1857ರ ಕ್ರಾಂತಿಯ ಮೂಲಕ ಸ್ವಾತಂತ್ರ್ಯದ ಕಿಡಿ ಹಚ್ಚಿದ ದಿಟ್ಟ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ : ಮಾಜಿ ಶಾಸಕ ಪರಣ್ಣ ಮುನವಳ್ಳಿ….

1857ರ ಕ್ರಾಂತಿಯ ಮೂಲಕ ಸ್ವಾತಂತ್ರ್ಯದ ಕಿಡಿ ಹಚ್ಚಿದ ದಿಟ್ಟ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ : ಮಾಜಿ ಶಾಸಕ ಪರಣ್ಣ ಮುನವಳ್ಳಿ….

ಗಂಗಾವತಿ: ಬ್ರಿಟಿಷರಿಗೆ ಸಿಂಹ ಸ್ವಪ್ನ ವಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ 1857ರ ಕ್ರಾಂತಿಯ ಮೂಲಕ ಕಿಡಿ ಹಚ್ಚಿದ ದಿಟ್ಟ ಮಹಿಳೆ ವೀರರಾಣಿ ಕಿತ್ತೂರ ಚೆನ್ನಮ್ಮ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ನಗರದ ಚನ್ನಬಸವ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ರಾಣಿ ಕಿತ್ತೂರು ಚೆನ್ನಮ್ಮ 247ನೇಯ ಜಯಂತೋತ್ಸವದ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಆದ್ದರಿಂದ ಮಕ್ಕಳಿಗೆ ಮೊದಲು ಪೋಷಕರು ವಿದ್ಯಾಭ್ಯಾಸವನ್ನು ಮಾಡಿಸುವುದು ಮೊದಲನೇ ಕರ್ತವ್ಯ. ಇಂತಹ ಹೋರಾಟಗಾರರನ್ನು ಸ್ಮರಿಸಬೇಕಾದರೆ ವಿಧ್ಯರ್ಜನೆ ಬಹಳ ಪ್ರಾಮುಖ್ಯತೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಾರಂಭದ ಸಾನಿಧ್ಯವನ್ನು ಪಂಚಮ ಸಾಲಿಯ ಜಗದ್ಗುರುಗಳಾದ ಹರಿಹರ ಪೀಠದ ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳು ಹಾಗೂ ಕೂಡಲಸಂಗಮ ಪೀಠಾಧಿಪತಿಗಳಾದ ಜಯ ಮೃತ್ಯುಂಜಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶಾಸಕರಾದ ಗಾಲಿ ಜನಾರ್ಧನ್ ರೆಡ್ಡಿ. ಮಾಜಿ ಸಂಸದ ಶಿವರಾಮ ಗೌಡ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ,ಮಾಜಿ ಸಂಸದರಾದ ಕರಡಿ ಸಂಗಣ್ಣ, ಮಾಜಿ ಶಾಸಕರಾದ ಜಿ. ವೀರಪ್ಪ. ಮುಖಂಡರಾದ ಎನ್.ಸೂರಿ ಬಾಬು.ಡಾಕ್ಟರ್ ಬಸವರಾಜ ಕ್ಯಾವಟರ್.ಕಳಕನಗೌಡ.ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *