ಶಾಲಾ ಸಂಸತ್ತು ಉದ್ಘಾಟನಾ ಸಮಾರಂಭ…

ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಮತಿ ಗಂಗಮ್ಮ ಗುರುಪಾದಗೌಡ ಮಾಲಿಪಾಟೀಲ್ ಕನ್ನಡ ಮಾಧ್ಯಮ ಪ್ರೌಢಶಾಲೆ ಪಂಪಾ ನಗರ ಗಂಗಾವತಿ ಈ ಎರಡು ಶಾಲೆಯ ವತಿಯಿಂದ ಇಂದು ಶಾಲಾ ಸಂಸತ್ತು ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ವಿ. ಜೆ ಯಾವಗಲ್ ಅವರು ವಹಿಸಿಕೊಂಡು ಮಾತನಾಡಿದರು ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಕಲಿ ಸುತ್ತದೆ ನಾಯಕರನ್ನು ತಯಾರು ಮಾಡುವ ವಿದ್ಯಾರ್ಥಿಗಳೇ ಶ್ರೇಷ್ಠ ಎಂದು ಹೇಳಿದರು ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿಕೊಂಡ ಶ್ರೀ ಚನ್ನಬಸವ ಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಪ್ರಕಾಶ್ ಪಾಟೀಲ್ ಅವರು ಮಾತನಾಡಿ ವಿದ್ಯೆಗೆ ವಿನಯವೇ ಭೂಷಣ ವಿನಯ ವಿದ್ದರೆ ನಾಯಕತ್ವ ತನ್ನಿಂದ ತಾನೇ ಬರುತ್ತದೆ ಎಂದು ಹೇಳಿದರು ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಮಾರುತಿ ಶಿಕ್ಷಕರು ಮಾತನಾಡಿ ಸಂಸತ್ತು ಹಾಗೂ ಸಂವಿಧಾನದ ಅಡಿಯಲ್ಲಿ ನಮ್ಮ ದೇಶ ನಮ್ಮ ಊರು ಶಾಲೆಗಳು ನಡೆಯಬೇಕಾಗಿದೆ ಸಂವಿಧಾನ ಮಕ್ಕಳ ನಾಯಕತ್ವ ಗುಣಗಳನ್ನು ಕಲಿಸುತ್ತದೆ.

ಎಂದು ಹೇಳಿದರು ಅದರಂತೆ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಪವಿತ್ರವಾದ ಮತವನ್ನು ಚಲಾಯಿಸಿದರು ಕುಮಾರಿ ಅನಿತಾ ಇವಳು ಮಕ್ಕಳ ಹಾಗೂ ಮಂತ್ರಿಗಳ ಕುರಿತು ಅವರ ಜವಾಬ್ದಾರಿಗಳನ್ನು ಕುರಿತು ಹೇಳಿದಳು… ಪ್ರೌಢಶಾಲೆಯ ರಾಘವೇಂದ್ರ ಆಶ್ರಿತ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲೆಯ ಬಾಲಪ್ಪ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನುಡಿಗಳನ್ನು ಹೇಳಿದರು ಇಂದಿನ ಶಾಲಾ ಸಂಸತ್ತಿನಲ್ಲಿ ಪ್ರಾಥಮಿಕ ಶಾಲೆಯ, ಪ್ರಧಾನಮಂತ್ರಿ ಯಾಗಿ ಕುಮಾರಿ ತನುಶ್ರೀ ಏಳನೇ ತರಗತಿ ಆದರೆ ಪ್ರೌಢಶಾಲೆಯ ಪ್ರಧಾನ ಮಂತ್ರಿ ಕುಮಾರಿ ಅಂಜಲಿ 10ನೇ ತರಗತಿಯ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದರು ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು ಕಾರ್ಯಕ್ರಮದ ಸ್ವಾಗತವನ್ನು ಪ್ರೌಢಶಾಲಾ ಶಿಕ್ಷಕರಾದ ಶ್ರೀ ಆಶ್ರೀತವರು ಮಾಡಿದರೆ ಪ್ರಾಸ್ತಾವಿಕವಾಗಿ ಶ್ರೀ ನಾಗಪ್ಪ ಶಿಕ್ಷಕರು ಮಾಡಿದರು ನಿರೂಪಣೆಯನ್ನು ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸುಧಾಮಣಿ ಇವರು ಮಾಡಿದರು

