ವಾಸ್ತು ತಜ್ಞ ಡಾ, ಎಂಬಿಕೆ ಗುರೂಜಿ ಅವರಿಗೆ ಡಣಾಪುರದ ಪರಿಸರ ಪ್ರೇಮಿಗಳಿಂದ ಆತ್ಮೀಯ ಸನ್ಮಾನ,,,,,,,

ಗಂಗಾವತಿಯ ದಣಾಪುರದಲ್ಲಿ ನಡೆದ ವಾಸ್ತು ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ಚಿರಪರಿಚಿತರಾಗಿದ್ದ ದಿವಂಗತ ಗೌರವಾನ್ವಿತ ಸಣ್ಣ ಬಸಣ್ಣ ಕುರುಗೋಡು ಇವರ ಸುಪುತ್ರರಾದ ವಾಸ್ತುತಜ್ಞರಾಗಿರುವ ಡಾ, ಎಂಬಿಕೆ ಗುರೂಜಿ ಅವರನ್ನು ಗಂಗಾವತಿ ತಾಲೂಕಿನ ಡಣಾಪುರದ ಪರಿಸರ ಪ್ರೇಮಿಗಳಾಗಿರುವ ಸ್ನೇಹಜೀವಿ ಹನುಮೇಶ ಬಾವಿಕಟ್ಟಿ ಮತ್ತು ಬಸವರಾಜ್ ಕುಂಬಾರ ಅವರುಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು,,, ಸನ್ಮಾನ ಸ್ವೀಕರಿಸಿ ವಾಸ್ತುತಜ್ಞ ಡಾ, ಎಂಬಿಕೆ ಗುರೂಜಿ ಅವರು ಮಾತನಾಡಿ ಗೆಳೆಯರ ಬಳಗದ ಪ್ರಮುಖರಾದ ಹನುಮೇಶ್ ಬಾವಿಕಟ್ಟಿ ಮತ್ತು ಬಸವರಾಜ್ ಕುಂಬಾರ ಅವರು ಡಣಾಪುರ ಭಾಗದಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೇಮಿಗಳಾಗಿದ್ದಾರೆ ಹಾಗೆಯೇ ಬಡ ಜನರಿಗೆ ಮತ್ತು ಎಲ್ಲಾ ವರ್ಗದವರಿಗೆ ಅಗತ್ಯ ವೈದ್ಯಕೀಯ ಕ್ಷೇತ್ರ ಚಿಕಿತ್ಸೆಯ ಸಂದರ್ಭದಲ್ಲಿ ರಕ್ತದಾನವನ್ನು ಮಾಡುವ ಮೂಲಕ ಜೀವಗಳನ್ನು ಉಳಿಸುವದೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು,,, ಪರಿಸರ ಮತ್ತು ರಕ್ತದಾನದ ಮೂಲಕ ಕೊಡುಗೆ ನೀಡುತ್ತಿರುವ ಹನುಮೇಶ್ ಬಾವಿಕಟ್ಟಿ ಮತ್ತು ಬಸವರಾಜ್ ಕುಂಬಾರ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದು ಡಾ, ಎಂಬಿಕೆ ಗುರೂಜಿ ಅವರು ತಿಳಿಸಿದರು,,, ವಾಸ್ತು ತಜ್ಞರಾಗಿದ್ದ ದಿವಂಗತ ಕುರುಗೋಡು ಸಣ್ಣ ಬಸಣ್ಣನವರ ಜೀವನ ಆಧರಿಸಿ ಅವರ ಸೇವೆ ಕುರಿತು ಕರ್ನಾಟಕ ರಾಜ್ಯದ ಪ್ರಸಿದ್ಧ ಮತ್ತು ಹೆಸರಾಂತ ಸಾಹಿತಿಗಳಾದ ಎಸ್ ವಿ ಪಾಟೀಲ್ ಗುಂಡೂರು ಸರ್ ಅವರು,,, ವಾಸ್ತುತಜ್ಞ ಕರುಣಾಮಯಿ ಕುರುಗೋಡು ಸಣ್ಣ ಬಸಣ್ಣನವರ ಸ್ಮರಣ ಸಂಚಿಕೆಯನ್ನು ಬರೆಯುತ್ತಿದ್ದು ತುಂಬಾ ಸಂತೋಷದ ಸಂಗತಿಯಾಗಿದ್ದು,, ಸಣ್ಣ ಬಸಣ್ಣನವರ ವಾಸ್ತು ಕ್ಷೇತ್ರವನ್ನು ವಾಸ್ತು ತಜ್ಞರಾಗಿರುವ ಡಾ. ಎಂಬಿಕೆ ಗುರೂಜಿಯವರು ಮುಂದುವರಿಸಿಕೊಂಡು ಬಂದಿದ್ದು ಲಕ್ಷಾಂತರ ಜನರಿಗೆ ವಾಸ್ತುದೋಷದ ಪರಿಹಾರಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಡಣಾಪುರದ ಪರಿಸರ ಪ್ರೇಮಿಗಳಾದ ಹನುಮೇಶ ಬಾವಿಕಟ್ಟಿ ಮತ್ತು ಬಸವರಾಜ್ ಕುಂಬಾರ ಅವರು ತಿಳಿಸಿದರು,,,,,,

