವರಿಸುವಂತೆ ಸಂಸದ ಈ.ತುಕಾರಾಂಗೆ ಮನವಿ..

ಬಳ್ಳಾರಿ / ಕಂಪ್ಲಿ: ಕುಡತಿನಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಹಣಕಾಸು ಇಲಾಖೆ ಅನುಮತಿ ನೀಡದಿರುವುದರಿಂದ ಸೂಕ್ತ ಕ್ರಮಕೈಗೊಂಡು ಸದರಿ ಪ್ರಸ್ತಾವನೆ ಅಂಶ ಪುನಃ ಮುಂದುವರಿಸುಂತೆ ಆಗ್ರಹಿಸಿ, ಕುಡತಿನಿ ಪಟ್ಟಣದ ನಿವಾಸಿಗಳು ಸಂಡೂರಿನ ಸಂಸದರ ಕಛೇರಿಯಲ್ಲಿ ಸಂಸದ ಈ.ತುಕಾರಾಂ ಇವರಿಗೆ ಮನವಿ ಸಲ್ಲಿಸಿದರು.ನಂತರ ಮುಖಂಡ ಟಿ.ಕೆ.ಕಾಮೇಶ ಮಾತನಾಡಿ, ಕುಡತಿನಿ ಪಟ್ಟಣವು ಮೂವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಮತ್ತು ಹತ್ತಾರು ಹಳ್ಳಿಗಳ ಕೇಂದ್ರ ಸ್ಥಾನವಾಗಿದೆ, ಕುಡತಿನಿ ಪಟ್ಟಣದ ಸುತ್ತಮುತ್ತ ವಿದ್ಯುತ್ ಉತ್ಪಾದನೆ, ಕಬ್ಬಿಣ ಹಾಗೂ ಮೆದು ಕಬ್ಬಿಣ ಉತ್ಪಾದನೆಯ ಹಲವಾರು ಕಾರ್ಖಾನೆಗಳು ಪ್ರಾರಂಭಗೊಂಡಿವೆ, ಇವುಗಳಿಂದ ಹೊರಬಿಡುವ ವಿಷ ಅನಿಲ, ಕಪ್ಪು ಧೂಳು ಕುಡತಿನಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಅಸ್ತಮಾ, ಕ್ಷಯ, ಕ್ಯಾನ್ಸರ್, ಗರ್ಭ ಕೋಶ ಸಮಸ್ಯೆ, ಚರ್ಮ ರೋಗ ಇತರೆ ಹಲವಾರು ಭಯಾನಕ ರೋಗಗಳು ಹರಡುತ್ತಿವೆ. ಇಂತಹ ರೋಗಗಳಿಗೆ ಚಿಕಿತ್ಸೆ ಪಡೆಯಲು ಹೆಚ್ಚಿನ ರೈತರು, ಕೂಲಿ ಕಾರ್ಮಿಕರು, ಕಾರ್ಖಾನೆಗಳ ಕಾರ್ಮಿಕರು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ಗಾಯಗೊಂಡರು ಚಿಕಿತ್ಸೆ ಪಡೆಯಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕುಡತಿನಿಗೆ ಆಗಮಿಸುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಕೂಲಿ ಕೆಲಸದಿಂದ ಜೀವನ ಮಾಡುವುದೇ ಅತ್ಯಂತ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೋಗಗಳ ನಿವಾರಣೆಗೆ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಚಿಕಿತ್ಸೆ ಪಡೆಯಲಾಗದೇ ರೋಗಗಳಿಂದ ನರಳಿ ನರಳಿ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಸ್ತಾವನೆ ಅಂಶದ ಅವಶ್ಯಕತೆ ಬಗ್ಗೆ ಹಣಕಾಸು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವಿಸ್ತ್ರತವಾಗಿ ತಿಳಿಸಿ, ಪ್ರಸ್ತಾವನೆ ಅಂಶವನ್ನು ಮರು ಮಂಜೂರು ಮಾಡಿಸಿ, ಈ ಭಾಗದ ಹಳ್ಳಿಗಳ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಿ ಅವರ ಪ್ರಾಣ ಉಳಿಸಲು ಕೂಡಲೇ ಆಸ್ಪತ್ರೆಗೆ ಮೀಸಲಿರುವ 6-39 ಎಕರೆ ಜಮೀನಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪ್ರಾರಂಭಿಸಿ, ಶೀಘ್ರವಾಗಿ ಪೂರ್ಣಗೊಳಿಸಿ ಉತ್ತಮ ಸೌಲಭ್ಯಗಳೊಂದಿಗೆ ಸೂಕ್ತ ಚಿಕಿತ್ಸೆ ನೀಡಿ ರೋಗಿಗಳ ಪ್ರಾಣ ಉಳಿಯಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಸಂತಕುಮಾರ, ತಿಪ್ಪೇಸ್ವಾಮಿ, ತಿಮ್ಮಪ್ಪ, ಮನೋಜ್, ಹನುಮಂತಪ್ಪ ಸೇರಿದಂತೆ ಇತರರು ಇದ್ದರು.ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *