ಎಸ್.ಎಲ್. ಭೈರಪ್ಪ ಅವರ ನಿಧನ ಕರ್ನಾಟಕ ಸಾಹಿತ್ಯ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ..

ಎಸ್.ಎಲ್. ಭೈರಪ್ಪ ಅವರ ನಿಧನ ಕರ್ನಾಟಕ ಸಾಹಿತ್ಯ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ..

ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 24.9.2025ರಂದು ನಿಧನರಾದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಮೌನಾಚರಣೆಯ ಮೂಲಕ ಸಂಜೆ 4:30ಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭೈರಪ್ಪ ಅವರ ಸಾಹಿತ್ಯ ಕೃಷಿಯ ಕುರಿತು ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ ಅವರು ನೆನೆದು ಅವರ ಅಗಲಿಕೆಗೆ ಭಾವುಕರಾದರು. ನಂತರ ಕಾಲೇಜಿನ ಪ್ರಾಂಶುಪಾಲರಾದ ಕರಿಗೂಳಿ ಅವರು ಭೈರಪ್ಪ ಅವರ ಸಾಹಿತ್ಯದ ಕೊಡುಗೆಯನ್ನು ನೆನೆದು ಅವರ ಕೃತಿಗಳ ಅಂತಃಸತ್ವದ ಕುರಿತು ವಿವರಿಸಿದರು. ಅವರ ಕೃತಿಗಳಲ್ಲಿರುವ ಮಾನವೀಯ ನೆಲೆಗಳು ಎಲ್ಲೆಡೆ ಪಸರಿಸಲಿ, ಮುಂದಿನ ಪೀಳಿಗೆ ಭೈರಪ್ಪ ಅವರ ಆಲೋಚನೆಗಳನ್ನು ಮಾನವೀಯತೆ ನೆಲೆಯಲ್ಲಿ ಗ್ರಹಿಸುವಂತಾಗಲಿ ಎಂದು ಆಶಿಸಿದರು. ಸಹಾಯಕ ಪ್ರಾಧ್ಯಾಪಕರಾದ ವಿರುಪಾಕ್ಷ ಕೆ ಅವರು ಮಾತನಾಡುತ್ತಾ ಅವರ ಸಾಹಿತ್ಯದಾಚೆಗೆ ಅವರ ಸಾರ್ವಜನಿಕವಾಗಿ ಜೀವನವು ಕೂಡ ಚರ್ಚೆಗೆ ಗುರಿಯಾಗಿತ್ತು ಎಂದು ತಿಳಿಸಿದರು. ಎಸ್.ಎಲ್. ಭೈರಪ್ಪ ಅವರ ನಿಧನ ಕರ್ನಾಟಕ ಸಾಹಿತ್ಯ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಕುಮಾರ, ವಿರುಪಾಕ್ಷ ಕೆ, ಐಕ್ಯೂಎಸಿ ಸಂಚಾಲಕರಾದ ರವಿಕುಮಾರ, ಆಡಳಿತ ಸಿಬ್ಬಂದಿಯಾದ ಜಬೀನಾ ಬೇಗಂ, ವಿನಾಯಕ ಜಾಗೀರದಾರ್, ಚಿನ್ನ ವರಪ್ರಸಾದ್, ಶರಣ ಮತ್ತು ಶಾಂತಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *