ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸೌಲಭ್ಯವನ್ನು ಒದಗಿಸಿ ರೈತ ಸಂಘ ಮತ್ತು ಕೆ.ಡಿ.ಎಸ್.ಎಸ್ ಸಂಘಟನೆಯಿಂದ ಆಗ್ರಹ.

ಗಂಗಾವತಿ: ತಾಲೂಕಿನ ಚಿಕ್ಕ ರಾಂಪುರದ ಅಂಜನಾದ್ರಿ ಬೆಟ್ಟಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಬರುವ ಭಕ್ತರಿಗೆ ಸರಿಯಾದ ರೀತಿಯಲ್ಲಿ ಶೌಚಾಲಯ. ಉಳಿದುಕೊಳ್ಳಲು ವಸತಿ ವ್ಯವಸ್ಥೆ. ಮತ್ತು ದೇವಸ್ಥಾನದಲ್ಲಿ ಮಂಗಳಾರತಿ, ಕಾಯಿ ಹೊಡೆಯುವ ಸ್ಥಳ ಸ್ವಚ್ಛತೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ದೂರದಿಂದ ಬರುವ ಭಕ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕೆಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಹೇಳಿದರು. ಅವರು ಶನಿವಾರದಂದು ಅಂಜನಾದ್ರಿ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಸ್ಥಾಪಿತ ವಿಭಾಗೀಯ ಸಂಚಾಲಕ ಹಂಪೇಶ ಹರಿಗೋಲ.ಕಿಸ್ಕಿಂದೆ ಶ್ರೀ ರಾಮಾಯಣದಲ್ಲಿ ಉಲ್ಲೇಖದ ಪ್ರಕಾರ ಗಂಗಾವತಿ ತಾಲೂಕಿನ ಸುಪ್ರಸಿದ್ಧ ಸ್ಥಳವಾದ ಅಂಜನಾದ್ರಿ ಜೊತೆಗೆ ಇತಿಹಾಸವುಳ್ಳ ಅಂಜನಾದ್ರಿ ಬೆಟ್ಟದ ಬಗ್ಗೆ ಹಲವಾರು ತಿಂಗಳಿಂದ ನಮ್ಮ ಸಂಘಟನೆಯಿಂದ ಪ್ರಸಿದ್ಧವಾಗಿರುವ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸೌಲಭ್ಯಗಳನ್ನು ಕೇಳುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಸರಿಯಾದ ಉತ್ತರ ಕೊಡದೆ ಕೇವಲ ಮಂಗಳಾರತಿ ತಟ್ಟೆ ಬಗ್ಗೆ ವಾದ.ವಿವಾದ ನಡಿತಿದೆ ಹೊರತು ನೆರೆಯ ರಾಜ್ಯ ಮತ್ತು ವಿವಿಧ ರಾಷ್ಟ್ರಗಳಿಂದ ಬರುವ ಭಕ್ತರಿಗೆ ಇಲ್ಲಿ ಯಾವುದೇ ಸರಿಯಾದ ಸೌಲಭ್ಯ ಇಲ್ಲ. ಜೊತೆಗೆ ಬಹಳ ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮತ್ತು ಸರ್ಕಾರ ಕೇವಲ ಹುಂಡಿಯ ಹಣಕ್ಕಾಗಿಯೇ ಲಾಭಿ ನಡೆಸುತ್ತಿದೆ ಹೊರತು ಸನಾತನ ಧರ್ಮ ಮತ್ತು ಐತಿಹಾಸಿಕ ಸ್ಥಳ ಕಿಸ್ಕಿಂದ ಬಗ್ಗೆ ಅಭಿವೃದ್ಧಿ ಚಿಂತನ ನಡೆಸುತ್ತಿಲ್ಲ.ಹೀಗಾದರೆ ಸ್ಥಳೀಯ ಮತ್ತು ಹೊರ ರಾಜ್ಯ ಹೊರದೇಶಗಳಿಂದ ಬರುವ ಭಕ್ತರಿಗೆ ಸೌಲಭ್ಯ ಏನು ಮಾಡಿಲ್ಲವೆಂದು ಹೇಳಿದರು. ಭಾರತೀಯ ಪ್ರಜಾ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಂಪಾಪತಿ ಸಿದ್ದಾಪುರ ಮಾತನಾಡಿ ಸಂವಿಧಾನದ ಪ್ರಕಾರ ಇತಿಹಾಸವುಳ್ಳ ಪ್ರಸಿದ್ಧ ದೇವಸ್ಥಾನಗಳನ್ನು ಮೊದಲು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಬರುವ ಭಕ್ತರಿಗೆ ಎಲ್ಲಾ ಸೌಲಭ್ಯವನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಜೊತೆಗೆ ಅಭಿವೃದ್ಧಿ ಪಡಿಸುವುದು ರಾಜ್ಯ.ಹೊರರಾಜ್ಯ ದೇಶ.ವಿದೇಶಗಳಿಂದ ಬರುವ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಿದರೆ ಪ್ರವಾಸೋದ್ಯಮ ಇಲಾಖೆ ಬೆಳೆಯುತ್ತದೆ. ಸರಕಾರದ ಆದಾಯ ಹೆಚ್ಚುತ್ತದೆ ಇಂಥ ಕಾರ್ಯಗಳನ್ನು ಬಿಟ್ಟು ಕೇವಲ ಮಂಗಳಾರತಿ ತಟ್ಟೆ ಮತ್ತು ಹುಂಡಿಯ ಮಧ್ಯ ನಡೆಯುವ ಘರ್ಷಣೆಯಿಂದ ಭಕ್ತಾದಿಗಳಿಗೆ ತಲೆ ನೋವಾಗಿ ಪರಿಣಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸೇರಿದಂತೆ ಹಾಲನಗೌಡ ವೀರೇಶ ವಕೀಲರು. ಮರಿಸ್ವಾಮಿ ನಾಯಕ. ನಾಗರಾಜ ಕಮಲಾಪುರ. ಬಸವರಾಜ ಕಮಲಾಪುರ. ಯಮನೂರು ನಾಯಕ. ನಾಗರಾಜ ಸೇರಿದಂತೆ ರೈತ ಸಂಘ ಮತ್ತು ಕೆ.ಡಿ.ಎಸ್ ಎಸ್ ಸಂಘಟನೆಯ ಮುಖಂಡರು ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.

