ಹೃದ್ರೋಗ, ಕ್ಯಾನ್ಸರ್, ಕಿಡ್ನಿ ಸ್ಟೋನ್, ಸ್ತಿçÃರೋಗ, ಮಂಡಿನೋವು ಮಕ್ಕಳ ತಪಾಸಣೆ….

ಹೃದ್ರೋಗ, ಕ್ಯಾನ್ಸರ್, ಕಿಡ್ನಿ ಸ್ಟೋನ್, ಸ್ತಿçÃರೋಗ, ಮಂಡಿನೋವು ಮಕ್ಕಳ ತಪಾಸಣೆ….

ಗಂಗಾವತಿಯಲ್ಲಿ ಮೇ.೨೪.೨೫ ಉಚಿತ ಬೃಹತ್ ಆರೋಗ್ಯ ತಪಾಸಣೆ: ಆರ್.ಬಿ.ಪಾಟೀಲ್ಗಂಗಾವತಿ: ಡಾ.ಆರ್.ಬಿ.ಪಾಟೀಲ್ ಪೌಂಡೇಷನ್, ಗಂಗಾವತಿ, ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್, ಗಂಗಾವತಿ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಅತ್ಯಂತ ನುರಿತ ವೈದ್ಯರಿಂದ ನಗರದ ಶ್ರೀ ಭಗೀರಥ ವೃತ್ತದ ಬಳಿ ಇರುವ ಯಶೋಧ ಆಸ್ಪತ್ರೆ ಹಿಂಭಾಗದ ಶ್ರೀ ಸೀತಾರಾಮಾಂಜನೇಯ್ಯ ದೇವಸ್ಥಾನದ ಆವರಣದಲ್ಲಿ ನಾಳೆ ಮೇ.೨೪ ಹಾಗು ೨೫ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಹೃದ್ರೋಗ ಕ್ಯಾನ್ಸರ್ ಕಿಡ್ನಿ ಸ್ಟೋನ್ ಸೇರಿ ಇತರೆ ಗಂಭೀರ ಕಾಯಿಲೆಗಳ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಜಿಸಲಾಗಿದೆ ಎಂದು ಡಾ.ಆರ್.ಬಿ.ಪಾಟೀಲ್ ಪೌಂಡೇಷನ್ ಅಧ್ಯಕ್ಷ ಆರ್.ಬಿ.ಪಾಟೀಲ್ ವಕೀಲರು ತಿಳಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದೇಶಿಸಿ ಮಾತನಾಡಿದರು. ಸ್ತನ ಕ್ಯಾನ್ಸರ್, ಅಪಂಡಿಸೈಟಿಸ್, ಮಕ್ಕಳ ರೋಗ, ಸ್ತಿç ರೋಗ ಪ್ರಸೂತಿ, ಯಲಬು ಕೀಲು ರೋಗ, ನರರೋಗ, ಬೆನ್ನು ನೋವು, ಗುತ್ತಿಗೆ ನೋವು, ಕಿವಿ ಮೂಗು ಗಂಟಲು ತೊಂದರೆ, ಕಣ್ಣಿನ ತಪಾಸಣೆ, ಮೆದುಳಿನ ಗಡ್ಡೆ, ಬಿಪಿ ಶುಗರ್ ಸೇರಿ ಮುವತ್ತಕ್ಕು ಹೆಚ್ಚು ಕಾಯಿಲೆಗಳ ಉಚಿತ ತಪಾಸಣೆ ನೆಡೆಸಲಾಗುತ್ತಿದ್ದು, ರೋಗಗಳು ಕಂಡು ಬಂದಲ್ಲಿ ಬಿಪಿಎಲ್, ಅಂತ್ಯೋದಯ, ಯಶಸ್ವಿನಿ ಕಾರ್ಡುದಾರರಿಗೆ ಉಚಿತ ತಪಾಸಣೆ ಚಿಕಿತ್ಸೆ ಮಾಡಲಾಗುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನೆ ಪಡೆಯಬೇಕೆಂದು ಮನವಿ ಮಾಡಿದರು.ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘ ರಾಜ್ಯ ಘಟಕ ಗಂಗಾವತಿ ಹಾಗು ವಿಐಪಿ ಮೆಲೋಡಿಸ್ ಗಂಗಾವತಿ ನಮ್ಮೊಂದಿಗಿದ್ದು, ಆರ್ಥಿಕವಾಗಿ ಹಿಂದುಳಿದ ಜನರು ಖಾಸಗಿ ಆಸ್ಪತ್ರೆಗಳ ಶುಲ್ಕಕ್ಕೆ ಹೆದರಿ ತಪಾಸಣೆ ನಡೆಸದೆ ರೋಗ ಉಲ್ಬಣಕ್ಕೆ ಕಾರಣರಾಗುತ್ತಿದ್ದು ಅವರಿಗೆ ಅನುಕೂಲವಾಗಲಿ ಎಂದು ಸಹಯೋಗದೊಂದಿಗೆ ತಪಾಸಣಾ ಶಿಬಿರ ಏರ್ಪಡಿಸಿದ್ದೇವೆ, ಕಾರ್ಯಕ್ರಮವನ್ನು ಸುಳೆಕಲ್‌ನ ಶ್ರೀ ಭುವನೇಶ್ವರಯ್ಯ ಶ್ರೀಗಳು ಉದ್ಘಾಟಿಸುತ್ತಿದ್ದು, ದಿವ್ಯ ಸಾನಿಧ್ಯವನ್ನು ಅರಳಹಳ್ಳಿಯ ಶ್ರೀ ಗವಿಸಿದ್ದೇಶ್ವರ ಶ್ರೀಗಳು,ಜಾಮಿಯ ಮಜೀದ್ ಗುರುಗಳಾದ ಮೌಲಾನಾ ಕಮಾಲ್ ಪಾಶಾ ನಕ್ಷಬಂದಿ ಅಲ್ ಖಾದ್ರಿ ಸಾಬ್ ವಹಿಸುವರು. ವೇದಿಕೆಯಲ್ಲಿ ಗಂಗಾವತಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್, ಶ್ರೀ ಭಗೀರಥ ಉಪ್ಪಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಪ್ಪ ಅಮರಜ್ಯೋತಿ, ವೈದ್ಯಾಧಿಕಾರಿ ಈಶ್ವರ ಸವಡಿ, ಗಂಗಾವತಿ ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ವೆಂಕಟೇಶ್ ಅಮರಜ್ಯೋತಿ, ಡಾ.ಆರ್.ಬಿ.ಪಾಟೀಲ್ ಪೌಂಡೇಷನ್ ಅಧ್ಯಕ್ಷ ಕಾರ್ಯಕ್ರಮದ ರೋವಾರಿ ಡಾ.ಆರ್.ಬಿ.ಪಾಟೀಲ್ ವಕೀಲರು ಪಾಲ್ಗೊಳ್ಳುವರ ಎಂದು ವಿವರಿಸಿದರು. ಕರ್ನಾಟಕ ರಾಜ್ಯ ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ರಾಜ್ಯಧ್ಯಕ್ಷ ಶಿವಕುಮಾರ್ ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ರಾಮು ಹಂಚಿನಾಳ್ ಹಾಗು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಗೋಪಾಲ್ ಇದ್ದರು.

Leave a Reply

Your email address will not be published. Required fields are marked *