ಸೇಡಿನ ರಾಜಕಿಯಕ್ಕೆ ಇಳಿದ ಶಾಸಕ ಭರತ್ದೂರು ದಾಖಲಿಸಿ ತಕ್ಷಣ ಬಂಧಿಸಿ: ಪಂಪಣ್ಣ ನಾಯಕ ಒತ್ತಾಯ….

ಸೇಡಿನ ರಾಜಕಿಯಕ್ಕೆ ಇಳಿದ ಶಾಸಕ ಭರತ್ದೂರು ದಾಖಲಿಸಿ ತಕ್ಷಣ ಬಂಧಿಸಿ: ಪಂಪಣ್ಣ ನಾಯಕ ಒತ್ತಾಯ….

ಗಂಗಾವತಿ ಜ.3ಸೇಡಿನ ರಾಜಕೀಯಕ್ಕೆ ಇಳಿದಿರುವ ಬಳ್ಳಾರಿ ನಗರ ಶಾಸಕ ಭರತ್‌ರೆಡ್ಡಿ ಸಾರ್ವಜ ನಿಕವಾಗಿಯೇ ಶಾಸಕ ಜನಾ ರ್ದನರೆಡ್ಡಿ ಅವರ ಮನೆಯನ್ನು ಸುಟ್ಟು ಹಾಕುತ್ತೇನೆ, ಕೊಲೆ ಮಾಡುತ್ತೇನೆ ಎಂಬ ಬೆದರಿಕೆ ಹಾಕಿದ್ದು, ಕೂಡಲೆ ಸರ್ಕಾರ ಈತನ ಮೇಲೆ ದೂರು ದಾಖಲಿಸಿ ಬಂಧಿಸ ಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಒತ್ತಾಯಿಸಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿ, ವಾಲ್ಮೀಕಿ ಪುತ್ಥಳಿ ಅನಾವರಣ ವಿಚಾರದ ಬ್ಯಾನ‌ರ್ ಕಟ್ಟುವ ಸಂದರ್ಭದಲ್ಲಿ ಉದ್ದೇಶ ಪೂರ್ವಕ ಜಗಳ ತೆಗೆದು ಅದನ್ನು ವಿಕೋಪಕ್ಕೆ ಕೊಂಡೊಯ್ದಿದ್ದಾರೆ. ಶಾಸಕ ಜನಾರ್ದನರೆಡ್ಡಿ ಮನೆಗೆಅಡ್ಡಲಾಗಿ ಬ್ಯಾನರ್ ಕಟ್ಟುವ ಉದ್ದೇಶ ಏನಿತ್ತು..?ಮನೆಗೆ ಅಡ್ಡವಾಗಿ ಬ್ಯಾನರ್ ಕಟ್ಟಿದರೆ ಖಚಿತವಾಗಿ ಅಡ್ಡಿ ಪಡಿಸುತ್ತಾರೆ. ಆಗ ವಾಲ್ಮೀಕಿ ನಾಯಕ ಸಮಾಜದದ ಕಾರ್ಯ ಕ್ರಮಕ್ಕೆ ಶಾಸಕ ಜನಾರ್ದನರೆಡ್ಡಿ ಅಡ್ಡಿಪಡಿಸಿದ್ದಾರೆ ಎಂದು ಬಿಂಬಿಸಿ ಇಡೀ ವಾಲ್ಮೀಕಿನಾಯಕ ಸಮಾಜವನ್ನು ಜನಾರ್ದನರೆಡ್ಡಿ ವಿರುದ್ಧ ಎತ್ತಿಕಟ್ಟುವ ಸಂಚು ಬಳ್ಳಾರಿ ಶಾಸಕ ಭರತ್‌ರೆಡ್ಡಿ ಹೊಂದಿರುವುದು ಇಲ್ಲಿ ಸ್ಪಷ್ಟವಾಗಿದೆರಾಜಕೀಯದಲ್ಲಿ ಇನ್ನು ಪಳಗದ ಹಾಗೂ 35ರ ಆಸುಪಾಸಿ ನಲ್ಲಿರುವ ಶಾಸಕ ಭರತ್ ರೆಡ್ಡಿ ಮಾಧ್ಯಮದ ಮುಂದೆ ಅದೂ ಸಾರ್ವ ಜನಿಕವಾಗಿ ಮಾತನಾಡುವ ರೀತಿ,ಆವಾಜ್ ನೀಡುವ ಎಚ್ಚರಿಕೆ, ಬೆದರಿಕೆ ನೋಡಿದರೆ ಈ ಕೃತ್ಯದ ಹಿಂದೆ ಕೊಲೆ ಮಾಡುವ ಸಂಚು ರೂಪಿಸಿರುವುದು ಬಹುತೇಕ ಖಚಿತವಾಗಿದೆ.ಚುನಾಯಿತ ಪ್ರತಿನಿಧಿಯಾ ಗಿರಲು ಭರತ್‌ರೆಡ್ಡಿ ಅನರ್ಹ ನಾಗಿದ್ದು ಕೂಡಲೆ ಸಿಎಂ ಸಿದ್ದರಾಮಯ್ಯ ತಕ್ಷಣ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಭರತ್‌ರೆಡ್ಡಿಯನ್ನು ಶಾಸಕ ಸ್ಥಾನದಿಂದ ಕಿತ್ತು ಹಾಕಬೇಕು ಮತ್ತು ಅವರ ವಿರುದ್ಧ ದೂರು ದಾಖಲಿಸಿ ಬಂಧಿಸಬೇಕು ಎಂದು ಪಂಪಣ್ಣ ನಾಯಕ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *