ಶಿಸ್ತುಬದ್ಧ ಜೀವನದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ರಾಮಾಂಜನೇಯ್ಯ..

ಶಿಸ್ತುಬದ್ಧ ಜೀವನದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ರಾಮಾಂಜನೇಯ್ಯ..

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದು ವಿಷಾಧನೀಯ ಸಂಗತಿ, ಪ್ರತಿ ಮಹಿಳೆ ಮತ್ತು ಮಕ್ಕಳು ಒಳಿತುಕೆಡಕುಗಳ ಭೇದ ಗ್ರಹಿಸಿ ಶಿಸ್ತುಬದ್ಧ ಜೀವನದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸ್ಹೇಹ ಸಂಸ್ಥೆ ನಿರ್ದೇಶಕ ಟಿ.ರಾಮಾಂಜನೇಯ್ಯ ತಿಳಿಸಿದರು.ಅವರು, ನಗರದ ಸಾಹಿತ್ಯ ಪರಿಷತ್ ಭವನದಲ್ಲಿಸ್ನೇಹ ಸಂಸ್ಥೆ ಹಮ್ಮಿಕೊಂಡಿದ್ದ ಕಿಶೋರಿ ಸಂಘಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಾಲ್ಯವಿವಾಹ, ದೇವದಾಸಿ ಪದ್ಧತಿ ಹಾಗು ಪೋಕ್ಸೋ ಕಾಯಿದೆಯಂಥ ಮಾರಕ ಪಿಡುಗುಗಳ ಕುರಿತು ಜಾಗೃತಿ ಅಗತ್ಯವಿದ್ದು, ಮಕ್ಕಳ ತಮ್ಮ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣ ಪಡೆಯಬೇಕು, ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತು ಲಕ್ಷö್ಯ ವಹಿಸಬೇಕಲ್ಲದೆ ಅಂಥವುಗಳಿAದ ಪಾಠ ಕಲಿಯಬೇಕೆಂದು ಕಿವಿಮಾತು ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಸ್ನೇಹ ಸಂಸ್ಥೆ ಗ್ರಾಮೀಣ ಭಾಗದ ಶೋಷಿತ ಬಡ ಮಕ್ಕಳನ್ನು ಆಯ್ಕೆ ಮಾಡಿ, ಅವರಿಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವುದರ ಜತೆಗೆ ಶಿಕ್ಷಣ ಇತರೆ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಅವರಲ್ಲಿ ಮನುಷ್ಯತ್ವ ಬೇರೂರುವಂತೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಗುಣಗಾನ ಮಾಡಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರೇಶ್ ರ‍್ಹಾಳ್ ಮಾತನಾಡಿ, ಬದುಕಿನಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ ಆದರೆ ಅವುಗಳನ್ನು ಎದರಿಸುವುದು ನಮ್ಮಲ್ಲಿ ಜಾಗೃತಿ ಇದ್ದಾಗ ಮಾತ್ರ ಸಾಧ್ಯ ಎಂದರು.ಸAಚಾರಿ ಠಾಣೆ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಶಾರದಮ್ಮ ಮಾತನಾಡಿ, ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಸ್ಥಳ ಅಂದರೆ ಅವರಲ್ಲಿರುವ ಧೈರ್ಯ, ಆಮೀಷ, ವ್ಯಾಮೋಹಕ್ಕೆ ಒಳಗಾಗಿ ಅಪ್ರಾಪ್ತ ಮಕ್ಕಳು ಲೈಂಗಿಕ ದೌಜರ್ನ್ಯಕ್ಕೆ ಒಳಗಾಗುತ್ತಿದ್ದು, ಪ್ರೀತಿ, ಪ್ರಣಾಯ ಇತರೆ ಕ್ಷಣಿಕ ಸುಖಕ್ಕಾಗಿ ತಮ್ಮ ಅಮುಲ್ಯ ಜೀವನ ಹಾಳುಮಾಡಿಕೊಳ್ಳುತ್ತಿರುವುದು ಶೋಚನೀಯ ಸಂಬAಧಗಳಿಗೆ ಅರ್ಥವೆ ಇಲ್ಲದಂಥ ಪರಿಸ್ಥಿತಿಗೆ ಕಾಲ ಬಂದು ನಿಂತಿದೆ ನಮ್ಮ ಸುರಕ್ಷತೆಗೆ ಆದ್ಯತೆ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್. ಜಯಶ್ರೀ ಮಾತನಾಡಿದರು.ವೇದಿಕೆಯಲ್ಲಿ ಸ್ನೇಹ ಸಂಸ್ಥೆ ಶಿಕ್ಷಣ ಸಹಾಯ ಸಂಯೋಜಕರಾದ ಜೆ.ಪಿ.ಜಯ, ಸಿಬ್ಬಂದಿ ಪ್ರತಿಭಾ ಇತರರಿದ್ದರು.ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಿಕೊಡಲಾಯಿತು.

Leave a Reply

Your email address will not be published. Required fields are marked *