ಕಂಪ್ಲಿ ಉತ್ಸವದ ಹಿನ್ನಲೆ ಜಾಗೃತಿಗಾಗಿ ಡಿಜಿಟಿಲ್ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್.ಗಣೇಶ.

ಕಂಪ್ಲಿ ಉತ್ಸವದ ಹಿನ್ನಲೆ ಜಾಗೃತಿಗಾಗಿ ಡಿಜಿಟಿಲ್ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್.ಗಣೇಶ.

ಬಳ್ಳಾರಿ / ಕಂಪ್ಲಿ : ಎರಡು ದಿನದ ಕಂಪ್ಲಿ ಉತ್ಸವ ಹಿನ್ನಲೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಚಾರಪಡಿಸುವ ಡಿಜಿಟಲ್ ಪ್ರಚಾರ ವಾಹನಕ್ಕೆ ಶಾಸಕ ಜೆ.ಎನ್.ಗಣೇಶ್ ಇವರು ಶುಕ್ರವಾರ ಪಟ್ಟಣದ ಪುರಸಭೆಯಲ್ಲಿ ಚಾಲನೆ ನೀಡಿದರು. ನಂತರ ಶಾಸಕ ಗಣೇಶ್ ಪತ್ರಕರ್ತರೊಂದಿಗೆ ಮಾತನಾಡಿ, ಕಂಪ್ಲಿ ಆಳಿದ ಅಂದಿನ ಕಂಪಲಿರಾಯ (ಗಂಡುಗಲಿ ಕುಮಾರ)ನ ಸಾಮ್ರಾಜ್ಯದ ವೈಭವ ಸಾರುವ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಮರುಕರಿಳಿಸುವಂತೆ ಮಾಡುವ ಹಿನ್ನಲೆ ಕಂಪ್ಲಿ ಉತ್ಸವ ನಡೆಸಲಾಗುತ್ತಿದೆ. ಎರಡನೇ ಬಾರಿಗೆ ಕಂಪ್ಲಿ ಉತ್ಸವವನ್ನು ಅದ್ಧೂರಿಯಾಗಿ ಮಾಡಲು ತೀರ್ಮಾನಿಸಿದೆ. ಇದರಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಲ್ಲಿ ಉತ್ಸವದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಿಜಿಟಲ್ ವಾಹನಕ್ಕೆ ನೀಡಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಸಾಧ್ಯ. ಕಂಪ್ಲಿ ಉತ್ಸವ ಜನೋತ್ಸವವಾಗಬೇಕೆಂಬ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಬಿ.ಸಿದ್ದಪ್ಪ, ಲೊಡ್ಡು ಹೊನ್ನೂರವಲಿ, ಜಾಫರ್, ಆರ್.ಪಿ.ಶಶಿಕುಮಾರ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *