ಸಂವಿಧಾನದ ಆಶಯಗಳಿಗೆ ಸ್ಪಂದಿಸೋಣ: ನಾಗರಾಜ್ ಇಂಗಳಗಿ….

ಸಂವಿಧಾನದ ಆಶಯಗಳಿಗೆ ಸ್ಪಂದಿಸೋಣ: ನಾಗರಾಜ್ ಇಂಗಳಗಿ….

ಗ0ಗಾವತಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ, ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಗೊಂಡಿದ್ದು, ಪ್ರತಿಯೊಬ್ಬರು ಸಂವಿಧಾನದ ಆಶಯಗಳಿಗೆ ಸ್ಪಂದಿಸುತ್ತಾ ದೇಶದ ಪ್ರಗತಿಗೆ ಕೈ ಜೋಡಿಸೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ್ ಇಂಗಳಗಿ ಹೇಳಿದರು.ಅವರು ನಗರದ ಪತ್ರಿಕಾ ಭವನದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಪ್ರಗತಿಯಲ್ಲಿ ಯುವ ಸಮುದಾಯದ ಪಾತ್ರ ದೊಡ್ಡದಾಗಿದ್ದು, ನಮಗೆ ಸಿಕ್ಕ ಸ್ವಾತಂತ್ರö್ಯದ ಮೌಲ್ಯ ಅರಿಯಬೇಕು, ತ್ಯಾಗ ಬಲಿದಾನ ಗಣನೆಗೆ ತೆಗೆದುಕೊಳ್ಳುವ ಮೂಲಕ ಮುಂದಿನ ಹಜ್ಜೆಗಳನ್ನು ಎಚ್ಚರಿಕೆಯಿಂದ ಇಡಬೇಕು, ಸಂವಿಧಾನವು ನಮ್ಮ ಹಕ್ಕು ಹಾಗು ಕರ್ತವ್ಯಗಳನ್ನು ತಿಳಿಸುತ್ತಿದ್ದು, ಪ್ರತಿಯೊಬ್ಬರು ಜವಬ್ದಾರಿ ಅರಿತು ನಡೆಯಬೇಕು ಇಲ್ಲದಿದ್ದಲ್ಲಿ ದೇಶದ ಅಭಿವೃದ್ಧಿಗೆ ಕಂಠಕವಾಗುತ್ತದೆ ಎಂದು ವಿವರಿಸಿದರು.ಯುವ ಸಮುದಾಯ ಇತ್ತೀಚಿಗೆ ದಾರಿ ತಪ್ಪುತ್ತಿದ್ದು, ಜಾಗೃತಿ ಅಗತ್ಯವಾಗಿದೆ, ಸಾದನೆಗೆ ಮೈ ಒಡ್ಡುವ ಮೂಲಕ ಜಾಗತೀಕರಣದಿಂದ ವೇಗವಾಗಿ ಬೆಳೆಯುತ್ತಿರುವ ವಿಶ್ವದ ದೇಶಗಳಿಗೆ ಸವಾಲೊಡ್ಡುವ ರೀತಿಯಲ್ಲಿ ನಾವು ನಿಲ್ಲಬೇಕಾದರೆ, ಪ್ರತಿಯೊಬ್ಬರಲ್ಲಿ ದೇಶಾಭಿಮಾನ ಮುಖ್ಯ, ಕರ್ತವ್ಯ ಪ್ರಜ್ಞೆ ಅಗತ್ಯ, ಸರಿದಾರಿಯಲ್ಲಿ ನಡೆಯುವುದರೊಂದಿಗೆ ನಮ್ಮತನ ಮೆರೆಯಬೇಕಿದೆ ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜೋಗದ ಕೃಷ್ಣಪ್ಪ ನಾಯಕ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಪತ್ರಕರ್ತರಾದ ವಿ.ಎಸ್.ಪಾಟೀಲ್, ಸಂಘದ ತಾಲೂಕು ಉಪಾಧ್ಯಕ್ಷ ಹರೀಷ್ ಕುಲಕರ್ಣಿ, ಉಪಾಧ್ಯಕ್ಷ ಹರೀಷ್ ಕುಲರ್ಣಿ, ಖಜಾಂಚಿ ಮಂಜುನಾಥ ಹೊಸಕೇರಿ, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೇಸಾಯಿ, ಕಾರ್ಯದರ್ಶಿ ವೃಷಭೇಂದ್ರ ಸ್ವಾಮಿ ನವಲಿ ಹಿರೇಮಠ, ಸುದರ್ಶನವೈದ್ಯ ಹೊಸಳ್ಳಿ ವೆಂಕಟೇಶ್ ಉಪ್ಪಾರ್, ಪಿ.ದಶರx, ಅಕ್ಷಯ ಕುಮಾರ್ ಹಾಗು ಟಾಕಪ್ಪ ಇತರರಿದ್ದರು.

Leave a Reply

Your email address will not be published. Required fields are marked *