ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು: ಹೆಚ್.ಎಂ. ಸಿದ್ದರಾಮ ಸ್ವಾಮಿಎಸ್.ಎಂ.ಬಿ.ಎಸ್ ಶಿಕ್ಷಣ ಮಹಾವಿದ್ಯಾಲಯದ ಬಿ.ಇ‌ಡಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಅದ್ಧೂರಿ ಸ್ವಾಗತ ಸಮಾರಂಭ…

ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು: ಹೆಚ್.ಎಂ. ಸಿದ್ದರಾಮ ಸ್ವಾಮಿಎಸ್.ಎಂ.ಬಿ.ಎಸ್ ಶಿಕ್ಷಣ ಮಹಾವಿದ್ಯಾಲಯದ ಬಿ.ಇ‌ಡಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಅದ್ಧೂರಿ ಸ್ವಾಗತ ಸಮಾರಂಭ…

ಗಂಗಾವತಿ: ಸಮಾಜದಲ್ಲಿ ಶಿಕ್ಷಣ ವೃತ್ತಿಗೆ ಬಹಳ ಗೌರವವಿದ್ದು, ಶಿಕ್ಷಕರ ವೃತ್ತಿ ಅತ್ಯಂತ ಶೇಷ್ಠವಾದದ್ದು ಎಂದು ಎಮ್.ಎಸ್.ಎಮ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹೆಚ್.ಎಂ. ಸಿದ್ದರಾಮ ಸ್ವಾಮಿ ಅವರು ಹೇಳಿದರು.ತಾಲ್ಲೂಕಿನ ಮರಳಿಯ ರುದ್ರೇಶ್ವರ ಎಸ್.ಎಂ.ಬಿ.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಬಿ.ಇ‌ಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.2015-16 ಸಾಲಿನಲ್ಲಿ ಎಸ್.ಎಂ.ಬಿ.ಎಸ್. ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕೋರ್ಸ್ ಪ್ರಾರಂಭಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಸಂಸ್ಥೆಗೆ ಉತ್ತಮ ಫಲಿತಾಂಶ ತಂದಿರುವ ಪ್ರಶಿಕ್ಷಣಾರ್ಥಿಗಳ ಸಾಧನೆ ಸಂತಸ ತಂದಿದೆ ಎಂದರು.ಎಮ್.ಎಸ್.ಎಮ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಡತನ ಹಿನ್ನಲೆಯ ಮಕ್ಕಳು‌ ಇಂದು‌ ಅನೇಕ‌ ಕಡೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಂಸ್ಥೆ ‌ನಿಮ್ಮದು, ನೀವೂ ಪಾಲುದಾರರಾಗಿದ್ದು, ಎಲ್ಲರೂ ಅಭಿವೃದ್ಧಿಗೆ ಶ್ರಮಿಸಿ ಎಂದು ಶುಭಕೋರಿದರು.ಎಮ್.ಎಸ್.ಎಮ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಎಂ. ಬಸವರಾಜ ಸ್ವಾಮಿ, ಮಾತನಾಡಿ, ಸಂಸ್ಥೆಯೂ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಉನ್ನತ ಸ್ನಾನ ಪಡೆದಿದ್ದು, ಅನೇಕರು ಸರ್ಕಾರಿ ಹುದ್ದೆಯಲ್ಲಿದ್ದು‌. ಸಂಸ್ಥೆಯಿಂದ ಉತ್ತ‌ಮ ಶಿಕ್ಷಕರನ್ನು‌ ಸಮಾಜಕ್ಕೆ‌ ನೀಡಿದೆ. ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲು ತಯಾರಿಯಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ ಎ‍ಂದರು. ಶಿಕ್ಷಕ ವೃತ್ತಿ ಗೌರವದಿಂದ ಕೂಡಿದ್ದು. ನಿಮ್ಮ ಆಯ್ಕೆ ಶ್ರೇಷ್ಠವಾದದ್ದು. ತಿದ್ದು ತೀಡಲು ಒಳ್ಳೆಯ ವೃತ್ತಿಯಾಗಿದೆ. ಸಂಸ್ಥೆಯೂ ನಿಮಗೆ ಎಲ್ಲರೀತಿಯಿ‍ಂದಲೂ ಸಹಕಾರ ನೀಡಲು ಮುಂದೆಯಿದೆ. ಕೋರ್ಸ್ ಮುಗಿದ‌ ನಂತರವೂ ನಿಮ್ಮೊಂದಿಗೆ ಸಂಸ್ಥೆ ಇರುತ್ತದೆ‌. ಟಿಇಟಿಗೆ ಉಪನ್ಯಾಸಕರ ಸಹಕಾರವಿರುತ್ತದೆ. ಎಲ್ಲಾ ವಿಚಾರದಲ್ಲಿ ಸಂಸ್ಥೆ ಬದ್ಧವಾಗಿರುತ್ತದೆ ಎಂದು ಭರವಸೆ ನೀಡಿದರು.ಕಾಲಮಾನಕ್ಕೆ‌ ಅನುಗುಣವಾಗಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿ. ವಿಶೇಷ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ನಿಮ್ಮ‌ ವೃತ್ತಿಗೆ ಅನುಕೂಲವಾಗಲಿದೆ‌‌ ಎಂದು ಸಲಹೆ ನೀಡಿದರು.ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಹೆಚ್.ಎಂ. ಸ್ವಾತಿ ಬಸವರಾಜ ಸ್ವಾಮಿ ಅವರು ಮಾತನಾಡಿ, ಶಿಕ್ಷಕ ವೃತ್ತಿ ಒಳ್ಳೆಯದಾಗಿದ್ದು, ನಿಮ್ಮ ಆಯ್ಕೆ‌ ಸರಿಯಾಗಿದ್ದು. ಉತ್ತಮ ಅಭ್ಯಾಸದಿಂದ ಸಾಧನೆ‌ ಮಾಡಬೇಕು. ತಂದೆ-ತಾಯಿಗಳ ಆಸೆ ಈಡೇರಿಸಿ ಎಂದು ಶುಭಕೋರಿದರು. ಎಂ.ಎಸ್.ಎಂ.ಎಸ್ ಪಿಯು ಹಾಗು ಪದವಿ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ‌‌ ಸ್ವಾಮಿ ಮಾತನಾಡಿ, ಶಿಕ್ಷಕರಾದವರಿಗೆ ಮಕ್ಕಳ‌ ಉನ್ನತ ಶಿಕ್ಷಣ ಬಗ್ಗೆ ಗಮನವಿರಬೇಕು. ಶಿಕ್ಷಕರಿಗೆ ಸಮಾಜದಲ್ಲಿ‌ ಉತ್ತಮ ಗೌರವ ಸ್ಥಾನಮಾನ ಹಾಗೂ ಪವಿತ್ರವಾದದ್ದು. ಸಂಸ್ಥೆಯಲ್ಲಿ ಸಿಗುವ ತರಬೇತಿಯನ್ನು‌ ಸರಿಯಾಗಿ ಸದುಪಯೋಗ ಪಡೆದುಕೊಳ್ಳಿ. ತಂದೆ ತಾಯಿಗಳ ಕನಸು ನನಸು ಮಾಡಿ ಎಂದು ಸಲಹೆ‌‌ ನೀಡಿದರು. ಎಸ್.ಎಮ್.ಬಿ.ಎಸ್ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಪ್ರಾಂಶುಪಾಲರಾದ ಹುಸೇನ್ ಪೀರ್ ಮಾತನಾಡಿ, 1994-95ರಲ್ಲಿ ಪ್ರೌಢಶಾಲೆ ಮೊದಲು ಪ್ರಾರಂಭವಾಗಿ ಇಂದು ಸಂಸ್ಥೆ ಹೆಮ್ಮರವಾಗಿ ಬೆಳದಿದೆ. ಸಂಸ್ಥೆಯ ಅಧ್ಯಕ್ಷರಾದ ಸಿದ್ದರಾಮ ಸ್ವಾಮಿ ಅವರ ಪರಿಶ್ರಮ ಶ್ಲಾಘನೀಯವಾದದ್ದು. ಸಂಸ್ಥೆಯಲ್ಲಿ‌ ಕಲಿತ ವಿದ್ಯಾರ್ಥಿ ಇಂದು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದು, ಕಾಲೇಜಿಗೆ ಗೌರವ‌ ಗೌರವ ತಂದಿದ್ದಾರೆ. ಎಲ್ಲರೂ ಮೆಚ್ಚುವ ಕೋರ್ಸ್ ಬಿ.ಇಡಿ‌. ಆಗಿದ್ದು, ಈ ಭಾಗದಲ್ಲಿ ಪ್ರಾರಂಭಸಿ ಅನುಕೂಲ ಮಾಡಿದ್ದಾರೆ ಎಂದರು.ಉಪನ್ಯಾಸಕರಾದ ಅಂಬರೀಶ್ ಕೆ‌. ಮಾತನಾಡಿ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಅಚ್ಚುಕಟ್ಟಾಗಿ ಕಾರ್ಯಕ್ರಮ ‌ಆಯೋಜನೆ ಮಾಡಲಾಗಿದ್ದು. ಶಿಕ್ಷಕ ವೃತ್ತಿ ತುಂಬಾ ಮೌಲ್ಯಯುತವಾದದ್ದು. ಇಲ್ಲಿ‌ನ ತರಬೇತಿಯಿಂದ ನೀವು ಎಲ್ಲಾ ಕೌಶಲ್ಯ ಕಲಿಯಬಹುದು. ಶಿಕ್ಷಕ ವೃತ್ತಿ ಜವಾಬ್ದಾರಿಯುತವಾಗಿದೆ ಎಂದು ತಿಳಿಸಿದರು.ಉಪನ್ಯಾಸಕರಾದ ಸುಮಂಗಲ ಅವರು‌ ಮಾತನಾಡಿ, ಉನ್ನತವಾದ ಶಿಕ್ಷಣ ವೃತ್ತಿಯನ್ನು ಆಯ್ಕೆ‌ ಮಾಡಿದ್ದೀರಿ. ಬೋಧನಾ ಕೌಶಲ್ಯವನ್ನು ಅಳವಡಿಸಿಕೊಳ್ಳಿ. ಎಲ್ಲರೂ ಆಸಕ್ತಿಯಿಂದ‌ ತರಬೇತಿ ಪಡೆದುಕೊಳ್ಳಿ. ಶಿಕ್ಷಕರ ವೃತ್ತಿ ಅಭದ್ರತೆಯಿಂದ ಕೂಡಿದೆ ಎಚ್ಚರದಿಂದ ಇರಬೇಕು ಎಂದು ಸಲಹೆ‌ ನೀಡಿದರು.ಕೆ.ಆರ್.ಜಿ.ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಮೌನೇಶ್ ಬಡಿಗೇರಿ ಮಾತನಾಡಿ, ಶಿಕ್ಷಕ ವೃತ್ತಿಯನ್ನ ಸಮರ್ಪಕವಾಗಿ ನಿಭಾಯಿಸಿ‌. ಭಾರತದ ಭವಿಷ್ಯ ನಾಲ್ಕು ಗೋಡೆಗಳ‌ ನಡುವೆ ನಿರ್ಧಾರವಾಗುತ್ತಿದೆ. ನಾವು ಪರಿಪೂರ್ಣವಾದ ಜ್ಞಾನದಿಂದ ಬೋಧನೆ ‌ಮಾಡಬೇಕು. ಅಭ್ಯಾಸ ನಿರಂತರವಾಗಿದ್ದರೆ ಮಾತ್ರ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಸಂಸ್ಥೆಯ ಮ್ಯಾನೇಜರ್‌ ಶಂಕರ್ ಗೌಡ ಪಾಟೀಲ್ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾದ ಸಿದ್ದರಾಮ ಸ್ವಾಮಿ ಅವರ ಪರಿಶ್ರಮದಿಂದ ಇಷ್ಟು ಸುಂದರವಾದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಅಂಕ ಪಟ್ಟಿಗಿಂತ ಜ್ಞಾನದ ಬುತ್ತಿ‌ಕಟ್ಟುಕೊಳ್ಳಲು‌ ಶ್ರಮಿಸಿ. ಮಾತ‌ನಾಡಲು ಭಯಪಡದೆ ಧೈರ್ಯದಿಂದ‌ ವೇದಿಕೆಯನ್ನು ನಿಭಾಯಿಸಿ ಎಂದು ಸಲಹೆ ನೀಡಿದರು.ಈ ವೇಳೆ ವಿದ್ಯಾರ್ಥಿಗಳಾದ ಜಯ ಶ್ರೀ, ರಾಧಿಕಾ, ಅರುಣ್ ಕುಮಾರ್, ಸಚೀನ್ ಎಂ, ಭಾಗ್ಯ ಶ್ರೀ‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಾಗತ ಸಮಾರಂಭದ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ಬಹುಮಾನ‌ ವಿತರಣೆ ಮಾಡಲಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಎಮ್.ಎಸ್.ಎಮ್.ಎಸ್‌‌. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹೆಚ್.ಎಂ.ಪಾರ್ವತಿ, ಆಡಳಿತಾಧಿಕಾರಿಗಳಾದ ಹೆಚ್.ಎಂ. ವಿರೂಪಾಕ್ಷಯ್ಯ ಸ್ವಾಮಿ, ಎಂ.ಎಸ್‌.ಎಂ.ಎಸ್ ಕಾನೂನು ವಿದ್ಯಾಲಯದ ಶಿಲ್ಪಾ ಬಿರಾದರ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಜಿಲಾನಿ ಸೇರಿದಂತೆ ಶಿಕ್ಷಣ‌ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *