ಛಟ್ಟಿ ಅಮಾವಾಸ್ಯೆ (ಕೊನೆಯ ಕಾರ್ತಿಕ) ಯ ಪ್ರಯುಕ್ತ ಸಣಾಪುರದ ಉದ್ಬವ ವೀರಭದ್ರೇಶ್ವರಿನಿಗೆ ವಿಶೇಷ ಪೂಜೆ.

ಬಳ್ಳಾರಿ / ಕಂಪ್ಲಿ: ಛಟ್ಟಿ ಅಮಾವಾಸ್ಯೆ (ಕೊನೆಯ ಕಾರ್ತಿಕ) ಯ ಪ್ರಯುಕ್ತ ತಾಲ್ಲೂಕಿನ ಸಣಾಪುರ ಗ್ರಾಮದ ಉದ್ಬವ ವೀರಭದ್ರೇಶ್ವರ ಸ್ವಾಮಿಗೆ ವಿವಿಧ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಕ್ತರಿಂದ ದೀಪ ಹಚ್ಚುವುದು, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಬೆಳಿಗ್ಗೆ ಉದ್ಬವ ವೀರಭದ್ರೇಶ್ವರನ ಉದ್ಬವ ಶಿಲಾಮೂರ್ತಿಗೆ ಪಂಚಾಮೃತ, ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳು, ಜರುಗಿದವು. ನಂತರ ಸ್ವಾಮಿಗೆ ಚಿನ್ನ, ಬೆಳ್ಳಿ ಆಭರಣಗಳಿಂದ, ಹಾಗೂ ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನಡೆಸಿದರು. ತಾಲ್ಲೂಕು ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸ್ವಾಮಿಯ ಸಕಲ ಸದ್ಭಕ್ತರು ದೇವಸ್ಥಾನದ ಆವರಣದಲ್ಲಿ ತಮ್ಮ ಹರಕೆಯಂತೆ ದೀಪಗಳನ್ನು ಬೆಳಗಿದರು. ಅಮಾವಾಸ್ಯೆಯ ಪ್ರಯುಕ್ತ ದೇವಸ್ತಾನದಲ್ಲಿ ಪುಷ್ಪ ಕಾಗಲ್ಕರ್ ಕುಟುಂಬದವರು ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು.ಇಂದಿನ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಮುಖಂಡರು, ಯುವಕ ಸಂಘದ ಪದಾಧಿಕರಿಗಳು ಸದ್ಭಕ್ತರು ಭಾಗವಹಿಸಿದ್ದರು. ಸಂಜೆ ದೇವಸ್ಥಾನದ ಪ್ರಾಂಗಣದಲ್ಲಿ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಇಟ್ಟು ಕಿರು ರತೋತ್ಸವವನ್ನು ನಡೆಸಿದರು.

ವರದಿ : ಜಿಲಾನಸಾಬ್ ಬಡಿಗೇರ್
