ನವರಾತ್ರಿ ಐದನೇ ದಿನ : ದೇವಿಗೆ ವಿಶೇಷ ಅಲಂಕಾರ…

ಶ್ರೀರಾಮನಗರ : ಶುಕ್ರವಾರದಂದು ಶರನ್ನವರಾತ್ರಿ ಮಹೋತ್ಸವದ ಐದನೇ ದಿನದ ಅಂಗವಾಗಿ ಶ್ರೀರಾಮನಗರ ಗ್ರಾಮದ ಶ್ರೀ ಕನಕದುರ್ಗಾದೇವಿಗೆ ಶ್ರೀ ಮಹಾಲಕ್ಷ್ಮಿ ದೇವಿ ಅಲಂಕಾರ ಹಾಗೂ ಶ್ರೀ ವಾಸವಿ ಕನ್ನಿಕಾ ಪರಮೇಶ್ವೇರಿ ಅಮ್ಮನವರಿಗೆ ಗೆಜ್ಜೆವಸ್ತ್ರದ ಅಲಂಕಾರ ನೆರವೇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಂಜೆ ಕಲಾ ತಂಡದಿಂದ ಕೋಲಾಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇವಾಲಯ ಮತ್ತು ದೇವಿಗೆ ವಿಶೇಷವಾಗಿ ಹೂವು-ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ನೆರದಿದ್ದ ಭಕ್ತ ಸಮೂಹಕ್ಕೆ ಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗಿತ್ತು.
