ಮಳೆರಾಯನ ಹೊಡೆತಕ್ಕೆ ನಲುಗಿದ ರೈತರು, ರೈತನ ಗೋಳು ಕೇಳುವವರು ಯಾರು.?

ಮಳೆರಾಯನ ಹೊಡೆತಕ್ಕೆ ನಲುಗಿದ ರೈತರು, ರೈತನ ಗೋಳು ಕೇಳುವವರು ಯಾರು.?

ಬಳ್ಳಾರಿ / ಕಂಪ್ಲಿ : ಕಳೆದ ಮೂರು ದಿನಗಳಿಂದ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಗೆ ತಾಲೂಕಿನ ವಿವಿಧಡೆ ಕಟಾವಿಗೆ ಬಂದಿದ್ದ ಭತ್ತ ನೆಲಕಚ್ಚಿ ಭತ್ತದಲ್ಲೇ ಮೊಳಕೆ ಬಂದಿದೆ. ತಾಲೂಕಿನ ಅನೇಕ ರೈತರ ಭತ್ತ ಬೆಳೆದ ಗದ್ದೆಗಳಲ್ಲಿ ನೀರು ನಿಂತುಕೊಂಡಿದೆ ಭತ್ತ ನೆಲದ್ಕುರಳಿದೆ ಸಣಾಪುರದ 12 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು 1638 ಸ್ಥಳೀಯ ಭತ್ತ ಬೆಳೆದಿದ್ದು ಕೆಲ ದಿನಗಳ ಹಿಂದೆ ಕೊಯ್ಲು ಆರಂಭಿಸಿದ್ದೆ ಇದ್ದಕ್ಕಿದ್ದಂತೆ ಮಳೆ ಶುರುವಾದ ಕಾರಣ ಕೊಯ್ಲು ನಿಲ್ಲಿಸಿದೆ ಮೂರು ದಿನಗಳ ಮಳೆಗೆ ಮೊಳಕೆ ಹೊಡೆದಿದೆ ಸಸಿ ನಾಟಿ ಗೊಬ್ಬರ ಕ್ರಿಮಿನಾಶಕ ಸಿಂಪಡನೆ ಕೃಷಿ ಕಾರ್ಮಿಕರ ವೆಚ್ಚ ಸೇರಿ ಎಕ್ಕರೆಗೆ 40,000 ಖರ್ಚಾಗಿದೆ ಒಟ್ಟಾರೆಯ 12 ಎಕರೆಗೆ 4.80.ಲಕ್ಷದವರೆಗು ವೆಚ್ಚ ಮಾಡಿರುವೆ, ಸದ್ಯ 4 ಎಕರೆಯನ್ನು ಮಾತ್ರ ಭತ್ತ ಕಟಾವು ಮಾಡಲಾಗಿದ್ದು ಉಳಿದ 8 ಎಕರೆಗಳನ್ನು ಭತ್ತ ಮಳೆಗೆ ನೆಲಕ್ಕೊರಗಿ ಮೊಳಕೆ ಬಂದಿದೆ ಸಾಲ ಸೂಲಾ ಮಾಡಿ ಭೂಮಿ ತಾಯಿಯನ್ನು ನಂಬಿ ಭಕ್ತ ಹಾಕಿದ್ದೆ ಇಳುವರಿಯೋ ಅಂದುಕೊಂಡಂತೆ ಬಂದಿತ್ತು, ಇನ್ನೇನು ಕಟಾವು ಮಾಡಿ ಭತ್ತವನ್ನು ಮಾರಿ ಸಾಲ ಎಲ್ಲ ತೀರಿಸೋಣ ಅಂದುಕೊಂಡಿದ್ದೆ ಅಷ್ಟರಲ್ಲಿ ಮಳೆ ಎಲ್ಲಾದನ್ನು ಕಸಿದುಕೊಂಡು ಬಿಡ್ತು. ಮಳೆರಾಯನ ಅಟ್ಟಹಾಸದ ಮುಂದೆ ನಾವೆಲ್ಲ ರೈತರು ನಲುಗಿಬಿಟ್ಟಿದ್ದೀವಿ, ಇನ್ನು ನಮಗೆ ಏನು ದಿಕ್ಕು ತೋಚದಂತಾಗಿದೆ ಹೀಗೆ ಆದರೆ ರೈತರು ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತೆ ಎಂದು ಸಣಾಪುರದ ಗ್ರಾಮದ ರೈತರದ ಕೆ.ಎಸ್. ದೊಡ್ಡಬಸಪ್ಪ ತಮ್ಮ ಅಳನ್ನು ತೋಡಿಕೊಂಡಿದ್ದಾರೆ ಅಲ್ಲದೆ ಇದರ ಬಗ್ಗೆ ಸರಕಾರ ಎಚ್ಚೆತ್ತು ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *