ಪ್ರೇಕ್ಷಕರ ಮನಸೂರೆಗೊಂಡ ರೇಣುಕಾದೇವಿ ಮಹಾತ್ಮೆ ಬಯಲಾಟ ಪ್ರದರ್ಶನ…

ಪ್ರೇಕ್ಷಕರ ಮನಸೂರೆಗೊಂಡ ರೇಣುಕಾದೇವಿ ಮಹಾತ್ಮೆ ಬಯಲಾಟ ಪ್ರದರ್ಶನ…

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಗೌರಿ ಹುಣ್ಣಿಮೆ ಹಬ್ಬ ಹಾಗೂ ತುರಮುಂದಿ ಬಸವೇಶ್ವರರ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ಗ್ರಾಮದ ತುರಮುಂದಿ ಬಸವೇಶ್ವರ ದೇವಸ್ಥಾನದ ಮುಂಭಾಗದಲಿರುವ ಬಯಲು ರಂಗಮಂದಿರದಲ್ಲಿ ಹಳೇಗೌಡ್ರು ವಂತಿನವರು ಅಭಿನಯಿಸಿ, ಪ್ರದರ್ಶನ ಮಾಡಿದ ರೇಣುಕಾದೇವಿ ಮಹಾತ್ಮೆ ಅಥಾರ್ತ್ ಕಾರ್ತವಿರಾರ್ಜುಣ ವಧೆ ಎನ್ನುವ ಸುಂದರ ಕರ್ನಾಟಕ ಬಯಲಾಟ ಪ್ರದರ್ಶನವು ಪ್ರೇಕ್ಷರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.ಬಯಲಾಟ ಪ್ರದರ್ಶನವನ್ನು ಹಳಗೌಡ್ರು ವಂತಿನ ಮುಖಂಡರಾದ ಎಚ್.ಶವಶಂಕರಗೌಡ, ಎಚ್.ಜಗದೀಶಗೌಡ ಮತ್ತು ಎಚ್.ನಾಗರಾಜಗೌಡ ಹಾಗೂ ಹಿರಿಯ ರಂಗಭೂಮಿ ಕಲಾವಿದರು ಉದ್ಘಾಟಿಸಿ ಮಾತನಾಡಿ ಗ್ರಾಮದಲ್ಲಿ ಈ ಹಿಂದಿನ ಹಿರಿಯರ ನಿರಂತರ ಪರಿಶ್ರಮದಿಂದಾಗಿ ರಂಗಭೂಮಿಯ ಗಂಡು ಕಲೆಯಾದ ಬಯಲಾಟವು ಇಂದಿಗೂ ಉಳಿದುಕೊಂಡು ಬಂದಿದೆ. ಇಂದಿನ ವೈಜ್ಞಾನಿಕ, ತಾಂತ್ರಿಕ ಹಾಗೂ ವಿಶೇಷವಾಗಿ ಸಾಮಾಜಿಕ ಜಾಲತಾಣ ಭರಾಟೆಯಲ್ಲಿ ಗಂಡು ಮೆಟ್ಟಿನ ಕಲೆಯಾದ ಬಯಲಾಟ ಕಲ ಉಳಿದುಕೊಂಡು ಬಂದಿದ್ದು, ನಮ್ಮ ಮುಂದಿನ ಪೀಳಿಗೆಗೆ ಇಂತಹ ಅಪರೂಪದ ಕಲೆಯನ್ನು ಉಳಿಸಿಕೊಂಡು ಹೋಗಬೇಕಿದ್ದು, ಸರ್ಕಾರ ನಡೆಸುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸಲು ಸೂಕ್ತ ಪ್ರೋತ್ಸಾಹವನ್ನು ನೀಡಬೇಕು ಎಂದರು.ಬಯಲಾಟ ಪ್ರದರ್ಶನದಲ್ಲಿ ಬಾಲಕೃಷ್ಣನಾಗಿ ಎಸ್.ಆರ್.ಆಕಾಶ್, ಶಕ್ತಿಸೂಧನನಾಗಿ ಎ.ಶರಣಪ್ಪ, ಪ್ರಸೂಧನನಾಗಿ ಉಲ್ತಿ ತಿಪ್ಪಯ್ಯ, ನಾರಾದನಾಗಿ ದಾಸರ ಯಂಕಪ್ಪ, ವಿಷ್ಣುವಾಗಿ ಪಿ.ದೇವರಾಜ, ಸುದರ್ಶನನಾಗಿ ಬಿ.ಎಂ.ವೀರೇಶಸ್ವಾಮಿ, ರೇಣುಕರಾಜನಾಗಿ ಕೆ.ರವಿಕುಮಾರ್, ಕೃತವೀರ್ಯನಾಗಿ ಎಚ್.ವೆಂಕಟೇಶ್, ಕಾರ್ತವೀರ್ಯಾರ್ಜುನನಾಗಿ ಬಿ.ಎಂ.ಕರಿಬಸಯ್ಯಸ್ವಾಮಿ, ಜಮದಗ್ನಿಯಾಗಿ ಕೆ.ರಮೇಶ್, ಭಾರ್ಗವ ಹಾಗೂ ಪರಶುರಾಮನಾಗಿ ಎಸ್.ಕೆಂಚಮಾಳ ಅದ್ಬುತವಾಗಿ ಅಭಿನಯಿಸಿದರೆ, ಮಹಿಳಾ ಪಾತ್ರದಲ್ಲಿ ರೇಣುಕಾದೇವಿಯಾಗಿ ಪವಿತ್ರ ಗೊಲ್ಲರ ಹಳ್ಳಿ, ಚಂದ್ರಿಕಾ, ಸುಧತಿ,ಮೇನಕಾ ಪಾತ್ರದಲ್ಲಿ ಲಕ್ಷ್ಮೀ ವಿರುಪಾಪುರ, ಲಕ್ಷ್ಮೀ, ಮಧುಮತಿ, ಸುರೇಖಾ ಪಾತ್ರದಲ್ಲಿ ಚಾಮುಂಡಿ ಕೂಡ್ಲಿಗಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.ಬಯಲಾಟ ಪ್ರದರ್ಶನದಲ್ಲಿ ತಲಮಾಮುಡಿ ಗ್ರಾಮದ ಚಿಕ್ಕಣ್ಣ ಹಾರ್ಮೋನಿಯಂ ನುಡಿಸಿದರೆ, ಆದೋನಿಯ ವಿನೋದ ಕುಮಾರ್ ತಬಲ ಹಾಗೂ ಮೃದಂಗ ನುಡಿಸಿದರು. ಬಾದನಹಟ್ಟಿಯ ಶರಣಬಸವ ಪ್ಯಾಡ್ ನುಡಿಸಿದರು. ಸಂಜುರಾಯನಕೋಟೆಯ ಮಲ್ಲಿಕಾರ್ಜುನ ಸಾರತಿ ಪಾತ್ರವನ್ನು ನಿರ್ವಹಿಸಿದರು. ಮುಮ್ಮೇಳ ಮತ್ತು ಹಿಮ್ಮೇಳದಲ್ಲಿ ಬಿ.ಎಂ.ಬಸವರಾಜಸ್ವಾಮಿ, ಕೆ.ಎಂ.ವಿರೂಪಾಕ್ಷಯಸ್ವಾಮಿ, ಕೆ.ಎಂ.ಬಸಯ್ಯಸ್ವಾಮಿ, ಪಿ.ಧನಂಜಯ, ಎ.ಮಹೇಶ್ ಹಾಗೂ ಇತರರು ಭಾಗವಹಿಸಿದ್ದರು. ಮೆಟ್ರಿಯ ಕಾಳಾಚಾರಿ ರಂಗಸಜ್ಜಿಕೆಯನ್ನು ನಿರ್ವಹಿಸಿದರು.ಬಯಲಾಟ ಪ್ರದರ್ಶನದಲ್ಲಿ ಎಚ್.ಜಗನ್ನಾಥ್ ಗೌಡ, ಎಚ್.ನಾಗರಾಜ ಗೌಡ,ಪ್ರವೀಣಕುಮಾರ್ ಪಾಟೀಲ್,ವಿ.ಶಂಕ್ರಪ್ಪ, ಉಲ್ತಿ ಉಲ್ತೆಪ್ಪ, ಸಂಗಯ್ಯ ಹನುಮಂತ, ಎಸ್.ರಮೇಶ್, ಅಯ್ಯಸ್ವಾಮಿ ವಂತಿನವರು, ಲಾಳಗೊಂಡರು ವಂತಿನವರು, ಗ್ರಾಮದ ಮುಖಂಡರು, ಕಲಾವಿದರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *