ಭಾರತೀಯ ಜ್ಞಾನ ಸಂಸ್ಕೃತಿಯನ್ನು ಜಗದಗಲ ಪಸರಿಸಿದ ವೀರಸನ್ಯಾಸಿ ಸ್ವಾಮಿವಿವೇಕಾಂನಂದರು- ಪ್ರೊ. ಕರಿಗೂಳಿ…

ಭಾರತೀಯ ಜ್ಞಾನ ಸಂಸ್ಕೃತಿಯನ್ನು ಜಗದಗಲ ಪಸರಿಸಿದ ವೀರಸನ್ಯಾಸಿ ಸ್ವಾಮಿವಿವೇಕಾಂನಂದರು- ಪ್ರೊ. ಕರಿಗೂಳಿ…

ಇಂದು ದಿನಾಂಕ 12-01-2026 ರಂದು ಚಿಲಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀರಾಮನಗರದಲ್ಲಿ ಸ್ವಾಮಿ ವಿವೇಕಾನಂದರವರ 163 ನೇ ಜನುಮದಿನದ ಅಂಗವಾಗಿ *ರಾಷ್ಟ್ರೀಯ ಯುವ ದಿನಾಚರಣೆಯನ್ನು* ಆಚರಿಸಲಾಯಿತು,ಪ್ರಾಚಾರ್ಯರಾದ ಪ್ರೊ.ಕರಿಗೂಳಿ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ವಿಶ್ವಚೇತನ, ವೀರಸನ್ಯಾಸಿ, ಆಧ್ಯಾತ್ಮ ವಿಜ್ಞಾನಿ,ಯುವಜನಪ್ರೇಮಿ, ಭಾರತೀಯತೆಯ ಹರಿಕಾರರಾದ ಸ್ವಾಮಿ ವಿವೇಕಾನಂದರ ಉದಾತ್ತ ಚಿಂತನೆಗಳನ್ನು ಬಣ್ಣಿಸಿದರು, ಅಂತಾರಾಷ್ಟ್ರೀಯ ಭೌತವಿಜ್ಞಾನಿಗಳಿಗೂ ಸವಾಲಾಗುವಂತಹ ವಿಚಾರಗಳನ್ನು ಸಮರ್ಥವಾಗಿ ಚಿಕ್ಯಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಮಂಡಿಸಿ ಶತಮಾನವಾದರೂ ಕೂಡ ಇoದಿಗೂ ಯುವಕರಿಗೆ ಸ್ಫೂರ್ತಿಯ ಚಿಲುಮೆ ಯಾಗಿವೆ, ಸಹೋದರತೆ ಎಂಬ ಆತ್ಮೀಯ ಭಾವನೆಯನ್ನು ಪ್ರಪಂಚ ರಾಷ್ಟ್ರಗಳ ಎಲ್ಲರ ಹೃದಯಗಳನ್ನು ಮುಟ್ಟುವಂತೆ ಮಾಡಿದವರು ವಿವೇಕಾನಂದರು ಎಂದರು, ನಾಡೋಜ ಬರಗೂರು ರಾಮಚಂದ್ರಪ್ಪರವರ ಮಾತುಗಳನ್ನು ಉಲ್ಲೇಖಿಸುತ್ತಾ ಎಲ್ಲಾ ಧರ್ಮದಲ್ಲಿ ವಿವೇಕವನ್ನು ಹೊಂದಿರುವ ವಿವೇಕಾನoದರು ಇರಬೇಕು ಆಗ ಮಾತ್ರ ಮಾನವೀಯತೆ ಪ್ರಜ್ವಲಿಸುವುದಲ್ಲದೇ, ಭಾರತೀಯತೆ ಎಂಬ ಸೌಹಾರ್ದತೆ ಸಾಧ್ಯವಾಗುತ್ತದೆ ಎಂದರು, ಇದೇ ಸಂದರ್ಭದಲ್ಲಿ ಸ್ವಾಮೀಜಿಯವರ ಮಾತುಗಳಾದ,ಸಂಘರ್ಷವಲ್ಲ: ಸೌಹಾರ್ದ; ವಿನಾಶವಲ್ಲ, ಸ್ವೀಕಾರ; ದ್ವೇಷವಲ್ಲ, ಸಾಮರಸ್ಯ ಮತ್ತು ಶಾಂತಿ ಎಂಬ ವಿಚಾರಗಳು ಇಂದೆoದಿಗಿoತಲೂ ಇಂದು ಹೆಚ್ಚು ಪ್ರಸ್ತುತವಾಗಿದ್ದು, ಎಲ್ಲಾ ಧರ್ಮದ ಯುವಕರಿಗೆ ವಿವೇಕಾನಂದರ ಈ ಆಶಯ ಅರ್ಥವಾಗಬೇಕು ಅಂದಾಗ ಮಾತ್ರ ಭವ್ಯ ಭಾರತ ತಾನಾಗೇ ನಿರ್ಮಾಣವಾಗುತ್ತದೆ, ಈ ನಿಟ್ಟಿನಲ್ಲಿ ದೇಶಾದ್ಯಾoತ ಸಕಲಧರ್ಮಗಳಲ್ಲಿನ ಯುವಕರು ವ್ಯಾಪಕ ಜಾಗೃತಿ ನಡೆಸಲಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಲ್ಲಯ್ಯ,ಬಾಲಚಂದ್ರ,ಅಯ್ಯಪ್ಪ,ರಸೂಲಸಾಬ್, ಸಿಬ್ಬಂದಿಗಳಾದ ಜಬಿನಾ ಬೇಗಂ, ವಿನಾಯಕ, ಶಾಂತಮ್ಮ, ಪ್ರಸಾದ್, ಶರಣಬಸವ, ಮತ್ತು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *