ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಪ್ರಕಾಶ್ ಎಲ್. ಮಾಳಿ ಅವರಿಗೆ ಮಾಧ್ಯಮ ಸಂಘದಿಂದ ಸನ್ಮಾನ.

ಗಂಗಾವತಿ: ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಗಂಗಾವತಿ ನಗರ ಠಾಣೆಯ ಸಿಪಿಐ ಪ್ರಕಾಶ್ ಎಲ್. ಮಾಳಿ ಅವರನ್ನು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ನಗರದ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ, ಸಿಪಿಐ ಪ್ರಕಾಶ್ ಎಲ್. ಮಾಳಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರತಿನಿಧಿಗಳು, ಸಾರ್ವಜನಿಕ ಸೇವೆಯಲ್ಲಿ ತೋರಿದ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಅಪರಾಧ ನಿಯಂತ್ರಣದಲ್ಲಿ ತೋರಿದ ಚಾತುರ್ಯಕ್ಕಾಗಿ ಮುಖ್ಯಮಂತ್ರಿ ಪದಕ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.ಸಿಪಿಐ ಪ್ರಕಾಶ್ ಎಲ್. ಮಾಳಿ ಅವರು ಮಾತನಾಡಿ, ಈ ಗೌರವಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಸಂಘಟನೆಗಳು ಮತ್ತು ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ತಿಳಿಸಿದರು. ಮುಂದೆಯೂ ಜನರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇನ್ನಷ್ಟು ಶ್ರಮಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮತ್ತು ಭೀಮ ಘರ್ಜನೆ ಪತ್ರಿಕೆಯ ಸಂಪಾದಕರಾದ ರಮೇಶ್.ಕೋಟಿ, ಕನಸು ನ್ಯೂಸ್ ಸಂಪಾದಕರಾದ ರಾಮಕೃಷ್ಣ c.d, ವಾಯ್ಸ್ ಆಫ್ ಕ್ರೈಂ ವರದಿಗಾರ ಮಾರ್ಕಂಡೇಯ, ಸಿಬಿಎಸ್ ನ್ಯೂಸ್ ವಾಹಿನಿಯ ಮಾಲೀಕರಾದ ಶ್ರೀನಿವಾಸ, ಸೆಕ್ಯುಲರ್ ವಾಯ್ಸ್ ತಾಲೂಕು ವರದಿಗಾರರಾದ ಎಮ್.ಡಿ.ಗೌಸ್, ಕಲ್ಯಾಣ ಸಮಯ ಜಿಲ್ಲಾ ವರದಿಗಾರರಾದ ಚನ್ನಬಸವ ಮಾನ್ವಿ, ಸೇರಿದಂತೆ ಪದಾಧಿಕಾರಿಗಳು, ಉಪಸ್ಥಿತರಿದ್ದರು.
