ಗಂಗಾವತಿ ಡಿವೈಎಸ್‌ಪಿ ವರ್ಗಾವಣೆ….

ಗಂಗಾವತಿ: ರಾಜ್ಯ ಸರ್ಕಾರ ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ಆಗಿದ್ದ ಸಿದ್ದಲಿಂಗಪ್ಪ ಗೌಡ ಪಾಟೀಲ್ ಇವರನ್ನು ಎ.ಎನ್.ಟಿ.ಎಫ್. ಬೆಂಗಳೂರು ( ಹೊಸದಾಗಿ ಸೃಜನೆಯಾದ ಹುದ್ದೆ) ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಇಲಾಖೆಗೆ ವರ್ಗಾಯಿಸಿ ನಿಯೋಜಿಸಲಾಗಿದೆ.

ಮತ್ತು ಗಂಗಾವತಿ ಉಪ ವಿಭಾಗಕ್ಕೆ ತೆರವಾದ ಸ್ಥಾನಕ್ಕೆ ಪ್ರಸ್ತುತ ಬೀದರ್ ಜಿಲ್ಲೆಯ ಹುಮನಾಬಾದ್ ಉಪ ವಿಭಾಗದ ಡಿವೈಎಸ್‌ಪಿ ಯಾಗಿರುವ ಜಾಯಪ್ಪ ನ್ಯಾಮಗೌಡರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಸಿದ್ದಲಿಂಗಪ್ಪಗೌಡ ಪಾಟೀಲ್ ರವರು ಗಂಗಾವತಿ ಉಪವಿಭಾಗದಲ್ಲಿ ಕಾರ್ಯನಿರ್ವಹಿಸಿ ರಾಷ್ಟ್ರಪತಿಗಳ ಪುರಸ್ಕಾರ ಪಡೆದಿದ್ದಾರೆ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗಣೇಶೋತ್ಸವ, ಈದ್ ಮಿಲಾದ್ ಹಬ್ಬಗಳು ಸೇರಿದಂತೆ ಅನೇಕ ಹಬ್ಬಗಳಲ್ಲಿ ಎಲ್ಲಾ ಸಮಾಜದ ಮುಖಂಡರು ಮತ್ತು ಯುವಕರ, ಸಿಬ್ಬಂದಿ ವರ್ಗದವರ ಜೊತೆಗೆ ಸರಳತೆಯಿಂದ ಬೆರೆತು ಜನಮನ್ನಣೆ ಪಡೆದಿದ್ದರು,

