ಪೋಲಿಸ್ ಇಲಾಖೆ ಸ್ನೇಹ ಜೀವಿ ರವಿ ಕನ್ನೆರಮಡುಗೆ,,!ಭಾವಪೂರ್ಣ ಶ್ರದ್ದಾಂಜಲಿ,,

ಪೋಲಿಸ್ ಇಲಾಖೆ ಸ್ನೇಹ ಜೀವಿ ರವಿ ಕನ್ನೆರಮಡುಗೆ,,!ಭಾವಪೂರ್ಣ ಶ್ರದ್ದಾಂಜಲಿ,,

ಕುಕನೂರು : ತಾಲ್ಲೂಕಿನ ಕುದರಿಮೋತಿಯ ರವಿ ಕನ್ನೆರುಮಡು ಜಿಲ್ಲೆಯ ವಿವಿಧ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ದಿ. 06.08.19ರಂದು ಆಕಸ್ಮಿಕ ರಸ್ತೆ ಅಪಘಾತದಲ್ಲಿ ನಿಧನಾರದರು.ಇಂದಿಗೆ ಅವರು ನಮ್ಮ ಗೆಳೆಯರ ಬಳಗವನ್ನು ಅಗಲಿ ಆರು ವರ್ಷಗಳಾಗಿದ್ದು, ಇಂದು ಕುದರಿಮೋತಿಯ ಅವರ ಗೆಳೆಯರ ಬಳಗದಿಂದ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ ನೆರವೇರಿಸಲಾಯಿತು.ಈ ವೇಳೆ ಗೆಳೆಯರು ಮಾಧ್ಯಮದೊಂದಿಗೆ ತಮ್ಮ ಗೆಳೆಯ ರವಿಯವರ ಕುರಿತು ಸವಿ ನೆನಪುಗಳನ್ನು ಹಂಚಿಕೊಂಡರು. ಅವನ ಸರಳತೆ, ಸಾಮಾಜಿಕ ಕಳಕಳಿ, ಎಲ್ಲರೊಂದಿಗೆ ಬೆರೆಯುವ ಗುಣ, ಹಿರಿಯರ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ಮೇಲೆ ಗೌರವವನ್ನು ಹೊಂದಿದ್ದ ಇತನು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ ಎಂದು ಸ್ನೇಹಿತರು ತಿಳಿಸಿದರು.ರವಿ ಕನ್ಯೆರುಮಡು ಇವರು ಸುಮಾರು ಎಂಟು ಹತ್ತು ವರ್ಷಗಳಲ್ಲಿ ಕುಕನೂರು, ಬೇವೂರು, ತಾವರಗೇರಿ ಸೇರಿದಂತೆ ಕಾರಟಗಿಯ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಎಲ್ಲರೊಂದಿಗೂ ಅನ್ಯೂನ್ಯತೆಯ ಸ್ವಭಾವ ಹೊಂದಿದ್ದರು. ಜೊತೆಗೆ ತಾವು ಯಾವ ಗ್ರಾಮದ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಆ ಠಾಣಾ ವ್ಯಾಪ್ತಿಯ ಸಾರ್ವಜನಿಕ ವಲಯದಲ್ಲೂ ಒಳ್ಳೆಯ ವ್ಯಕ್ತಿಯಾಗಿ, ಜಾತಿ, ಭೇದವೆನ್ನದೇ ಎಲ್ಲರೊಂದಿಗೂ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದ್ದು, ಇಂತಹ ಗೆಳೆಯ ನಮಗೆಲ್ಲಾ ಮಾದರಿಯೇ ಸರಿ ಇಂದು ಇಂತಹ ವ್ಯಕ್ತಿತ್ವದ ಗೆಳೆಯ ನಮ್ಮೊಂದಿಗೆ ಇಲ್ಲಾ ಎನ್ನುವ ನೋವು ನಮ್ಮೆಲ್ಲರಿಗೂ ಇದೆ. ಗ್ರಾಮದ ಬಗ್ಗೆ ಆತನಿಗೆ ಇದ್ದ ಹೆಮ್ಮೆ, ಗೌರವ, ಸ್ನೇಹಿತರ ಬಗ್ಗೆ ಇದ್ದ ಕಾಳಜಿ ಹಾಗೂ ಪ್ರೀತಿ ಇಂದು ನಾವೆಲ್ಲರೂ ನೆನೆಯಲೇ ಬೇಕು ಎಂದು ಕುದರಿಮೋತಿಯ ಅವರ ಸ್ನೇಹಿತರ ಬಳಗದವರು ದುಖಃಭರಿತರಾಗಿ ನುಡಿದರು.ಈ ಸಂದರ್ಭದಲ್ಲಿ ಪಂಪನಗೌಡ ಮಾ.ಪಾಟೀಲ್, ಜಿಲಾನಸಾಬ ಮಕಾಂದರ್, ಅಮರೇಶ ತಲ್ಲೂರು, ಮಂಜುನಾಥ ಗಟ್ಟೆಪ್ಪನವರ್, ಹನುಮೇಶ ಗಟ್ಟೆಪ್ಪನವರ್, ಬುಡ್ನೇಸಾಬ ನವಲಿ, ಮಾಜಿ ಗ್ರಾ.ಪಂ.ಅಧ್ಯಕ್ಷ ಮಹಾಂತಪ್ಪ ಸಿಡ್ನಳ್ಳಿ, ವಿಜಯಕುಮಾರ ದಾಸರ್, ಮಂಜುನಾಥ ನಾಗಲಿಕರ,ಗ್ರಾ.ಪಂ.ಸದಸ್ಯ ರವಿ ಕಟಗಿ, ಪಾಪು ಮಕಾಂದರ್, ದುರಗಪ್ಪ ದೂಪಂ, ಜಂಬಣ್ಣ ಹಡಪದ, ಮಂಜುನಾಥ ಮಾಲಿಪಟೀಲ್, ಆನಂದ ಚೌಡ್ಕಿ, ಸೇರಿದಂತೆ ಸ್ನೇಹಿತರು ಇದ್ದರು.

Leave a Reply

Your email address will not be published. Required fields are marked *