ಎಬಿವಿಪಿ ಉತ್ತರ ರಾಜ್ಯ ಕಾರ್ಯಕಾರಿಣಿ ಸಭೆ ಯಶಸ್ವಿಸರಕಾರಿ ಶಾಲೆಗಳ ಸ್ಥಿತಿ ಸರಿಪಡಿಸಿ: ಖಾಲಿ ಹುದ್ದೆ ಭರ್ತಿ ಮಾಡಿ: ಎಬಿವಿಪಿ ಅಗ್ರಹ…

ಗಂಗಾವತಿ: ರಾಜ್ಯ ಸರಕಾರದ ಅಸಮರ್ಪಕ ನಿರ್ವಹಣೆ ಆರ್ಥಿಕ ಸಹಕಾರ ನೀಡದ ಕಾರಣ ರಾಜ್ಯದ ಸರಕಾರಿ ಶಾಲಾ ಕಾಲೇಜುಗಳು, ವಿವಿಗಳು ಶೋಚನೀಯ ಸ್ಥಿತಿ ತಲುಪಿದ್ದು, ದುಬಾರಿ ಶುಲ್ಕ, ಸ್ಕಾಲರ್ಶಿಪ್ ವಿಳಂಬ ಹಾಗು ಹಾಸ್ಟೇಲ್ಗಳಿಗೆ ಸರಿಯಾಗಿ ಕಿಟ್ ಇತರೆ ತಲುಪಿಸದ ಕಾರಣ ಶೈಕ್ಷಣಿಕ ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತಿದ್ದು, ಸರಕಾರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಅಗ್ರಹಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ರೈತರ ಬೆಳಗಳಿಗೆ ಸೂಕ್ತ ಬೆಲೆ, ಸೈಬರ್ ಭದ್ರತೆ ಇತರೆ ಶೈಕ್ಷಣಿಕ ಪ್ರಗತಿಗೆ ಅಗತ್ಯ ಅಂಶಗಳನ್ನು ನಗರದಲ್ಲಿ ನಡೆದ ಎಬಿವಿಪಿ ಉತ್ತರ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ರಾಜ್ಯ ಸರಕಾರದ ಹೊಣಗೇಡಿತನ ಕಣ್ಣಿಗೆ ರಾಚುತ್ತಿದೆ, ರಾಜ್ಯದ ಶಾಲಾ ಕಾಲೇಜುಗಳ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಸಿಬ್ಬಂದಿ ಇಲ್ಲ, ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ವಿದ್ಯಾರ್ಥಿ ವೇತನ ವಿನಾಯಿತಿ ಇಲ್ಲ, ವಿದ್ಯಾಸಿರಿ, ರೈತ ವಿದ್ಯಾನಿಧಿ, ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಮಕ್ಕಳಿಗೆ ತಲುಪುತ್ತಿಲ್ಲ ಎಂದು ಕಿಡಿಕಾರಿದರು.ರಾಜ್ಯದ ವಿಶ್ವವಿದ್ಯಾಲಯಗಳ ಅವೈಜ್ಞಾನಿಕ ಪರೀಕ್ಷಾ ಕ್ರಮ, ಕಳಪೆ ನಿರ್ವಹಣೆಯಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಎದರಿಸುವಂತಾಗಿದೆ, ರಾಜ್ಯದಾದ್ಯಂತ ಏಕರೂಪ ಪರೀಕ್ಷಾ ಮಾದರಿಗೆ ಒತ್ತಡ ಹೇರಲಾಗುತ್ತಿದೆ ಸರಕಾರ ಗಂಭೀರವಾಗಿ ನಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಈ ಕುರಿತಂತೆ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಎಬಿವಿಪಿಯಲ್ಲಿ ಒಟ್ಟು ೨೭೩೮೧೨ ಸದಸ್ಯರಿದ್ದು, ೧೧೮ ಶಾಖೆಗಳು, ೧೮೨ ಸಂಪರ್ಕ ಸ್ಥಾನಗಳಲ್ಲಿ, ೪೪೬ ಕಾಲೇಜು ಕಮಿಟಿ, ೭೮ ಹಾಸ್ಟೇಲ್ ಸಮಿತಿಯ ಮೂಲಕ ಎಬಿವಿಪಿ ಕಾರ್ಯಚಟುವಟಿಕೆ ನಡೆಯುತ್ತಿದ್ದು, ಗಂಗಾವತಿಯಲ್ಲಿ ನವೆಂಬರ್ ೧೫ ಮತ್ತು ೧೬ ರಂದು ರಾಜ್ಯ ಕಾರ್ಯಕಾರಿಣಿ ಸಭೆ ಜರುಗಿದ್ದು ಒಟ್ಟು ರಾಜ್ಯದಾದ್ಯಂತ ೮೬ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಅವರು ವಿವರಿಸಿದರು.ಗೋಷ್ಟಿಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳಾದ ಅಭಿಷೇಕ್, ಹಿರೇಮಠ ಕಿರಣ್ ವಸ್ತçದ್, ಶ್ರೇಯಾ, ಇದ್ದರು.
