ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಮಂತ್ರಾಲಯದ ಪಾದಯಾತ್ರೆ ಸಂಪನ್ನ. ಧಾರ್ಮಿಕತೆಯಿಂದ ಮಾತ್ರ ಧರ್ಮ ಜಾಗೃತಿ. ಮಾಜಿ ಶಾಸಕ ಪರಣ್ಣ ಮುನವಳ್ಳಿ.

ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಮಂತ್ರಾಲಯದ ಪಾದಯಾತ್ರೆ ಸಂಪನ್ನ. ಧಾರ್ಮಿಕತೆಯಿಂದ ಮಾತ್ರ ಧರ್ಮ ಜಾಗೃತಿ. ಮಾಜಿ ಶಾಸಕ ಪರಣ್ಣ ಮುನವಳ್ಳಿ…

ಗಂಗಾವತಿ. ಹಿರೇ ಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜ. ನವೃಂದಾವನ ಭಜನಾ ಮಂಡಳಿ ನೇತೃತ್ವದಲ್ಲಿ ಆಯೋಜಿಸಿದ ನಾಲ್ಕನೆಯ ವರ್ಷದ ಮಂತ್ರಾಲಯ ಪಾದಯಾತ್ರೆ ಶುಕ್ರವಾರ ದಿನದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ. ಉದ್ಯಾಪನ ದೊಂದಿಗೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಿ ಮಾತನಾಡಿ ಸನಾತನ ಎಂಬುವುದು ಪರಂಪರೆ ಸಂಸ್ಕೃತಿಯ ಪ್ರತೀಕವಾಗಿದೆ ಪ್ರಸ್ತುತ ದಿನಮಾನಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಧರ್ಮಕ್ಕೆ ಅಪಚಾರ ವೇ ಸಗಳಾಗುತ್ತಿದೆ ಇಂತಹ ಸಂದೀಪ್ ಪರಿಸ್ಥಿತಿಯಲ್ಲಿ ಹೆಚ್ಚು ಹೆಚ್ಚು ಧಾರ್ಮಿಕತೆ ಮನೋಭಾವನೆ ಬೆಳೆಸುವುದರ ಜೊತೆಗೆ ಧರ್ಮರಕ್ಷಣೆಗಾಗಿ ಪ್ರತಿಯೊಬ್ಬರೂ ಮುಂದಾಗಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು. ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶೆಟ್ಟಿ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ನವಲಿಯ ಭೋಗಾ ಪುರೇಶ್ ಕನ ಕಗಿರಿಯ ಶ್ರೀ ಕನಕಾ ಚ ಲಪತಿ ವೆಂಕಟಗಿರಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೇರಿದಂತೆ ಆನೆಗುಂದಿಯ ನವ ಬೃಂದಾವನ ಗಡ್ಡೆ ಸೇರಿದಂತೆ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಪಾದಯಾತ್ರೆಯನ್ನು ಪ್ರತಿ ವರ್ಷ ನಡೆಸುತ್ತಾ ಬರಲಾಗಿದೆ. ಇಂತಹ ಪಾದಯಾತ್ರೆಗಳಿಗೆ ಮಾರ್ಗದ ಉದ್ದಕ್ಕೂ ಸಹಕರಿಸಿದ ಸರ್ವರಿಗೂ ಭಗವಂತ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. 150 ಭಕ್ತರಿಂದ ಜರುಗಿದ ಪಾದಯಾತ್ರೆ. ಮಂತ್ರಾಲಯಕ್ಕೆ ಆಗಮಿಸಿದಾಗ 500ಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿರುವುದು ಸಂತಸದಾಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಕರಿಸಿದ ಗಣ್ಯರಿಗೆ ಗೌರವ ಸಮರ್ಪಣೆ ನಡೆಸಲಾಯಿತು. ಇದಕ್ಕೂ ಪೂರ್ವದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಅರ್ಚಕರು ಸೇರಿದಂತೆ ವೇದಮೂರ್ತಿ ಗುರುಭೀಮ್ ಭಟ್ ನೆರವೇರಿಸಿದರು. ಭಜನೆ. ಉಡಿ ತುಂಬುವಿಕೆ. ಮಹಾಪ್ರಸಾದ ವ್ಯವಸ್ಥೆ ನಡೆಸಲಾಯಿತು. ಸತ್ಯನಾರಾಯಣ. ಚಂದ್ರಶೇಖರ್ ಹಣವಾಳ್. ರಾಘವೇಂದ್ರ ಶೆಟ್ಟಿ ಗಂಗಾವತಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪ ರಾಣಿ. ಈಶ್ವರ ಶೆಟ್ಟಿ ಸೇರಿದಂತೆ ವಿವಿಧ ಭಾಗಗಳಿಂದ ಆರ್ಯವೈಶ್ಯ ಸಮಾನ ಬಾಂಧವರು ಪಾಲ್ಗೊಂಡಿದ್ದರು...

Leave a Reply

Your email address will not be published. Required fields are marked *