ನೈಸರ್ಗಿಕ ಕೃಷಿಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾದ್ದದು.. ಸಂಜೀವಿನಿ –

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ, ವೆಂಕಟಗಿರಿ ಇವರ ಸಹಯೋಗದಲ್ಲಿ “ಸಮಗ್ರ ಕೃಷಿ ಸಮೂಹಗಳು ಹಾಗೂ ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿತೆ ಕಾರ್ಯಕ್ರಮ”ವನ್ನು ರೈತ ಮಹಿಳೆಯರಿಗೆ ಹಾಗೂ ಪ್ರಗತಿಪರ ರೈತರಿಗೆ ನೈಸರ್ಗಿಕ ಕೃಷಿಯ ಒಂದು ದಿನದ ತರಬೇತಿ ನೀಡಲಾಯಿತು. ಈ ತರಬೇತಿಯನ್ನು ಎನ್ ತಾಲೂಕು ಪಂಚಾಯಿತಿಯ ಎನ್ ಆರ್ ಎಲ್ ಎಮ್ ಸಮಗ್ರ ಕೃಷಿ ಸಮೂಹಗಳ ಆ್ಯಂಕರ್ ಕುಮಾರಿ ವರ್ಷ ಹಾಗೂ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕರಾದ ಗಣೇಶ್ ಅವರು ಆಗೋಲಿ ಗ್ರಾಮದ ರೈತ ಮಹಿಳೆಯರಿಗೆ ಪ್ರಾತಿಕ್ಷತೆ ಹಾಗೂ ತರಬೇತಿ ನೀಡಿದರು. ಈ ತರಬೇತಿಯಲ್ಲಿ ಮಣ್ಣು ಪರೀಕ್ಷೆ, ಬೀಜೋಪಾಚರ, ಎರೆಹುಳು ಗೊಬ್ಬರ ತಯಾರಿಕೆ, ಜೈವಿಕ ಗೊಬ್ಬರಗಳ ಬಳಕೆ, ನೈಸರ್ಗಿಕ ಕೃಷಿಯ ಆಧಾರ ಸ್ತಂಭಗಳಾದ ಜೀವಾಮೃತ, ಬೀಜಾಮೃತ, ಘನ ಜೀವಾಮೃತ, ಅಗ್ನಿ ಅಸ್ತ್ರ, ಬ್ರಹ್ಮ ಅಸ್ತ್ರ, ನೀಮಾಸ್ತ್ರ, ಶುಂಠಿ ಕಷಾಯ, ದಶಪರ್ಣಿ ಕಷಾಯ ಇವುಗಳ ತಯಾರಿಕೆ ಹಾಗೂ ಪ್ರಾಮುಖ್ಯತೆ ಬಗ್ಗೆ , ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯನ್ನು ಲಾಭದಾಯಕ ಕೃಷಿಯನ್ನಾಗಿ ಮಾಡುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾದ್ದದು ಎಂದು ವರ್ಷ ಅವರು ತಿಳಿಸಿದರು. ಹಾಗೆಯೇ ಕೃಷಿ ಇಲಾಖೆಯ ಸಹಾಯಧನ ರೂಪದಲ್ಲಿ ಸಿಗುವ ಆಹಾರ ಸಂಸ್ಕರಣಾ ಘಟಕಗಳ ಬಗ್ಗೆ ಗಣೇಶ್ ಅವರು ತಿಳಿಸಿದರು ಹಾಗೂ ಕೃಷಿ ಪಶು ಸಖಿಯರು ಉಪಸ್ಥಿತರಿದ್ದರು.

