ಕೋಡಿಉಗನೆ ಗ್ರಾಮದ ಮಹೇಶ್ ಕೆ. ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ…
ಚಾಮರಾಜನಗರ, ಜು. 26: ಚಾಮರಾಜನಗರ ತಾಲ್ಲೂಕಿನ ಕೋಡಿಉಗನೆ ಗ್ರಾಮದ ಕುಮಾರಸ್ವಾಮಿ ಹಾಗೂ ರತ್ನಮ್ಮ ದಂಪತಿಗಳ ಪುತ್ರರಾದ ಮಹೇಶ್ ಕೆ. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ ವಿಭಾಗದಲ್ಲಿ ಪಿಎಚ್.ಡಿ (ಡಾಕ್ಟರೇಟ್) ಪದವಿ ಪಡೆದಿದ್ದಾರೆ.ಮೈಸೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವೈ.ಬಿ. ಬಸವರಾಜು ಅವರ ಮಾರ್ಗದರ್ಶನದಲ್ಲಿ “Synthesis, Spectral and Biological Studies of Some Nitrogen and Sulphur Containing Heterocyclic Compounds” (ಸಂಶ್ಲೇಷಣೆ, ಸ್ಪೆಕ್ಟ್ರಲ್ ಹಾಗೂ ಕೆಲವು ನೈಟ್ರೋಜನ್ ಮತ್ತು ಸಲ್ಫರ್ ಹೊಂದಿರುವ ಹೆಟೆರೋಸೈಕ್ಲಿಕ್ ಸಂಯುಕ್ತಗಳ ಜೈವಿಕ ಅಧ್ಯಯನಗಳು) ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಪ್ರಸ್ತುತ ಮಹೇಶ್ ಕೆ. ಅವರು ಕೊಳ್ಳೇಗಾಲದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಮಹತ್ವದ ಸಾಧನೆ ಮಾಡಿದ ಮಹೇಶ್ ಕೆ. ಅವರಿಗೆ ಗ್ರಾಮಸ್ಥರು, ಸಂಬಂಧಿಕರು, ಶಿಕ್ಷಣ ತಜ್ಞರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಸಂಶೋಧನಾ ಮತ್ತು ಶೈಕ್ಷಣಿಕ ಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

