ಹಂಪಿಯಲ್ಲಿ ಮಸ್ತ್ ಆಗಿತ್ತು ಕುಸ್ತಿ ಕಾಳಗ, ಪಟ್ಟಕ್ಕಾಗಿ ಪೈಲ್ವಾನರ ಕಾದಾಟ.

ವಿಜಯನಗರ/ ಹಂಪಿ :ಭಾರತದಲ್ಲಿ ಕುಸ್ತಿಯು (ಪೈಲ್ವಾನಿ) ಮಹಾಭಾರತದ ಕಾಲದಿಂದಲೂ ಜಾರಿಯಲ್ಲಿದ್ದು, ನಮ್ಮ ಬೇರುಗಳನ್ನು ನೆನಪಿಸುವ ಸಾಂಸ್ಕೃತಿಕ ಪರಂಪರೆಯಾಗಿದೆ. ಹಂಪಿ ಉತ್ಸವದ ಅಂಗವಾಗಿ ನಡೆಯುವ ಕುಸ್ತಿ ಸ್ಪರ್ಧೆಗಳು (ಹಂಪಿ ಕೇಸರಿ) ಪಾರಂಪರಿಕ ಕ್ರೀಡೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು ಮಲಪನಗುಡಿ ಗ್ರಾಮದ ಬಳಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತದ ನೂರಾರು ಪೈಲ್ವಾನ್ರು ಮಣ್ಣಿನ ಅಖಾಡದಲ್ಲಿ ಸೆಣಸಾಡಿದರು. ಮಹಿಳಾ ಕುಸ್ತಿ, ಗುಂಡು ಎತ್ತುವ ಸ್ಪರ್ಧೆ ಮತ್ತು ಎತ್ತಿನ ಬಂಡಿ ಗಾಲಿ ಜೋಡಣೆಯಂತಹ ದೇಸಿ ಕ್ರೀಡೆಗಳು ಇಲ್ಲಿ ಪ್ರಮುಖ ಆಕರ್ಷಣೆಯಾಗಿದವು.ವಿವಿಧ ವಿಭಾಗಗಳ ಕುಸ್ತಿ ವಿಜೇತರ ಪಟ್ಟಿ : ಜಿಲ್ಲಾ ಮಟ್ಟದ ಪುರುಷ ಕುಸ್ತಿ ಹಂಪಿ ಕಿಶೋರ – ಮಾರುತಿ ಹರಪನಹಳ್ಳಿ,ಹಂಪಿ ಕುಮಾರ- ಎಮ್ ಅಂಜಿನಪ್ಪ ಹರಪನಹಳ್ಳಿ,ಹಂಪಿ ಕೇಸರಿ – ಎನ್ ಪರಶುರಾಮ್ ಹೊಸಪೇಟೆ,ಹಂಪಿ ಕಂಠೀರವ – ತಿಪ್ಪೇಸ್ವಾಮಿ ಹರಪನಹಳ್ಳಿ,ಕಲ್ಯಾಣ ಕರ್ನಾಟಕ ಮಹಿಳಾ ಹಂಪಿ ಕಲ್ಯಾಣಿ – ಬಿ ತೇಜಸ್ವಿನಿ ಕಂಪ್ಲಿ ವಿಜೇತರಾದರು.ಹಂಪಿ ಉತ್ಸವ ಕುಸ್ತಿಯ ವಿಶೇಷತೆಗಳು : ಹಂಪಿ ಕೇಸರಿ/ಕುಮಾರ ಪಟ್ಟ: ವಿಜೇತ ಪೈಲ್ವಾನ್ರಿಗೆ ‘ಹಂಪಿ ಕೇಸರಿ’ ಅಥವಾ ‘ಹಂಪಿ ಕುಮಾರ’ ಎಂಬ ಪ್ರತಿಷ್ಠಿತ ಬಿರುದುಗಳನ್ನು ನೀಡಿ ಗೌರವಿಸಲಾಯಿತು. ವಿಜಯನಗರ ಸಾಮ್ರಾಜ್ಯದ ಮಲ್ಲಯುದ್ಧದ ಸಂಪ್ರದಾಯವನ್ನು ಪ್ರತಿಬಿಂಬಿಸಿತು.ಪೈಲ್ವಾನ್ರ ಭಾಗವಹಿಸುವಿಕೆ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೂರಾರು ಕುಸ್ತಿಪಟುಗಳು (75ಕ್ಕೂ ಹೆಚ್ಚು) 39 ಪುರುಷ, 36 ಮಹಿಳಾ ಕುಸ್ತಿಪಟುಗಳು ಮಣ್ಣಿನ ಅಖಾಡದಲ್ಲಿ ತಮ್ಮ ಜಾಣ್ಮೆಯ ಪಟ್ಟುಗಳನ್ನು ಪ್ರದರ್ಶಿಸಿದರು.ಮಹಿಳಾ ಕುಸ್ತಿ: ಮಹಿಳಾ ಪೈಲ್ವಾನ್ರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಭಾಗವಹಿಸಿ ಕುಸ್ತಿ ಸ್ಪರ್ಧೆಗಳಲ್ಲಿ ರೋಚಕ ಪ್ರದರ್ಶನ ನೀಡುದರು.ಪ್ರೇಕ್ಷಕರು ಚಪ್ಪಾಳೆ ಮತ್ತು ಸಿಳ್ಳೆಗಳ ಮೂಲಕ ಕುಸ್ತಿಪಟುಗಳನ್ನು ಹುರಿದುಂಬಿಸಿದರು, ಒಟ್ಟಿನಲ್ಲಿ ಹಂಪಿ ಉತ್ಸವ ಗ್ರಾಮೀಣ ಸೊಗಡಿನ ರೋಮಾಂಚಕ ಅನುಭವವನ್ನು ಒದಗಿಸಿತು.ಈ ಸಂದರ್ಭದಲ್ಲಿ ಹಂಪಿ ಉತ್ಸವ ಗ್ರಾಮೀಣ ಕ್ರೀಡಾ ಸಮಿತಿಯ ಅಧ್ಯಕ್ಷ ಉಮೇಶ್, ಸಂಚಾಲಕ ಯು. ಅಶೋಕ, ಕುಸ್ತಿ ಕ್ರೀಡಾಧಿಕಾರಿಗಳಾದ ವಿನಾಯಕ, ನಾಗರಾಜ್, ಮಮತಾ, ಬೀರಲಿಂಗಪ್ಪ, ಆಜೀಜ್ ಸೇರಿದಂತೆ ದೈಹಿಕ ಶಿಕ್ಷಕರು, ಅಪಾರ ಕ್ರೀಡಾ ಅಭಿಮಾನಿಗಳು ಹಾಜರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
