ಹಿಂದು ಉಪ್ಪಾರ ಎಂದು ಬರೆಸಿ : ವಿ.ನರಸಪ್ಪ ಅಮರಜ್ಯೋತಿ…

ಹಿಂದು ಉಪ್ಪಾರ ಎಂದು ಬರೆಸಿ : ವಿ.ನರಸಪ್ಪ ಅಮರಜ್ಯೋತಿ…

ಗಂಗಾವತಿ: ರಾಜ್ಯದಲ್ಲಿ ೨೫ ಲಕ್ಷಕ್ಕು ಅಧಿಕ ಉಪ್ಪಾರ ಸಮಾಜದ ಜನಸಂಖ್ಯೆ ಇದ್ದು, ಕಳೆದ ಬಾರಿಯ ಗಣತಿಯಲ್ಲಿ ಉಪಜಾತಿಯನ್ನೆ ಮುಖ್ಯಜಾತಿ ಕಲಂನಲ್ಲಿ ಬರೆಸಿದ ಕಾರಣ ಸಮಾಜದ ಜನಸಂಖ್ಯೆ ಒಟ್ಟಾಗಿ ಗುರುತಿಸಲು ಸಾಧ್ಯವಾಗಿರಲಿಲ್ಲ ಇದರಿಂದ ಅತ್ಯಂತ ಕಡಿಮೆ ಸಂಖ್ಯೆ ದಾಖಲಾಗಿತ್ತು. ಆದ್ದರಿಂದ ಧರ್ಮ ಕಲಂನಲ್ಲಿ ಹಿಂದು, ಜಾತಿ ಕಲಂನಲ್ಲಿ ಉಪ್ಪಾರ, ಕೋಡ್ ೧೪೬೫ ಬರೆಸಬೇಕೆಂದು ಗಂಗಾವತಿಯ ಶ್ರೀ ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಪ್ಪ ಅಮರಜ್ಯೋತಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ಮನೆಗಳು ಗಣತಿಗೆ ಒಳಪಡಬೇಕಿದ್ದು, ಒಂದೇ ಒಂದು ಮನೆ ಹೊರಗುಳಿಯದಂತೆ ಜಾಗೃತಿ ವಹಿಸಬೇಕು, ಜಾತಿ ಜನಗಣತಿಯು ಸರಕಾರದಿಂದ ಸೌಲಭ್ಯ ಪಡೆಯಲು ಅನುಕೂಲವಾಗಲಿದ್ದು ಗ್ರಾಮ. ಪಟ್ಟಣ, ನಗರ, ತಾಲೂಕು ಹಾಗು ಜಿಲ್ಲಾ ಕೇಂದ್ರಗಳಲ್ಲಿನ ಸಮಾಜದ ಸಂಘಟನೆಗಳು, ಪ್ರಜ್ಞಾವಂಥ ಯುವ ಸಮುದಾಯ ಎಲ್ಲರೂ ಸೇರಿ ಎಲ್ಲರೂ ಕಾಳಜಿಪೂರ್ವಕವಾಗಿ ಜಾತಿಗಣತಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *