ಸಾಹಿತ್ಯದಿಂದ ಬದಲಾವಣೆ : ರಾಮಮೂರ್ತಿ ನವಲಿ…

ಗಂಗಾವತಿ : ಕವನದ ಆಶಯ ಉತ್ತಮವಾಗಿದ್ದರೆ ಬದಲಾವಣೆ ಕಾಣಲು ಸಾಧ್ಯ ಎಂದು ಹಿರಿಯ ಪತ್ರಕರ್ತ ರಾಮಮೂರ್ತಿ ನವಲಿ ಹೇಳಿದರು.
ಭಾನುವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕಾವ್ಯಲೋಕ, ರೋಟರಿ ಕ್ಲಬ್ ಮತ್ತು ಹೊಸಳ್ಳಿಯ ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯ ಸಂಭ್ರಮ’ 109ನೇ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಬದಲಾವಣೆ ತರುವಂತಹ ಸಾಹಿತ್ಯ ರಚನೆಗೆ ಕವಿ ಕವಯಿತ್ರಿಯರು ತೊಡಗಬೇಕು. ಕವನಗಳ ಮೂಲಕ ಸಂದೇಶ ನೀಡಬೇಕು. ಕವನಗಳು ಹೃದಯ ತಟ್ಟಬೇಕು ಎಂದು ತಿಳಿಸಿ, ಕಾವ್ಯಲೋಕದ ಚಟುವಟಿಕೆಗಳಿಗೆ ಸರ್ವರೂ ಸಹಕಾರ ನೀಡಬೇಕೆಂದರು.
ರೋಟರಿ ಕ್ಲಬ್ ಮಾಜಿ ಗೌರ್ನರ್ ಟಿ.ಆಂಜನೇಯ ಮಾತನಾಡಿ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ರೋಟರಿ ಕ್ಲಬ್ ತೊಡಗಿರುವುದನ್ನು ತಿಳಿಸಿ, ಸಾಹಿತ್ಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಬೇಕು ಎಂದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಸಾಹಿತಿ, ಶಿಕ್ಷಕ ವಿಜಯ ವೈದ್ಯ ಕವನಗಳನ್ನು ವಿಮರ್ಶಿಸಿ ಮಾತನಾಡಿ, ಕವನ ವಾಚನ ಒಂದು ಕಲೆ, ಕವಿ ಕವಯಿತ್ರಿಯರು ಈ ಕರಗತ ಮಾಡಿಕೊಂಡು ಕವನದ ಆಶಯವನ್ನು ಎಲ್ಲರಿಗೂ ತಲುಪಿಸಿದಾಗ ಸಾರ್ಥಕತೆ ಪಡೆಯುತ್ತದೆ ಎಂದರು.
ಕೊಪ್ಪಳದ ಸಿಜಿಕೆ ಪ್ರಶಸ್ತಿ ಪಡೆದ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಇಂಗಳಗಿ ಅವರನ್ನು ಸನ್ಮಾನಿಸಲಾಯಿತು.
ಶಶಿಕಲಾ ಕುರುಗೋಡು, ಶಾಮೀದ್ ಲಾಠಿ, ಚಿದಾನಂದ ಕೀರ್ತಿ, ಮಹಮದ್ ಮೀಯಾ, ವಿಜಯಲಕ್ಷ್ಮಿ ಕೊಳ್ಳಿ, ಜಡೆಯನ್ನು ಮೆಟ್ರಿ, ಗೋಪಿನಾಥ ದಿನ್ನಿ, ನಾಗರತ್ನ ಹೆಚ್, ಶರಣಪ್ಪ ವಿದ್ಯಾನಗರ, ಎಂ.ಎಸ್.ನಾರಾಯಣ, ಸೋಮಶೇಖರ್ ಕಂಚಿ ಮತ್ತಿತರರು ಕವನ ವಾಚಿಸಿದರು.
ತಾಪಂ ಮಾಜಿ ಅಧ್ಯಕ್ಷೆ, ನ್ಯಾಯವಾದಿ ರಾಜೇಶ್ವರಿ ಸುರೇಶ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ನ್ಯಾಯವಾದಿ ನಿಂಗಪ್ಪ ಸುದ್ದಿ, ವಿಕಲ ಚೇತನರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಹೊಸ್ಕೇರ, ರೋಟರಿ ಕ್ಲಬ್ ಕಾರ್ಯದರ್ಶಿ ಕೆ.ಬಸವರಾಜ, ಮುಖಂಡ ವೈ.ಎಂ.ಪುಂಡಗೌಡ ಭಾಗವಹಿಸಿದ್ದರು.
ಕಾವ್ಯಲೋಕ ಗೌರವಾಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್, ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ರಗಡಪ್ಪ ಹೊಸಳ್ಳಿ ಉಪಸ್ಥಿತರಿದ್ದರು.
ನಾಗರತ್ನ ಪ್ರಾರ್ಥಿಸಿ ಜಡೆಯಪ್ಪ ಮೆಟ್ರಿ ನಿರೂಪಿಸಿದರು.

