ಆನೆಗುಂದಿ ಹೋಬಳಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು…!

ಅತ್ಯಾಚಾರ, ಸುಲಿಗೆ, ದೌರ್ಜನ್ಯಗಳು, ದಬ್ಬಾಳಿಕೆ ತಡೆಯಲು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ ನಾಯಕ ಅಗ್ರಹ:

ಗಂಗಾವತಿ: 26
ದಿನಾಂಕ 20-04-2025 ರಂದು ನಮ್ಮ ಸಮಾಜದ ಆನೆಗುಂದಿ ಹೋಬಳಿಯ ಅಧ್ಯಕ್ಷರಾದ ಯಮನಪ್ಪ ತಂದೆ ಭೀಮಣ್ಣ, ಸಾ॥ ಬಸವನದುರ್ಗ, ತಾ॥ ಗಂಗಾವತಿ, ಜಿ|| ಕೊಪ್ಪಳ ಇವರ ಮೇಲೆ ಸಂಗಾಪೂರ ಗ್ರಾಮದ ಯುವ ಪುಂಡರು ಅನಾವಶ್ಯಕ ವಿಷಯವಾಗಿ ಮಾರಣಾಂತಿಕ ಹಲ್ಲೆ ಮಾಡಿ, ಚಾಕುವಿನಿಂದ ಚುಚ್ಚಿ, ಕಲ್ಲಿನಿಂದ ಹೊಡೆದು ತೀವ್ರ ಸ್ವರೂಪದ ಗಾಯಗಳನ್ನು ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ. ಈ ರೀತಿಯ ಪ್ರಕರಣಗಳು ನಡೆಯುವುದರಿಂದ ಜಾತಿ ವೈಷಮ್ಯ ಉಂಟಾಗಿ ಸಾಮಾಜಿಕ ಅಶಾಂತಿ ಉಂಟಾಗಿ, ಗಲಭೆಗಳು ಉದ್ಭವಿಸುವ ಲಕ್ಷಣಗಳು ಗೋಚರಿಸುತ್ತಿವೆ. ಈ ರೀತಿಯಾದ ಪ್ರಕರಣಗಳು ಮರುಕಳಿಸದಂತೆ ತಡೆಯಬೇಕು.

ಈಗಾಗಲೇ ಹಲ್ಲೆ ಮಾಡಿದವರ ವಿರುದ್ಧ ಗ್ರಾಮೀಣ ಪೋಲೀಸ್ ಠಾಣೆ, ಗಂಗಾವತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಖ್ಯೆ : 120/2025 ಎಂದು ಇರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಅನೇಕ ಪುಂಡರು ತಪ್ಪಿಸಿಕೊಂಡಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಅವರುಗಳ ವಿರುದ್ದವೂ ಕೂಡ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅದರಂತೆ ಈ ಭಾಗವು ಪಾರಂಪರಿಕ ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಬರುವಂತಹ ಪ್ರವಾಸಿಗರ ಮೇಲೆ ದೌರ್ಜನ್ಯಗಳು ಮತ್ತು ಅತ್ಯಾಚಾರಗಳು, ಸುಲಿಗೆಗಳು ನಡೆಯುತ್ತಿದ್ದು, ಹಲವಾರು ಅನೈತಿಕ ಚಟುವಟಿಕೆಗಳು ಗುಂಡಾಗಿರಿ, ಮಟ್ಕಾ, ಗಾಂಜಾ, ಅಫೀಮು, ಜೂಜಾಟಗಳು ಪ್ರತಿ ದಿನ ನಡೆಯುತ್ತಲೇ ಇವೆ. ಹಾಗೂ ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವಿದ್ಯೆಯನ್ನು ಹರಿಸಿ ಬರುವ ವಿದ್ಯಾರ್ಥಿಗಳ ಮೇಲೆ ಪುಂಡರ ಗುಂಪಿನಿಂದ ದೌರ್ಜನ್ಯ ಹೆಚ್ಚುತ್ತಿದ್ದು, ಅಲ್ಲದೇ ಕಾಲೇಜಿಗೆ ಬರುವ ಯುವತಿಯರ ಮೊಬೈಲ್ ಕಸಿದುಕೊಳ್ಳುವುದು, ಕಾಡಿಸುವುದು ಈ ರೀತಿಯ ಹುಚ್ಚುತನದ ಕೆಲಸವನ್ನು ಪ್ರತಿದಿನ ಮಾಡುತ್ತಿದ್ದಾರೆ. ಇದರಿಂದ ಈ ಭಾಗದ ಕಾಲೇಜುಗಳಿಗೆ ಬರುವ ಯುವಕರು-ಯುವತಿಯರು ಭಯಭೀತರಾಗಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಹಾಳಾಗಲು ಬಹಳಷ್ಟು ದಿನಗಳ ಅವಶ್ಯಕತೆ ಇರುವುದಿಲ್ಲವೆಂದು ಗೋಚರಿಸುತ್ತಿದೆ. ಇದನ್ನು ನಮ್ಮ ವಾಲ್ಮೀಕಿ ಸಮಾಜವು ಪೂರ್ಣ ಪ್ರಮಾಣವಾಗಿ ಖಂಡಿಸುತ್ತಿದ್ದು, ಈ ಎಲ್ಲಾ ಅಕ್ರಮ ಚಟುವಟಿಕೆಗಳು ಕೂಡಲೇ ಸಂಪೂರ್ಣವಾಗಿ ತಡೆಗಟ್ಟಬೇಕು. ಮತ್ತು ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ನಮ್ಮ ಸಮಾಜವು ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಗಂಗಾವತಿ ತಾಲ್ಲೂಕು ಅಧ್ಯಕ್ಷ ವೀರಭದ್ರಪ್ಪ ನಾಯಕ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೆ.ಎನ್.ಪಾಟೀಲ್ ಜಿಲ್ಲಾ ಅಧ್ಯಕ್ಷರು, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಕೊಪ್ಪಳ, ಜೋಗದ ನಾರಾಯಣಪ್ಪ ನಾಯಕ ಸಮಾಜದ ಮುಖಡರು,
ಯಮನೂರಪ್ಪ ತಂದೆ ಭೀಮಣ್ಣ, ಆನೆಗುಂದಿ ಹೋಬಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ತಿಮ್ಮಣ್ಣ ಬಾಳೇಕಾಯಿ ಮಾಜಿ ಗ್ರಾ.ಪಂ ಅಧ್ಯಕ್ಷರು, ಆನೆಗುಂದಿ
ಶ್ರೀಮತಿ ಯಲ್ಲಮ್ಮ ಗಂಡ ಬಸವರಾಜ, ಮಾಜಿ ಗ್ರಾ.ಪಂ ಉಪಾಧ್ಯಕ್ಷರು, ಸಂಗಾಪೂರ
ವೆಂಕಟೇಶ ನಾಯಕ, ಗ್ರಾ.ಪಂ ಸದಸ್ಯರು, ಮಲ್ಲಾಪೂರ ಅಧ್ಯಕ್ಷರು
ಜೋಗದ ಹನುಮಂತಪ್ಪ ನಾಯಕ, ಉಪಾಧ್ಯಕ್ಷರು, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ, ಕೊಪ್ಪಳ
ಶರಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಶ್ರೀಮತಿ ಹುಲಿಗೆಮ್ಮ ಗಂಡ ಹೊನ್ನಪ್ಪ ನಾಯಕ, ಗ್ರಾ.ಪಂ ಅಧ್ಯಕ್ಷರು, ಆನೆಗುಂದಿ, ಶ್ರೀಮತಿ ದುರುಗಮ್ಮ ಗಂಡ ವೆಂಕಟೇಶ, ಮಾಜಿ ಗ್ರಾಪಂ ಅಧ್ಯಕ್ಷರು, ಸಾಣಾಪುರ. ಪಾಂಡುರಂಗ ನಾಯಕ, ಗ್ರಾ.ಪಂ ಸದಸ್ಯರು, ಮಲ್ಲಾಪೂರ
ರೇಣುಕಮ್ಮ ಗಂಡ ಗಂಗಾಧರ ನಾಯಕ, ಗ್ರಾ.ಪಂ ಉಪಾಧ್ಯಕ್ಷರು, ಮಲ್ಲಾಪೂರ ಸೇರಿದಂತೆ ಇತರರು ಹೇಳಿದ್ದಾರೆ.

Leave a Reply

Your email address will not be published. Required fields are marked *