ಗಂಗಾವತಿ ವಿಧಾನಸಭಾ ಕ್ಷೇತ್ರದ ಹಿರೇಬೆಣಕಲ್ಲಿನ ಮೊರೆರಾ ಶಿಲಾ ಸ್ಮಾರಕ ಗಳಿಗೆ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳ ಭೇಟಿ….

ಗಂಗಾವತಿ ವಿಧಾನಸಭಾ ಕ್ಷೇತ್ರದ ಹಿರೇಬೆಣಕಲ್ಲಿನ ಮೊರೆರಾ ಶಿಲಾ ಸ್ಮಾರಕ ಗಳಿಗೆ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳ ಭೇಟಿ….

ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ಹಿನ್ನೆಲೆ ಹಾಗೂ ಪರಂಪರೆ ಹೊಂದಿರುವ ಮೂರರ ಬೆಟ್ಟಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಕಿ ರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಭೇಟಿ ಮಾಡಿ ವೀಕ್ಷಿಸಿದರು. ಶ್ರೀಗಳು ಸ್ಥಳದಲ್ಲಿರುವ ವರ್ಣ ಚಿತ್ರಗಳು ಮತ್ತು ಬೃಹತ್ ಶಿಲಾಕೋಣಿಗಳನ್ನು ಸವಿಸ್ತಾರವಾಗಿ ನೋಡಿದರು. ಈ ಸಂದರ್ಭದಲ್ಲಿ ಅವರು, “ಮಾನವನ ಕಲೆ ಮತ್ತು ನೈಪುಣ್ಯತೆ ಅದ್ಭುತ. ಶಿಲಾಯುಗ ಕಾಲದ ಈ ಸ್ಮಾರಕಗಳು ಈ ನಾಡಿನ ಹೆಮ್ಮೆ” ಎಂದು ಪ್ರಶಂಸಿಸಿದರು. ಅವುಗಳ ಸಂರಕ್ಷಣೆ ಅಗತ್ಯ ಎನ್ನುವ ಭಾವನೆಯನ್ನು ವ್ಯಕ್ತಪಡಿಸಿದರು..

ಈ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಶ್ರೀಗಳ ಜೊತೆಗಿದ್ದು ಆಶೀರ್ವಾದ ಪಡೆದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇಂದಿರಾವತಿ, ಮುಖಂಡರು ವೀರೇಶ್ ಅಂಗಡಿ, ಬಸನಗೌಡ ಹೊಸಳ್ಳಿ, ಮಂಜುನಾಥ್ ದೊಡ್ಮನಿ, ಶಂಕರ್ ಬುದಗುಂಪಿ, ಪಂಪಣ್ಣ, ವೀರಭದ್ರಪ್ಪ ಅಂಗಡಿ, ನಾಗರಾಜ್ ಡಾಣಾಪುರ್, ಹರನಾಯಕ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಶ್ರೀಗಳ ಈ ಭೇಟಿಯು ಐತಿಹಾಸಿಕ ಮತ್ತು ಪುರಾತತ್ವ ಪ್ರಾಮುಖ್ಯತೆ ಇರುವ ಈ ಪ್ರದೇಶದ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

Leave a Reply

Your email address will not be published. Required fields are marked *