ಕಳಪೆ ಕಾಮಗಾರಿ, ಜಮೀನಿಲ್ಲ ಆದರೂ ಸಂಘಕ್ಕೆ ಅಧ್ಯಕ್ಷ..! ಹಣ ದರ್ಬಳಕೆಸಂಗಾಪುರ:ನೀರು ಬಳಕೆದಾರರ ಸಂಘದ ಅಧ್ಯಕ್ಷರಿಂದ ೧.೫ ಕೊ.ರು ಭ್ರಷ್ಟಾಚಾರ..

ಗಂಗಾವತಿ: ಸಂಗಾಪುರ ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಈಡಿಗರ, ಉಪಾಧ್ಯಕ್ಷ ಹೆಚ್.ಎಂ.ಘನಮಠಸ್ವಾಮಿ, ಕಾರ್ಯದರ್ಶಿ ಕೃಷ್ಣಾ ಸಂಗಾಪುರ ಇತರರು ಅಧಿಕಾರ ದುರ್ಬಳಕೆ, ಸಂಗಾಪುರ ಸೀಳುಗಾಲುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಿದ್ದು, ವೆಚ್ಚ ಮಾಡಬೇಕಾದ ೫.೬೦ ಕೋಟಿ ರುಗಳಲ್ಲಿ ಒಟ್ಟು ಒಂದು ಕೋಟಿ ಐವತ್ತು ಲಕ್ಷ ರು.ಗು ಅಧಿಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸಂಗಾಪುರ ಲಕ್ಷö್ಮಣ ಕರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಖಮರ್ ಪಾಶಾ ಆರೋಪಿಸಿದ್ದಾರೆ.ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.ಮನಸೋ ಇಚ್ಛೆ ಚೆಕ್ ಬರೆದುಕೊಂಡು ಹಣ ಪಡೆದಿರುವ ಕೆಲ ಪದಾಧಿಕಾರಿಗಳ ನಡೆಗೆ ಬೇಸತ್ತು ಒಟ್ಟು ೧೩ ಸದಸ್ಯ ಬಲದ ನೀರು ಬಳಕೆದಾರರ ಸಂಘಕ್ಕೆ ೭ ಕ್ಕು ಹೆಚ್ಚು ಸದಸ್ಯರು ರಾಜೀನಾಮೆ ಕೊಟ್ಟು ಹೋರಾಟ ನಡೆಸುತ್ತಿದ್ದಾರೆ. ಜಮೀನಿಲ್ಲದ ಕಾರಣ ಹಿಂದಿನ ಅಧ್ಯಕ್ಷರು ಅನರ್ಹಗೊಂಡರೆ, ಇನ್ನೋರ್ವ ಸದಸ್ಯರ ಜಮೀನು ಸಂಗಾಪುರ ವ್ಯಾಪ್ತಿಗೆ ಒಳ ಪಡೆದಿರುವುದರಿಂದ ಅನರ್ಹತೆ ಹೊಂದಿದ್ದಾರೆ. ಕಳಪೆ ಹಾಗು ಅರೆಬರೆ ಕಾಮಗಾರಿಯಿಂದಾಗಿ ಕೊಟ್ಯಾಂತರ ರು ಗುಳುಂ ಮಾಡಿದ್ದಾರೆ. ಒಟ್ಟು ೩೧ ಕಾಮಗಾರಿಗೆ ಹಣ ೫.೬೦ ಕೊ.ರು ಬಿಡುಗಡೆಗೊಂಡಿದ್ದು, ಶೇ. ೬ ರಷ್ಟು ಲಾಭಾಂಶದಿAದ ರು. ೩೬ ಲಕ್ಷ ರು ಸಂಘಕ್ಕೆ ಉಳಿದಿದೆ ಎಂದು ಅಡಿಟ್‌ನಲ್ಲಿ ತೋರಿಸಿದ್ದರು.

ಆದರೆ ಈ ಬಾರಿ ಲೆಕ್ಕ ತೋರಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಈಡಿಗರು, ಉಪಾಧ್ಯಕ್ಷರಾಗಿದ್ದ ಹೆಚ್.ಎಂ.ಘನಮಠಸ್ವಾಮಿ, ಕಾರ್ಯದರ್ಶಿ ಕೃಷ್ಣ ಹಾಗು ಸದಸ್ಯೆ ಹೆಚ್.ಎಂ. ಪಾರ್ವತಿ ಪುತ್ರ ವಿರುಪಾಕ್ಷನ ಹೆಸರಿಗೆ ಚೆಕ್ ಡ್ರಾ ಆಗಿದ್ದು ಇದರಲ್ಲಿ ಸೀತಾ ರತ್ನಂ ಎನ್ನುವ ಒರ್ವ ಸದಸ್ಯನ ಹೆಸರಿನ ಚೆಕ್‌ಗು ಹಣ ಡ್ರಾ ಆಗಿದ್ದು ಒಟ್ಟಾರೆ ಅಮಾಯಕ ರೈತರನ್ನು ವಂಚಿಸಿ ನೀರಾವರಿ ಇಲಾಖೆ ಅಧಿಕಾರಿಗೊಳೊಂದಿಗೆ ಶಾಮೀಲಾಗಿ ಸಾಕಷ್ಟು ವಂಚನೆ ಮಾಡಿದ್ದಾರೆ ಎಂದು ಕಿಡಿಕಾರಿದರು.ಕಳಪೆ ಕಾಮಗಾರಿ: ಮನಸೋ ಇಚ್ಛೆ ಹಣ ಡ್ರಾ ಮಾಡಿಕೊಂಡಿರುವ ಕೆಲ ಪದಾಧಿಕಾರಿಗಳು ಕಾಮಗಾರಿಯನ್ನು ರೈತರೆ ನಿರ್ವಹಿಸಬೇಕೆಂದಿದ್ದರು ರೈತರಿಗೆ ಗುತ್ತಿಗೆ ನೀಡದೆ ಜ್ಞಾನವಿಲ್ಲದ ಗುತ್ತಿಗೆದಾರರಿಗೆ ಕೆಲಸ ನೀಡಿ ಕಳಪೆ ಕಾಮಗಾರಿ ಮಾಡಿಸಿದ್ದಾರೆ, ಕೆಲಸ ನಡೆದು ಒಂದೆರಡು ವರ್ಷದೊಳಗೆ ಸಂಪೂರ್ಣ ಸೀಳು ಗಾಲುವೆಗಳು ಹಾಳಾಗಿದ್ದು, ರೈತರಿಗೆ ದಿಕ್ಕೆ ತೋಚದಂತಾಗಿದೆ. ಹಣಬಲ ತೋಳ್ಬಲ, ರಾಜಕೀಯ ಬಲದ ಮೂಲಕ ತಮ್ಮ ನಿಜ ಬಣ್ಣ ಬಯಲಿಗೆ ಬರದಂತೆ ನೋಡಿಕೊಳ್ಳಲು ಯತ್ನಿಸುತ್ತಿರುವ ಈ ಸಂಘದ ಪದಾಧಿಕಾರಿಗಳ ವಿರುದ್ಧ ತೀವ್ರ ತನಿಖೆ ನಡೆಸಬೇಕು, ಇವರಿಗೆ ಬೆಂಬಲಿಸಿದ ಅಧಿಕಾರಿಗಳ ಭ್ರಷ್ಟಾಚಾರ ಬಯಲಿಗೆಳೆದು ಪಾಲುದಾರರಿಗೆ ಕಠಿಣ ಶಿಕ್ಷೆಯಾಗಬೇಕು ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗು ಸಚಿವ ತಂಗಡಗಿಯವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಪಾಶಾ ಎಚ್ಚರಿಕೆ ನೀಡಿದರು.

ನೀರು ಬಳಕೆ ದಾರರ ಸಂಘದ ಸದಸ್ಯ ಹೇಮಸುಂದರರೆಡ್ಡಿ, ಮುಖಂಡರಾದ ಎನ್.ಹರಿಪ್ರಸಾದ್, ಮಹಬೂಬ್ ವಲಿ, ಸತ್ಯನಾರಾಯಣ, ಡಿ.ನಾಗರಾಜ್, ನೆಕ್ಕಂಟಿ ಸುರೇಶ್, ವಿ.ರಾಘವಲು ಸುಂದರರಾಜ್ ಅಪಾರ ಸಂಖ್ಯೆ ರೈತರು ಪಾಲ್ಗೊಂಡಿದ್ದರು. (ಬಾಕ್ಸ್)ಒಂದು ಅಂದಾಜಿನ ಪ್ರಕಾರ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಈಡಿಗರು, ಉಪಾಧ್ಯಕ್ಷರಾಗಿದ್ದ ಹೆಚ್.ಎಂ.ಘನಮಠಸ್ವಾಮಿ, ಕಾರ್ಯದರ್ಶಿ ಕೃಷ್ಣ ಹಾಗು ಸದಸ್ಯೆ ಹೆಚ್.ಎಂ. ಪಾರ್ವತಿ ಪುತ್ರ ವಿರುಪಾಕ್ಷನ ಹೆಸರಿಗೆ ಚೆಕ್ ಡ್ರಾ ಆಗಿದ್ದು ಇದರಲ್ಲಿ ಸೀತಾ ರತ್ನಂ ಎನ್ನುವ ಒರ್ವ ಸದಸ್ಯನ ಹೆಸರಿನ ಚೆಕ್‌ಗು ಹಣ ಡ್ರಾ ಆಗಿದ್ದು ಒಟ್ಟಾರೆ ಅಮಾಯಕ ರೈತರನ್ನು ವಂಚಿಸಿ ನೀರಾವರಿ ಇಲಾಖೆ ಅಧಿಕಾರಿಗೊಳೊಂದಿಗೆ ಶಾಮೀಲಾಗಿ ಸಾಕಷ್ಟು ವಂಚನೆ ಮಾಡಿದ್ದಾರೆ ಎಂದು ಪಾಶಾ ಕಿಡಿಕಾರಿದರು.

