ಶಾಂತಾ ಗಡ್ಡದಗೆ ವಿಜಯವಾಡದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ.

ಶಾಂತಾ ಗಡ್ಡದಗೆ ವಿಜಯವಾಡದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ.

ಕಂಪ್ಲಿ: ತಾಲ್ಲೂಕಿನ ಸಣಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ಅರಳಿಹಳ್ಳಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಂತಾ ಗಡ್ಡದ ಅವರ ಶೈಕ್ಷಣಿಕ ಅಭಿವೃದ್ಧಿ ಹಾಗೂ ಬೋಧನೆಯಲ್ಲಿ ಒಳಗೊಳ್ಳುವಿಕೆಯ ಕ್ರಿಯಾಶೀಲತೆಗಾಗಿ ದಕ್ಷಿಣ ಭಾರತದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿದ್ದಾರೆ.ಆಂದ್ರಪ್ರದೇಶದ ವಿಜಯವಾಡದ ಶ್ರೀಗುರು ಚೈತನ್ಯ ಉಪಧ್ಯಾಯ ಸಂಘವು ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೇ ಜನ್ಮದಿನೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಪಲೇಲ ರಾಮಾಂಜಿನೇಲು, ಕಾರ್ಯದರ್ಶಿ ಮೊಹ್ಮದ್ ಹುಸೇನ್, ಮುಖಂಡರಾದ ಪ್ರೋಶೈಲಜಾ, ಬಿ.ರಾಮಚಂದ್ರ ಯಾದವ್, ಚಿಂತಲ ಅನಂತಲಕ್ಷ್ಮೀ, ಶ್ರೀನಿವಾಸರಾವ್, ಕೆ.ರಮೇಶ್ ಯಾದವ್, ವೀರಶಿವಬಾಬು, ಮುರಳಿಮೋಹನ್ ಸೇರಿದಮತೆ ಇತರರು ಇದ್ದರು.ದಕ್ಷಿಣ ಭಾರತದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಶಾಂತಾ ಗಡ್ಡದ ಅವರನ್ನು ಶಾಲೆಯ ಶಿಕ್ಷಕರಾದ ಗುರುಸಿದ್ದಪ್ಪ, ರಾಜ್ಯ ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷ ನಾನಗನಗೌಡ ಎಂ.ಎ. ಸೇರಿದಂತೆ ತಾಲ್ಲೂಕಿನ ಶಿಕ್ಷಕರು ಅಭಿನಂದಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *