ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಕೆಗಳಿಗೆ ಚಾಲನೆ ನಮ್ಮ ನಡೆ ಅಭಿವೃದ್ಧಿ ಕಡೆ ಸಚಿವ ಶಿವರಾಜ ಎಸ್‌. ತಂಗಡಗಿ…

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಕೆಗಳಿಗೆ ಚಾಲನೆ ನಮ್ಮ ನಡೆ ಅಭಿವೃದ್ಧಿ ಕಡೆ ಸಚಿವ ಶಿವರಾಜ ಎಸ್‌. ತಂಗಡಗಿ…

ಕನಕಗಿರಿ ತಾಲೂಕಿನ ದಿನಾಂಕ 09-02-2026 ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ ಎಸ್‌. ತಂಗಡಗಿ ತಾಲೂಕಿನ ವಿವಿದ ಅಭಿವೃದ್ಧಿಗಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ . ನಂತರ ಕನಕಗಿರಿ ಪಟ್ಟಣದಲ್ಲಿ ಉಪ ನೊಂದಣಿ ಕಛೇರಿ ಉದ್ಘಾಟನೆ ನೆರವೇರಿಸಿ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ಅವರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಇನ್ನೂ ಅನೇಕ ತಾಲೂಕಿಗೆ ಸಂಬಂಧಪಟ್ಟಂತ ಇಲಾಖೆಯ ಕಚೇರಿಗಳು ಮಾಡುವುದಾಗಿ ತಿಳಿಸಿದರು. ನಂತರ ಮಾತನಾಡಿ ರಸ್ತೆ ಅಭಿವೃದ್ಧಿ ಪಡಿಸಲು ಕ್ಷೇತ್ರದ ಬಂಕಾಪುರ ಗ್ರಾಮದಿಂದ ಕೊಪ್ಪಳ-ಕನಕಗಿರಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಧಾರಣೆಗೆ ಹಾಗೂ ಡಾಂಬರೀಕರಣ ಕಾಮಗಾರಿಕೆಗಾಗಿ ಒಟ್ಟಾರೆ 2 ಕೋಟಿ 70.00 ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ.ಕನಕಗಿರಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿ ಆರಂಭಿಸಲು 2 ಕೋಟಿ ಮಂಜೂರು ಮಾಡಲಾಗಿದೆ.ಕನಕಗಿರಿ ತಾಲೂಕಿನಲ್ಲಿ ಭೂಮಿ ಪೂಜೆ ಸಲ್ಲಿಸಿ ಕನಕಗಿರಿ-ಕಲಿಕೇರಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಮಾಡಲಾಗಿದೆ.ಗೌರಿಪುರ ಹುಲಿಹೈದರ – ದೇವಲಾಪುರ ರಸ್ತೆ ಅಭಿವೃದ್ಧಿ ಗಾಗಿ ಏಳುಕೋಟೆ 50 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆಗಾಗಿ ಡಾಂಬರೀಕರಣ ಕಾಮಗಾರಿಕೆ ಮಾಡಲಾಗಿದೆ ಮತ್ತು ನೀರಲೂಟಿ ಕ್ರಾಸ್ ನಿಂದ ಮಲ್ಲಿಗೆವಾಡ ಕ್ರಾಸ್ ರಸ್ತೆ ಸುಧಾರಾಣಿ ಹಾಗೂ ಡಾಂಬರೀಕರಣ ಕಾಮಗಾರಿಕೆಗಾಗಿ ಒಂದು ಕೋಟಿ 50 ಲಕ್ಷ ಹಣವನ್ನು ಮಂಜೂರಾಗಿರುತ್ತದೆ ಎಂದು ಸಚಿವ ಶಿವರಾಜ್ ಎಸ್ ತಂಗಡಗಿ ತಿಳಿಸಿದರು.ಈ ಸಂದರ್ಭದಲ್ಲಿ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಗಂಗಾಧರ್ ಸ್ವಾಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವೀರೇಶ್ ಸಮ್ಗಂಡಿ ನಗರ ಘಟಕದ ಅಧ್ಯಕ್ಷರಾದ ರವಿ ಎಂ ಪಾಟೀಲ್ ಶರಣಪ್ಪ ಬತ್ತದ ಟಿ ಜೆ ರಾಮಚಂದ್ರ ಗಂಗಾಧರ್ ಸಜ್ಜನ್ ಹನುಮೇಶ್ ವಾಲೀಕಾರ ತಾಲೂಕು ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ತಾಲೂಕ್ ಕಾರ್ಯನಿರ್ವಾಹಕ್ಕಾಗಿ ರಾಜಶೇಖರ್ ಕೆ ಪಿ ಐ ಎಂ ಡಿ ಫೈಝಿಲ್ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಕ್ಷಣ ಬಿ ಕಟ್ಟಿಮನಿ ಅಧ್ಯಕ್ಷರಾದ ತನುಶ್ರೀ ಉಪಾಧ್ಯಕ್ಷ ಕಂಠೀರಂಗ ನಾಯಕ ಸಂಗಪ್ಪ ಸಜ್ಜನ್ ರಾಕೇಶ್ ಕಂಪ್ಲಿ ಗಂಗಾಧರ್ ಚೌಡ್ಕಿ ಶರಣೇಗೌಡ ರಾಜ ನಂದಪುರ ಮತ್ತು ಇನ್ನು ಪಟ್ಟಣ ಪಂಚಾಯಿತಿಯ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

*ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ ಪೋನ್ ನೋ 9035332032*

Leave a Reply

Your email address will not be published. Required fields are marked *