ಪೂಜ್ಯ ಕಲ್ಲಯ್ಯ ಅಜ್ಜನವರಿಂದ ಶಿವ ಪೂಜಾ ಕೈಂಕರ್ಯ

ಪೂಜ್ಯ ಕಲ್ಲಯ್ಯ ಅಜ್ಜನವರಿಂದ ಶಿವ ಪೂಜಾ ಕೈಂಕರ್ಯ

ಬೆಂಗಳೂರು :ರಥ ಸಪ್ತಮಿ ಪ್ರಾರಂಭದ ದಿನ ಸುದಿನವಾಗಿತ್ತು ಶ್ರೀ ವೀರೇಶ್ವರ ಪುಣ್ಯಾಶ್ರದ ಶ್ರೀ ಪುಟ್ಟರಾಜ ಅಜ್ಜೋರ ಪೀಠಾಧಿಪತಿಗಳಾದ ಶ್ರೀಯುತ ಕಲ್ಲಯ್ಯ ಅಜ್ಜನವರು ಹಾಗೂ ಮಾತೇ ಮಾಣಿಕೇಶ್ವರಿ ಅಮ್ಮನವರ ಮಾನಸ ಪುತ್ರಿ ಶ್ರೀ ಮಾತೇ ನಂದೀಶ್ವರಿ ಅಮ್ಮ ನವರು ಬೆಂಗಳೂರಿನಲ್ಲಿ ನೆಲೆಸಿರುವ ಸುನೀತಾ ಗಂಗಾವತಿಯವರ ಸ್ವರಲೋಕ ಸಂಗೀತ ಮತ್ತು ಸಾಂಸ್ಕೃತಿಕ ಮಹಾ ವಿದ್ಯಾಲದಲ್ಲಿ ಶಿವ ಪೂಜಾ ಕೈಂಕರ್ಯ ನೆರವೇರಿಸಿದರು ಪಾಠ ಶಾಲೆಯ ಮುದ್ದು ವಿದ್ಯಾರ್ಥಿನಿಯರು ಗುರುಗಳ ಪೂಜಾ ಸಮಯದಲ್ಲಿ ಸಂಗೀತ ಸೇವೆ ಸಲ್ಲಿಸಿದರು .

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ದುರೀಣರಾದ ಅಲ್ಲಂ ವೀರಭದ್ರಪ್ಪ ಅವರ ಧರ್ಮಪತ್ನಿ ಸುನಂದಾ ಅಲ್ಲಂ , ಕರ್ನಾಟಕ ಸರ್ಕಾರದ ಗ್ರಂಥಾಲಯದ ಕಮಿಷನರ್ ಮಾತೋಶ್ರೀ ವಸಂತಮ್ಮ ಸೇರಿದಂತೆ ನೆರೆ ಹೊರೆಯ ಬಂದುಗಳು ಪೂಜೆಯಲ್ಲಿ ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾದರು ಗಾಯಕರು ಆದಂತಹ ಶ್ರೀ ಶಿವಕುಮಾರ್ ಸಿದ್ದಾಪುರ ,ಸುನೀತಾ ಗಂಗಾವತಿ ಹಾಗೂ ಪುಟ್ಟರಾಜ ಹಿರೇಮಠ್ ಸಂಗೀತ ಸೇವೆ ಸಲ್ಲಿಸಿದರು ತಬಲಾ ವಾದನದಲ್ಲಿ ಸಂದೀಪ್ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *