ಕರೋಕೆ ಗಾಯಕಿ, ಸಮುದಾಯದ ಕಾರ್ಯಕರ್ತೆ ಬಿ. ಕೃಷ್ಣವೇಣಿ ಅವರಿಗೆ “ಮಡಿಲು ಅಮ್ಮ ಅತ್ಯುತ್ತಮ ಗಾಯಕಿ” ಪ್ರಶಸ್ತಿ ಸನ್ಮಾನ.* ಪರಶುರಾಮ ಕರೋಕೆ ಸ್ಟುಡಿಯೋದ ಸಂಗೀತ ಸ್ವರಾಂಜಲಿ ಕಲಾವಿದರಿಂದ ಅದ್ದೂರಿ ಸನ್ಮಾನ.

ಗಂಗಾವತಿ: ಕರೋಕೆ ವೇದಿಕೆ ಮುಖಾಂತರ ಕನ್ನಡ ಸಂಗೀತ ಲೋಕಕ್ಕೆ ಅನೇಕ ಪ್ರತಿಭೆಗಳ ಪರಿಚಯವಾಗಿದ್ದು ಅದರಲ್ಲಿ ಗಂಗಾವತಿಯ ಬಿ. ಕೃಷ್ಣವೇಣಿ ಅತ್ಯುತ್ತಮ ಗಾಯಕಿ ಮತ್ತು ಸಮುದಾಯದ ಆರೋಗ್ಯ ಕಾರ್ಯಕತೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಬಿ.ಕೃಷ್ಣವೇಣಿ ಇವರ ಕಾರ್ಯ ಅಭಿನಂದನೀಯ ಎಂದು ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಹೇಳಿದರು.ಅವರು ನಗರದ ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಹವ್ಯಾಸಿ ಕಲಾ ತಂಡದ ವತಿಯಿಂದ “ಅಮ್ಮ ಮಡಿಲು ಅತ್ಯುತ್ತಮ ಗಾಯಕಿ” ಪ್ರಶಸ್ತಿ ಪುರಸ್ಕೃತರಾದ ಬಿ ಕೃಷ್ಣವೇಣಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಬಿ.ಕೃಷ್ಣವೇಣಿ ಅವರು ಹವ್ಯಾಸಿ ಕರೋಕೆ ಕಲಾವಿದೆಯಾಗಿ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮ ಗಾಯನವನ್ನು ಅತ್ಯುತ್ತಮವಾಗಿ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ಹೆಚ್ಐವಿ ಪೀಡಿತರಿಗೆ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಪವಿತ್ರ ಕಾರ್ಯ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಮುದಾಯ ಜಾಗೃತಿ ಕಾರ್ಯಕರ್ತೆಯಾಗಿ ಮಂಗಳಮುಖಿಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸ್ವಚ್ಛತೆ ಬಗ್ಗೆ ಸಲಹೆ ಸೂಚನೆ ನೀಡುವ ಪವಿತ್ರ ಕಾರ್ಯ ಮಾಡುತ್ತಿದ್ದಾರೆ. ಇವರ ಕಾರ್ಯವನ್ನು ಮೆಚ್ಚಿ ಚಿತ್ರದುರ್ಗದ ಅಮ್ಮ ಮಡಿಲು ಸ್ವಯಂ ಸೇವಾ ಸಂಸ್ಥೆಯವರು ಪ್ರತಿವರ್ಷ ನಾಡಿನ ವಿವಿಧ ಸಾಧಕರನ್ನು ಗುರುತಿಸಿ, ಕೊಡ ಮಾಡುವ “ಅಮ್ಮ ಮಡಿಲು ಅತ್ಯುತ್ತಮ ಗಾಯಕಿ” ಪ್ರಶಸ್ತಿಗೆ ಬಿ. ಕೃಷ್ಣವೇಣಿ ಅವರನ್ನು ಆಯ್ಕೆ ಮಾಡಿದ್ದು ಅತ್ಯಂತ ಸ್ವಾಗತ ಅರ್ಹವಾಗಿದೆ ಸಂಗೀತ ಸ್ವರಾಂಜಲಿ ಹವ್ಯಾಸಿ ಕಲಾ ತಂಡದಲ್ಲಿ ಬಿ.ಕೃಷ್ಣವೇಣಿ ಕರೋಕೆ ಹಾಡುಗಳನ್ನು ಹಾಡುವ ಮೂಲಕ ಇಡೀ ತಂಡಕ್ಕೆ ಹೆಸರು ತಂದಿದ್ದಾರೆ ನಮ್ಮ ತಂಡದ ಎಲ್ಲಾ ಹಿರಿಯರು ಇಂತಹ ಅತ್ಯುತ್ತಮ ಕಾರ್ಯವನ್ನು ಮಾಡುವ ಮುಖಾಂತರ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಲಿ ಎಂದರು. ಸನ್ಮಾನ ಸ್ವೀಕರಿಸಿ ಗಾಯಕಿ ಬಿ. ಕೃಷ್ಣವೇಣಿ ಮಾತನಾಡಿ ಪರಶುರಾಮ ಕರೋಕೆ ಸ್ಟುಡಿಯೋ ಮತ್ತು ಸಂಗೀತ ಸ್ವರಾಂಜಲಿ ಹವ್ಯಾಸಿ ಕಲಾತಂಡ ಇಲ್ಲಿರುವ ಹಿರಿಯರು ನನಗೆ ಮಾರ್ಗದರ್ಶಕರಾಗಿದ್ದು, ಇವರೆಲ್ಲರ ಮೂಲಕ ಹಾಡುವುದನ್ನು ಕಲಿತಿದ್ದೇನೆ, ಜೊತೆಗೆ ಸಮಾಜ ಸೇವೆ ಮಾಡುವ ನನ್ನ ಕಾಯಕಕ್ಕೆ ನನ್ನ ಕುಟುಂಬ ಬೆಂಬಲ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಜಾಗೃತಿಯ ಕಾರ್ಯವನ್ನು ನಿರಂತರವಾಗಿ ಮಾಡುವ ಇಚ್ಛೆಯನ್ನು ಹೊಂದಿದ್ದು ನನ್ನ ಕಾರ್ಯಕ್ಕೆ ಸದಾ ಬೆಂಬಲಿಸುವ ಸಂಗೀತ ಸ್ವರಾಂಜಲಿ ಕಲಾತಂಡಕ್ಕೆ ಅಭಿನಂದನೆಗಳು ಎಂದರು.ಈ ಸಂದರ್ಭದಲ್ಲಿ ಸಂಗೀತ ಸ್ವರಾಂಜಲಿ ಹವ್ಯಾಸಿಕಲಾತಂಡದ ಪ್ರಮುಖರಾದ ಹನುಮಂತಪ್ಪ ಹುಲಿಹೈದರ್, ತಿಪ್ಪೇಸ್ವಾಮಿ ಹೊಸಮಠ, ವೆಂಕಟೇಶ್ ಧೂಳಾ, ಐಲಿ ಮಾರುತಿ, ಐಲಿ ರಮೇಶ್, ರಾಜು ಹೊಸಳ್ಳಿ,ದುರ್ಗೇಶ ಸಾಣಾಪೂರ, ಕನಕಪ್ಪ ಹೊಸಳ್ಳಿ,ಲಲಿತಮ್ಮ, ಗಿರಿಜಮ್ಮ, ಗೌಸಿಯಾ ಬೇಗಂ,ಯಲ್ಲಪ್ಪ ಪೊಲಕಾಲ್,ಆನಂದ ಪೇಂಟರ್ ಸೇರಿದಂತೆ ಕಲಾ ತಂಡದವರಿದ್ದರು.

