ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸಿ: ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು…

ಗಂಗಾವತಿ: ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳಾದ ಸಂಸ್ಕಾರವನ್ನು ಬೆಳೆಸುವ ಕಾರ್ಯಕ್ಕೆ ಶಿಕ್ಷಕರು ಹಾಗೂ ಪಾಲಕರು ಮುಂದಾಗಬೇಕೆಂದು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷ ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ಹೇಳಿದರು.ಅವರು ಶನಿವಾರದಂದು ಸಂಘದ ವ್ಯಾಪ್ತಿಯಲ್ಲಿ ಬರುವ ಶ್ರೀ ಚನ್ನಬಸವ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಮತಿ ಗಂಗಮ್ಮ ಗುರುಪಾದಗೌಡ ಮಾಲಿಪಾಟೀಲ್ ಸ್ಮರಣಾರ್ಥವಾಗಿ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಂಗೈಕ್ಯ ಪತ್ರಯ್ಯ ಸ್ವಾಮಿ ಅವರ ಅನುಗ್ರಹದ ಮೇರೆಗೆ ಸ್ಥಾಪಿಸಲಾದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣವನ್ನು ವೈವಿಧ್ಯಮಯ ಶಿಕ್ಷಣವನ್ನು ಕಲ್ಪಿಸಲಾಗುತ್ತಿದ್ದು ಸದರಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸರ್ಕಾರ ಹಾಗೂ ಸರ್ಕಾರೇತರ ಇಲಾಖೆಗಳಲ್ಲಿ ಉನ್ನತ ಸೇವೆ ಸಲ್ಲಿಸುತ್ತಿರುವ ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಪ್ಪಳ ಜೆಸ್ಕಾಂ ಇಲಾಖೆಯ ಯೂಸುಫ್ ನಮ್ಮ ಹೆಮ್ಮೆಯ ವಿದ್ಯಾರ್ಥಿ ಎಂದು ಹೇಳಲು ಸಂತಸವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ. ಸಂಸ್ಥೆಯ ಕಾರ್ಯದರ್ಶಿ ಶರಣೇಗೌಡ ಮಾಲಿ ಪಾಟೀಲ್. ರಾಚಯ್ಯ ಸ್ವಾಮಿ ಆಡಳಿತ ಮಂಡಳಿ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ.ಜೆಸ್ಕಾಂ ಇಲಾಖೆಯ ಅಧಿಕಾರಿ ಯೂಸುಫ್. ಶಾಲೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ಗೌಡ ಪಾಟೀಲ್. ವೀರಣ್ಣ ಅರುಣ್ ನಿವೃತ್ತಿ ಮುಖ್ಯೋಪಾಧ್ಯಾಯರು. ವಿಶ್ವನಾಥ. ಎಚ್ ಎಮ್.ಪುಷ್ಪಾವತಿ ಜಯನಗರ. ಭಾಸ್ಕರ್ ಅನಿತಾ ಬಂಡಾರಕರ್ ಉಪಾಧ್ಯಾಯನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ.ಬಸಮ್ಮ ಕೊಟ್ಟೂರೇಶ್ವರ ವಿವಿಧ ಉದ್ದೇಶ ಸಂಸ್ಥೆ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಕ ಶಿಕ್ಷಕಿ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಮಕ್ಕಳ ಪಾಲಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು. ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತಿತರ ಕಾರ್ಯಕ್ರಮಗಳು ಜರುಗಿದವು.

