ಜೂ.10ಕ್ಕೆ ಶರಣೋತ್ಸವ…

ಗಂಗಾವತಿ : ತಾಲೂಕಿನ ಅರಳಿಹಳ್ಳಿ ಗ್ರಾಮದ ಶ್ರೀ ರಾಜರಾಜೇಶ್ವರಿ ಬೃಹನ್ಮಠದಲ್ಲಿ ಜು.10ರಂದು ಗುರುವಾರ ದಾಸೋಹ ಮೂರ್ತಿ ಪೂಜ್ಯ ಶ್ರೀ ಶರಣಬಸವಾರ್ಯ ತಾತನವರ 16ನೇ ವರ್ಷದ ಶರಣೋತ್ಸವ ನಡೆಯಲಿದೆ.ಶರಣೋತ್ಸವ ಅಂಗವಾಗಿ ಬೃಹನ್ಮಠದಲ್ಲಿ ಕಳೆದ ಜೂ.20ರಿಂದ ಕಲಿಯುಗದ ಕಾಮಧೇನು ಕಲ್ಬುರ್ಗಿ ಶ್ರೀ ಶರಣ ಬಸವೇಶ್ವರರ ಪುರಾಣ ಪ್ರವಚನ ನಡೆದಿದ್ದು ಶರಣೋತ್ಸವದಲ್ಲಿ ಮಂಗಲಗೊಳ್ಳಲಿದೆ.ಸುಳೇಕಲ್ ಭುವನೇಶ್ವರಯ್ಯ ತಾತ, ಅರಳಿಹಳ್ಳಿಯ ಗವಿಸಿದ್ದೇಶ್ವರ ತಾತನವರ ನೇತೃತ್ವದಲ್ಲಿ ಶರಣೋತ್ಸವ ಜರುಗಲಿದೆ.ಶರಣೋತ್ಸವ ದಿನದಂದು ತಾತನವರ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಗ್ಗೆ 11ಗಂಟೆಗೆ ಮಠದ ಭಕ್ತರಿಂದ ತುಲಾಭಾರ ನಡೆಯಲಿದೆ. ಮಧ್ಯಾಹ್ನ 12ಗಂಟೆಗೆ ಸಾಮೂಹಿಕ ವಿವಾಹಗಳು ಹಾಗೂ ಪೂಜ್ಯರಿಂದ ಆಶೀರ್ವಚನ ನಡೆಯಲಿದೆ. ನಂತರ ಸಂಜೆ 4ಗಂಟೆಗೆ ಡೊಳ್ಳು, ಭಾಜಾ ಭಜಂತ್ರಿಯೊಂದಿಗೆ ಶ್ರದ್ಧೆ ಭಕ್ತಿಯಿಂದ ಶರಣೋತ್ಸವ ಜರುಗುವುದು. ವೇದಿಕೆ ಕಾರ್ಯಕ್ರಮದಲ್ಲಿ ‘ಜನ ಸೇವಕ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಸರ್ವ ಭಕ್ತಾಧಿಗಳು ಪಾಲ್ಗೊಂಡು ತಾತನವರ ಕೃಪೆಗೆ ಪಾತ್ರರಾಗುವಂತೆ ಬೃಹನ್ಮಠ ಕೋರಿದೆ.

