ನೂತನ ಎಸ್ ಡಿ ಎಂ ಸಿ ಪದಾಧಿಕಾರಿಗಳ ಆಯ್ಕೆ:ಕುಕನೂರ ತಾಲೂಕ ಮಂಗಳೂರ ಕೆಪಿಎಸ್ ಎಸ್ ಡಿ ಎಂ ಸಿ ಸದಸ್ಯರ ಪದಗ್ರಹಣ ಕಾರ್ಯಕ್ರಮ ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸನ್ಮಾನ…

ನೂತನ ಎಸ್ ಡಿ ಎಂ ಸಿ ಪದಾಧಿಕಾರಿಗಳ ಆಯ್ಕೆ:ಕುಕನೂರ ತಾಲೂಕ ಮಂಗಳೂರ ಕೆಪಿಎಸ್ ಎಸ್ ಡಿ ಎಂ ಸಿ ಸದಸ್ಯರ ಪದಗ್ರಹಣ ಕಾರ್ಯಕ್ರಮ ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸನ್ಮಾನ…

ಕುಕನೂರ:19 ತಾಲೂಕಿನ ಮಂಗಳೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ ಡಿ ಎಂ ಸಿ ಪದಾಧಿಕಾರಿಗಳ ನೇಮಕ ಅಂತಿಮವಾಗಿದೆ.‌ಕ್ಷೇತ್ರದ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ಉಪಾಧ್ಯಕ್ಷನ್ನಾಗಿ ಅನಿಲ್ ಕುಮಾರ್ ಎಂ ಕಲ್ಭಾವಿ ಅವರನ್ನು ಹಾಗೂ ಚಂದ್ರನಾಥ ಅಷ್ಟಗಿ, ಮೈಲಾರಪ್ಪ ಕಂದಗಲ್, ದುರುಗಪ್ಪ ಅಂಬಳಿ ಮತ್ತು ಮಾಬುಸಾಬ ಗೋಡೆಕಾರ್ ಇವರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.‌ ಫೆ.18 ರಂದು ಮಂಗಳೂರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಕ್ಕಳ ಸುರಕ್ಷತಾ ಸ್ಥಾಯಿ ಸಮಿತಿಗೆ ಸಿದ್ದಪ್ಪ ಬಳಿಗಾರ್, ಶೈಕ್ಷಣಿಕ ಗುಣಮಟ್ಟದ ಖಾತರಿ ಸಮಿತಿಗೆ ಮಾರುತಿ ಮದಕಟ್ಟಿ, ಹಾಗೂ ಭೌತಿಕ ಸೌಲಭ್ಯಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮಾಬುಸಾಬ ಗೋಡೆಕಾರ್ ಅವರು ಆಯ್ಕೆಯಾದರು.‌ಉಳಿದಂತೆ ಈ ಹಿಂದೆ ವಿದ್ಯಾರ್ಥಿಗಳ ಪಾಲಕರಾದ ನಿಂಗನಗೌಡ ಪೊಲೀಸ್ ಪಾಟೀಲ್, ಯಮನೂರಪ್ಪ ತಳವಾರ, ಲಲಿತಾ ಯೋಗಪ್ಪ ಪೂಜಾರ್, ಬಂಗಾರಮ್ಮ ನಡೂಲರ್, ನೀಲಮ್ಮ ನಿಂಗಾಪೂರ್, ಶ್ರೀದೇವಿ ಸೋಮಲಾಪುರ್, ಶ್ರೀದೇವಿ ನಿಂಗಾಪೂರ್, ಮಂಜುಳಾ ಕಲ್ಲೂರ್, ಅಂಬ್ರಮ್ಮ ಚಿನ್ನೂರ್, ಮಂಜುಳಾ ಗೊಂದಿ, ಪಾಲಾಕ್ಷಗೌಡ ಕೀರ್ತಗೌಡ್ರ ಹಾಗೂ ಶರಣಪ್ಪ ಹ್ಯಾಟಿ ಸದಸ್ಯರಾಗಿ ಆಯ್ಕೆಯಾಗಿದ್ದರು.‌ಆಯ್ಕೆಯಾದ ಉಪಾಧ್ಯಕ್ಷರಿಗೆ, ನಾಮನಿರ್ದೇಶನ ಸದಸ್ಯರಿಗೆ ಹಾಗೂ ಸ್ಥಾಯಿ ಸಮಿತಿಯ ಮೂವರು ಅಧ್ಯಕ್ಷರಿಗೆ ಕೆಪಿಎಸ್ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.‌ಕೆಪಿಎಸ್ ಪ್ರಾಚಾರ್ಯರಾದ ಗೋಪಾಲಯ್ಯ, ಉಪ ಪ್ರಾಂಶುಪಾಲ ಹನಮಂತಪ್ಪ ಆವಾರದಮನಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಕುಂತಲಾ ಪಾಟೀಲ್, ಉಪನ್ಯಾಸಕರಾದ ವಿರೇಶಪ್ಪ ಎನ್, ಸೋಮಪ್ಪ ನಾಯಕ್, ಶಿಕ್ಷಕರಾದ ಕೊಟ್ರೇಶ್ ಹೆಸರೂರ್, ಉಳಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.‌ಬಾಕ್ಸ್ ನ್ಯೂಸ್:ಕೆಪಿಎಸ್ ಮಂಗಳೂರ ಇಲ್ಲಿನ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಆಧ್ಯತೆ, ಗುಣಮಟ್ಟದ ಶಿಕ್ಷಣ, ಶುಧ್ದ ಕುಡಿಯುನ ನೀರಿನ ಸೌಲಭ್ಯ, ಶೌಚಾಲಯ ಸೌಲಭ್ಯ, ಶಾಲಾ ಆವರಣದ ಸ್ವಶ್ಚತೆ, ಸಿಸಿ ಟಿವಿ ಅಳವಡಿಕೆ, ಕಂಪೌಂಡ್ ವಿಸ್ತರಣೆ ಹಾಗೂ ಎತ್ತರ ಹೆಚ್ಚಿಸುವುದು, ವಿದ್ಯೂತ್ ದ್ವೀಪಗಳ ಅಳವಡಿಕೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ, ಸುಂದರವಾದ ಕೈತೋಟ ನಿರ್ಮಾಣ, ಶಾಲಾ ಗೊಡೆಗಳಿಗೆ ಬಣ್ಣ ಹಚ್ಚುವುದು, ಶಾಲಾ ಸೌಂದರ್ಯ ವೃಧ್ದಿಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುತ್ತೆನೆ.ಅನಿಲ್ ಕುಮಾರ್ ಎಂ ಕಲ್ಭಾವಿ, ಉಪಾಧ್ಯಕ್ಷ ಕೆಪಿಎಸ್ ಮಂಗಳೂರಪೋಟೋ01,02: ಬುಧವಾರ ಕುಕನೂರ ತಾಲೂಕ ಮಂಗಳೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಎಸ್ ಡಿ ಎಂ ಸಿ ಸದಸ್ಯರ ಪದಗ್ರಹಣ ಹಾಗೂ ಹಾಗೂ ಸನ್ಮಾನ ಕಾರ್ಯಕ್ರಮ ನೆರವೆರಿತು.ಪೋಟೋ 03: ಮಂಗಳೂರ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಉಪಾಧ್ಯಕ್ಷ..

Leave a Reply

Your email address will not be published. Required fields are marked *