ಕಲ್ಮಠದಲ್ಲಿ ಲಿಂಗೈಕ್ಯ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ 105ನೇ ಸ್ಮ ರ್ಣೋತ್ಸವ ಹಾಗೂ ಪುರಾಣ ಪ್ರವಚನ ಸಮಾರಂಭ​…

ಕಲ್ಮಠದಲ್ಲಿ ಲಿಂಗೈಕ್ಯ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ 105ನೇ ಸ್ಮ ರ್ಣೋತ್ಸವ ಹಾಗೂ ಪುರಾಣ ಪ್ರವಚನ ಸಮಾರಂಭ​…

ಗಂಗಾವತಿ: ನಗರದ ಇತಿಹಾಸ ಪ್ರಸಿದ್ಧ ಕಲ್ಮಠದಲ್ಲಿ ಲಿಂಗೈಕ್ಯ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ 105ನೇ ವರ್ಷದ ಸ್ಮ ರ್ಣೋತ್ಸವ, ಶ್ರೀ ಚನ್ನಬಸವ ಶಿವಯೋಗಿಗಳವರ ಪುರಾಣ ಪ್ರವಚನ ಹಾಗೂ ಶರಣ ಸಂಸ್ಕೃತಿ ಸಮಾರಂಭವು ಇದೇ ಜುಲೈ 27ರ ಸೋಮವಾರದಿಂದ ಆಗಸ್ಟ್ 6ರ ಗುರುವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು ತಿಳಿಸಿದ್ದಾರೆ.​ಈ ಕುರಿತು ಕಲ್ಮಠದ ಆವರಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿದಿನ ಸಂಜೆ 7:30 ರಿಂದ ರಾತ್ರಿ 9:00 ಗಂಟೆಯವರೆಗೆ ಪುರಾಣ ಪ್ರವಚನ ಪ್ರವೀಣ ಪಂಡಿತ ಶಿವರಾಜ್ ಶಾಸ್ತ್ರಿಗಳವರಿಂದ ಶ್ರೀ ಚನ್ನಬಸವ ಶಿವಯೋಗಿಗಳವರ ಪುರಾಣ ಪ್ರವಚನ ಜರುಗಲಿದೆ ಎಂದು ವಿವರ ನೀಡಿದರು.​ಜುಲೈ 27ರ ಸೋಮವಾರ ಬೆಳಿಗ್ಗೆ 9:00 ಗಂಟೆಗೆ ಕಂಪ್ಲಿ ಕಲ್ಮಠದ ಅಭಿನವ ಪ್ರಭು ಮಹಾಸ್ವಾಮಿಗಳವರಿಂದ ಷಟ್‌ಸ್ಥಳ ಧ್ವಜಾರೋಹಣ ನೆರವೇರಲಿದೆ.ಪ್ರತಿದಿನ ಸಂಜೆ 7:30 ರಿಂದ 9:00 ರವರೆಗೆ ಪಂಡಿತ ಶಿವರಾಜ್ ಶಾಸ್ತ್ರಿಗಳಿಂದ ಪುರಾಣ ಪ್ರವಚನ.​ವಿಶ್ವ ಧಾರ್ಮಿಕ ವ್ಯವಸ್ಥೆಯಲ್ಲಿ ವೀರಶೈವ ಧರ್ಮವು ವಿಶಿಷ್ಟ ಸ್ಥಾನಮಾನವನ್ನು ಹೊಂದಿದ್ದು, ಮಾನವನ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಗಂಗಾವತಿಯ ಈ ಪುಣ್ಯ ಭೂಮಿಯಲ್ಲಿ ಮಹಾಮಹಿಮರ ಜೀವನ ಸಾಧನೆ ಮತ್ತು ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. “ಮಾನವ ಧರ್ಮಕ್ಕೆ ಜಯವಾಗಲಿ” ಎಂಬ ದಿವ್ಯ ಸಂದೇಶವನ್ನು ಸಾರುವ ಈ ಸಮಾರಂಭದಲ್ಲಿ ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಡಾ. ಕೊಟ್ಟೂರು ಮಹಾಸ್ವಾಮಿಗಳು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *