Change block type or styleChange text alignment

ವಾಲ್ಮೀಕಿ ಮಹರ್ಷಿಯವರ ಮಧುರ ಹೃದಯದಿಂದ ವ್ಯಕ್ತವಾದ ಶ್ಲೋಕಗುಚ್ಚವೇ ಮಹಾಕಾವ್ಯ ರಾಮಾಯಣ- ಪ್ರೊ.ಕರಿಗೂಳಿ..

*ವಾಲ್ಮೀಕಿ ಮಹರ್ಷಿಯವರ ಮಧುರ ಹೃದಯದಿಂದ ವ್ಯಕ್ತವಾದ ಶ್ಲೋಕಗುಚ್ಚವೇ ಮಹಾಕಾವ್ಯ ರಾಮಾಯಣ- ಪ್ರೊ.ಕರಿಗೂಳಿ*ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 26.10.2026ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆದರೆ ತುಂಬಾ ಅರ್ಥಗರ್ಭಿತವಾಗಿ ಆಚರಿಸಲಾಯಿತು, ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಆಡಳಿತ ಸಿಬ್ಬಂದಿ ಸೇರಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಪ್ರಾರಂಭದಲ್ಲಿ ಡಾ.ವಿರುಪಾಕ್ಷ ಕೆ.ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹರ್ಷಿ ವಾಲ್ಮೀಕಿ ರವರು ದೇಶ ಕಂಡ ಶ್ರೇಷ್ಠ ಕವಿಯೋತ್ತಮ ಹಾಗೂ ಮಹಾನ್ ನಾಯಕರು ತದನಂತರ ಮೂಲತಃ ವಾಲ್ಮೀಕಿ ರವರು ದರೋಡೆಕೋರರು ಎನ್ನುವ ವಾದವನ್ನು ನಿರಾಧಾರವಾದುದು ಹಾಗೂ ಸುಳ್ಳು, ಏಕೆಂದರೆ ಅವರೊಬ್ಬ ಜಗತ್ತಿಗೆ ಮಹಾನ್ ಕಾವ್ಯ ರಾಮಾಯಣವನ್ನು ನೀಡಿದ ಆದಿಕವಿ ಎಂದು ಸ್ಮರಿಸಿದರು. ನಂತರ ಮಾತನಾಡಿದ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಂಕರಪ್ಪ ಅವರು ವಿದ್ಯಾರ್ಥಿಗಳಿಗೆ ಮಹರ್ಷಿ ವಾಲ್ಮೀಕಿ ತಮ್ಮ ಅಗಾಧವಾದಂತಹ ಜ್ಞಾನಾಮೃತವನ್ನು ಭಾರತೀಯ ಸಮಾಜಕ್ಕೆ ನೀಡಿದವರು, ಒಬ್ಬ ಶ್ರೇಷ್ಠ ರಾಜ, ಸತಿಪತಿಗಳ ಸಂಬಂಧ,ಸಹೋದರರ ಪ್ರೀತಿ ಮತ್ತು ವಿಶ್ವಾಸ ಹಾಗೂ ಇತರ ಶ್ರೇಷ್ಠ ಮೌಲ್ಯ ಆಗರ ರಾಮಾಯಣ ಮಹಾ ಕಾವ್ಯ ಎಂದರು, ಕವಿ ಮಹರ್ಷಿ ಶ್ರೀ ವಾಲ್ಮೀಕಿ ಅಕ್ಷರ ಜ್ಞಾನಕ್ಕೆ ಇರುವ ಮೌಲ್ಯ ಅರಿತು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉನ್ನತ ಮಾರ್ಗದಲ್ಲಿ ನಡೆಯುವoತೆ ಕಿವಿ ಮಾತು ಹೇಳಿದರು, ತದನಂತರ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ವೀರೇಶ್ ರವರು ಮಾತನಾಡಿ ರಾಮಾಯಣ ಮಹಾ ಕಾವ್ಯ ಸಮಾಜದ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ ಅಂತ ಶ್ರೇಷ್ಠ ಕಾವ್ಯ ರಚಿಸಿದ ಮುನಿಯೋತ್ತಮನನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಗೂಳಿ ಅವರು ಮಾತನಾಡುತ್ತಾ,ಮಹರ್ಷಿ ವಾಲ್ಮೀಕಿ ರಚಿಸಿರುವ ಶ್ರೇಷ್ಠ ದಂತಕತೆಯಾದ ರಾಮಾಯಣವು ಪ್ರಪಂಚಾದ್ಯಂತ ತನ್ನ ಪ್ರಭಾವ ಬೀರಿದೆ ತನ್ಮೂಲಕ ವಿಶ್ವಕ್ಕೆ ಶ್ರೇಷ್ಠ ಮೌಲ್ಯಗಳು ದೊರೆತಿವೆ ಎಂದರು, ಈ ಬಗ್ಗೆ ಮಾತನಾಡುತ್ತಾ, ರಾಮಾಯಣದ ವಿವಿಧ ಪಾತ್ರಗಳು ಮತ್ತು ಆ ಕಾವ್ಯದ ರಸಸ್ವಾದ ಮತ್ತು ಅದನ್ನ ನೀಡಿದ ವಾಲ್ಮೀಕಿಯರನ್ನ ಮಧುರ ಗಾನಕೋಗಿಲೆ ಎಂದು ಸ್ಮರಿಸಿದರು, ಹಾಗೆಯೇ ನಾಡಿನ ಎಲ್ಲಾ ಮಹಾನಾಯಕರು ಇಡೀ ದೇಶ ಮತ್ತು ನಾಡಿಗೆ ಸ್ವಂತವಾದವರು,ಅವರನ್ನು ಒಂದು ಜಾತಿ ವರ್ಗಕ್ಕೆ ಸೀಮಿತಗೊಳಿಸಬಾರದು, ನಾಯಕರು ನೀಡಿದ ಎಲ್ಲಾ ಕೊಡುಗೆಗಳು ಕಾವ್ಯಗಳು ಎಲ್ಲರಿಗೂ ಸ್ವಂತ ,ಮಹಾನ್ ಕಾವ್ಯದ ಮೌಲ್ಯಗಳ ಪರಿಪಾಲನಾ ಸಂದೇಶ ಈಗಿನ ಸಮಾಜಕ್ಕೆ ತುಂಬಾ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ರವಿಕುಮಾರ, ಉಪನ್ಯಾಸಕರಾದ, ಡಾ.ದೇವರಾಜ, ಕನಕಪ್ಪ ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಮತ್ತು ಸಹಾಯಕ ಸಿಬ್ಬಂದಿಯಾದ ಚಿನ್ನವರಪ್ರಸಾದ್, ಶಾಂತಿ, ಶರಣಬಸವ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *