ಕೊಪ್ಪಳ ಫೆಬ್ರವರಿ 21 – ರೇಡ್ ಬುಕ್ ಡೇ ಆಚರಣೆ..

ಕೊಪ್ಪಳ ಫೆಬ್ರವರಿ 21 – ರೇಡ್ ಬುಕ್ ಡೇ ಆಚರಣೆ..

ಫೆಬ್ರವರಿ 21ನ್ನು ವಿಶ್ವದ ವಿವಿಧ ಭಾಗಗಳಲ್ಲಿ ರೇಡ್ ಬುಕ್ ಡೇ ಎಂದು ಆಚರಿಸಲಾಗುತ್ತದೆ. 1848ರ ಫೆಬ್ರವರಿ 21ರಂದು ಪ್ರಕಟವಾದ The Communist Manifesto ಕೃತಿಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಈ ದಿನಕ್ಕೆ ಐತಿಹಾಸಿಕ ಮಹತ್ವವಿದೆ. ಈ ಕೃತಿ Karl Marx ಮತ್ತು Friedrich Engels ಅವರ ಸಂಯುಕ್ತ ರಚನೆಯಾಗಿದ್ದು, ಬಂಡವಾಳಶಾಹಿಯ ಸ್ವರೂಪ, ವರ್ಗ ಸಂಘರ್ಷ ಹಾಗೂ ಸಮಾನತೆಯ ಸಮಾಜದ ಆಶಯಗಳ ಕುರಿತು ವಿಶ್ಲೇಷಣೆ ನೀಡುತ್ತದೆ.ಈ ಸಂದರ್ಭದಲ್ಲಿ ಮಾತನಾಡಿದ ಎಐಎಡಬ್ಲ್ಯೂಯು ಕಾರ್ಯದರ್ಶಿ ಹುಸೇನಪ್ಪ ಕೆ. ಅವರು, “ಯುಎಸ್ ಅಮೆರಿಕ ಸಾಮ್ರಾಜ್ಯಶಾಹಿ – ಭಾರತದ ಜನತೆಯ ಶತ್ರು” ಎಂಬ ಶೀರ್ಷಿಕೆಯ ಓದುವುದರ ಮೂಲಕ ರೇಡ್ ಬುಕ್ ಡೇ ಕೇವಲ ಒಂದು ಪುಸ್ತಕದ ಸ್ಮರಣೆಯ ದಿನವಲ್ಲ; ಬದಲಿಗೆ ಪ್ರಗತಿಪರ ವಿಚಾರಗಳು, ಸಾಮಾಜಿಕ ನ್ಯಾಯ,ಜಾಗತಿಕ ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಕಾರ್ಮಿಕರ, ರೈತರ, ಕೂಲಿಕಾರರ , ಚಿಂತಕರ ಹಾಗೂ ಚಳವಳಿಗಳಿಗೆ ಗೌರವ ಸೂಚಿಸುವ ದಿನವಾಗಿದೆ ಎಂದು ಹೇಳಿದರು. ವಿಶ್ವದಾದ್ಯಂತ ಅನಾಮಿಕ ಶ್ರಮಜೀವಿಗಳು, ಕಾರ್ಮಿಕ ರೈತರು, ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ.

ಅವರ ಹೋರಾಟಗಳು ಸಮ ಸಮಾಜದ ದೃಷ್ಟಿಕೋನ ಇಂದಿಗೂ ಹೊಸ ಚಳವಳಿಗಳಿಗೆ ಸ್ಫೂರ್ತಿ ನೀಡುತ್ತಿವೆ ಎಂದರು.ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಬಲಪಂಥೀಯ ಧೋರಣೆಗಳ ವೃದ್ಧಿ, ಚಿಂತಕರು ಮತ್ತು ಬರಹಗಾರರ ಮೇಲಿನ ದಾಳಿಗಳು, ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಸೇರಿದಂತೆ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಮತ್ತು ಕೂಲಿಕಾರರು ಎದುರಿಸುತ್ತಿರುವ ಸವಾಲುಗಳ ನಡುವೆ ವಿಚಾರಗಳ ಕ್ಷೇತ್ರದಲ್ಲಿ ಪ್ರಗತಿಪರ ಧ್ವನಿಯನ್ನು ಬಲಪಡಿಸುವುದು ಈ ದಿನದ ಉದ್ದೇಶವಾಗಿದೆ ಎಂದು ಹೇಳಿದರು. ಸಾಮಾನ್ಯ ಜನರ ಧ್ವನಿಯನ್ನು ಪ್ರತಿಬಿಂಬಿಸುವ ದಿನವಾಗಿದೆ ಎಂದರು*ಕಾರ್ಯಕ್ರಮದ ಅಂಗವಾಗಿ “ಯುಎಸ್ ಅಮೆರಿಕ ಸಾಮ್ರಾಜ್ಯಶಾಹಿ – ಭಾರತದ ಜನತೆಯ ಶತ್ರು” ಎಂಬ ಶೀರ್ಷಿಕೆಯ ಕೆಂಪು ಪುಸ್ತಕದ ಓದುವುದರ ಮೂಲಕ ರೇಡ್ ಬುಕ್ ಡೇ ಆಚರಣೆ ನಡೆಸಲಾಯಿತು.* ಬಳಿಕ ಓದು, ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆದವು. *ಈ ಸಂದರ್ಭದಲ್ಲಿ ಎಐಎಡಬ್ಲ್ಯೂಯು ಕಾರ್ಯದರ್ಶಿ ಹುಸೇನಪ್ಪ ಕೆ, ಗಂಜ್ ಅಮಾಲಿ ಕಾರ್ಮಿಕರ ಕಾರ್ಯದರ್ಶಿ ಕೃಷ್ಣಪ್ಪ, ಕಟ್ಟಡ ಕಾರ್ಮಿಕರ ಸಂಘಟನೆ ಅಧ್ಯಕ್ಷ ಮುತ್ತಣ್ಣ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕ ಅಧ್ಯಕ್ಷ ನಾಗರಾಜ್ ಯು, ಬಸಯ್ಯ, ಗಾದೆಪ್ಪ, ರವಿ ಅಕ್ಕಿರೊಟ್ಟಿ, ದವಲಸಾಬ್, ದೊಡ್ಡಬಸವ ಮತ್ತು ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *