5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಮನವಿ…

5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಮನವಿ…

ಗಂಗಾವತಿ : 5 ವರ್ಷಕ್ಕಿಂತ ಕಡಿಮೆ ಇರುವ ಎಲ್ಲ ಮಕ್ಕಳಿಗೆ ಎರಡು ಹನಿ ಫೋಲಿಯೋ ಲಸಿಕೆ ಹಾಕಿಸಬೇಕು ಎಂದು ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಹೇಳಿದರು.ತಾಲೂಕಿನ ವಡ್ಡರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಫಲ್ಸ್ ಫೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಗುವಿಗೆ ಪೋಲಿಯೋ ಹನಿ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ​ಜೂನ್ 28 ರಿಂದ ಜುಲೈ 01 ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಪೋಲಿಯೋ ಮುಕ್ತ ಭಾರತದ ಯಶಸ್ಸನ್ನು ಹೀಗೆಯೇ ಮುಂದುವರಿಸಲು ಪ್ರತಿಯೊಬ್ಬ ಪೋಷಕರು ಸಹಕರಿಸಬೇಕು. ಹತ್ತಿರದ ಅಂಗನವಾಡಿ ಕೇಂದ್ರಗಳು ಅಥವಾ ಪೋಲಿಯೋ ಬೂತ್‌ಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.ವಡ್ಡರಹಟ್ಟಿ ಗ್ರಾಮ ಪಂಚಾಯತ್ ಅಂಗನವಾಡಿ ಕಾರ್ಯಕರ್ತೆಯರು ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿ ಒಂದು ದಿನದಲ್ಲಿ ಶೇ. 80% ಗುರಿ ತಲುಪಿದ್ದಾರೆ. ಮನೆ ಮನೆ ಭೇಟಿ ನೀಡಿ ಬಾಕಿ ಉಳಿದ ಮಕ್ಕಳಿಗೆ ಪೊಲಿಯೋ ಹನಿ ಹಾಕಲಿದ್ದಾರೆ. ಎಲ್ಲ ಪಾಲಕರು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸೇರಿ ಇತರರಿದ್ದರು.

Leave a Reply

Your email address will not be published. Required fields are marked *