“ಶ್ರಮಜೀವಿ ಸಂಘದ 5ನೇ ವಾರ್ಷಿಕೋತ್ಸವ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ವೈದ್ಯರು–ಸಿಬ್ಬಂದಿಗೆ ಗೌರವ ಸನ್ಮಾನ”

“ಶ್ರಮಜೀವಿ ಸಂಘದ 5ನೇ ವಾರ್ಷಿಕೋತ್ಸವ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ವೈದ್ಯರು–ಸಿಬ್ಬಂದಿಗೆ ಗೌರವ ಸನ್ಮಾನ”…

ದಿನಾಂಕ್ ಏಳರಂದು ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸೇವಾ ಸಂಘದ ಐದನೆಯ ವಾರ್ಷಿಕೋತ್ಸವ./ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾಕ್ಟರ್ ಈಶ್ವರ ಸವದಿ ಶ್ರಮಜೀವಿ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಸರ್ವ ಸಿಬ್ಬಂದಿಗಳಿಗೆ ಗೌರವ ಸನ್ಮಾನ./ ಗಂಗಾವತಿ. 6..ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘ ಐದನೆಯ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ 7 ರಂದು ನಗರದ ಸಾರ್ವಜನಿಕ ಆಸ್ಪತ್ರೆಯ ಸರ್ವ ಸಿಬ್ಬಂದಿ ವರ್ಗದವರಿಗೆ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಗೌರವ ಸನ್ಮಾನ ಸಮರ್ಪಣೆ ಆಯೋಜಿಸಲಾಗಿದೆ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಕುಮಾರ್ ಗೌಡ ಜಿಲ್ಲಾ ಅಧ್ಯಕ್ಷ ಪಂಪಾಪತಿ ಇಂಗಳಗಿ ಹೇಳಿದರು. ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಂಗಳವಾರ ದಿನದಂದು ಬೆಳಿಗ್ಗೆ 10:00ಗೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಶಾಸಕರು ಸೇರಿದಂತೆ ಮಾಜಿ ಶಾಸಕರು ರಾಜಕೀಯ ಗಣ್ಯರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರುಗಳು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಮಹಾನ್ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತವಾಗಿ ಸಾರ್ವಜನಿಕ ಆಸ್ಪತ್ರೆಯ ಉಪವಿಭಾಗದ ಆಡಳಿತ ಅಧಿಕಾರಿ ಈಶ್ವರ ಸವಡಿ ವೈದ್ಯರಿಗೆ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅವರ ಪ್ರಾಮಾಣಿಕ ನಿಷ್ಠೆ ಸೇವೆ ಹಾಗೂ ಹೈ ಟೆಕ್ ಆಸ್ಪತ್ರೆಯನ್ನಾಗಿ ಸೇವೆ ಸಲ್ಲಿಸುತ್ತಿರುವ ಸರ್ವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು ಹಾಗೆ ಕರ್ನಾಟಕ ರಾಜ್ಯಾದ್ಯಂತ 5000 ಅಧಿಕ ಸದಸ್ಯರನ್ನು ಒಳಗೊಂಡಂತಹ ಕಾರ್ಮಿಕರು ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆರೋಗ್ಯವಂತ ವ್ಯಕ್ತಿ ನಿಜವಾದ ದೇಶದ ಸಂಪತ್ತು ಎನ್ನುವ ಹಾಗೆ ಈ ಹಿಂದೆ ಕರೋನಾ ಸಂದರ್ಭದಲ್ಲಿ ಅತ್ಯುತ್ತಮವಾದ ಸೇವೆ ಸಲ್ಲಿಸಿದ್ದನ್ನು ಯಾರು ಮರೆಯುವಂತಿಲ್ಲ ಎಂದು ತಿಳಿಸಿದರು. ಇನ್ನು ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ದೊರೆಯಬಹುದಾದ ವಿವಿಧ ಸೌಲಭ್ಯಗಳ ಕುರಿತು ಚಿಂತನ ಮಂಥನ ಹಾಗೂ ಹಲವು ಬೇಡಿಕೆಗಳನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಸದರಿ ಆಸ್ಪತ್ರೆಗೆ ಎಲಬು ಮತ್ತು ಕೀಲು ತಜ್ಞರನ್ನು ನೇಮಕ ಮಾಡುವಂತೆ ಉಪ ವಿಭಾಗದ ಆಡಳಿತ ಅಧಿಕಾರಿಗಳಿಗೆ ಮನವಿಯ ಮೂಲಕ ಒತ್ತಾಯಿಸಲಾಗುವುದು. ಈ ಹಿಂದೆ ಕಳೆದು ನಾಲ್ಕು ವರ್ಷಗಳ ವಾರ್ಷಿಕೋತ್ಸವದಲ್ಲಿ ರಕ್ತದಾನ ಶಿಬಿರ ನಗರಸಭೆಯ ಕಾರ್ಮಿಕರಿಗೆ ಸನ್ಮಾನ ಹೀಗೆ ವೈವಿಧ್ಯಮಯ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಸಂಘದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ಹೇಳಿದರು ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಮೇಸ್ತ್ರಿ ತಾಲೂಕ ಅಧ್ಯಕ್ಷ ಹನುಮಂತ.ಉಪಾಧ್ಯಕ್ಷ ಬಸವರಾಜ್ ರಾಜ್ಯ ಖಜಾಂಚಿ ವೀರೇಶ್ ಕಂದಗಲ್ ತಾಲೂಕ ಅಧ್ಯಕ್ಷ ಹನುಮಂತ ಚಂದ್ರು ಇಮಾಮ್ ಸಾಬ್ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *