ಡಿಸೇಂಬರ್ 18 ರಂದು ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೆಳಗಾವಿ ಚಲೋ.

ಡಿಸೇಂಬರ್ 18 ರಂದು ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೆಳಗಾವಿ ಚಲೋ.

ಕರ್ನಾಟಕ ರಾಜ್ಯ ಹಾಸ್ಟೆಲ್ ಹೊರಗುತ್ತಿಗೆ ನೌಕರ ಸಂಘಟನೆ ವತಿಯಿಂದ ಬೆಳಗಾವಿ ಅಧಿವೇಶನ ಚಲೋ ಹಮ್ಮಿಕೊಳ್ಳಲಾಗಿದೆ. ಎಂದು ಜಿಲ್ಲಾಧ್ಯಕ್ಷ ಗ್ಯಾನೇಶ್ ಕಡಗದ ಸಭೆಯಲ್ಲಿ ತಿಳಿಸಿದರು. ದಿನಾಂಕ 11.04.2025 ರಂದು ರಾಜ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಪರಿಷ್ಕರಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿರುವ ಕನಿಷ್ಠ ವೇತನವನ್ನು ತಕ್ಷಣ ಜಾರಿಗೆ ಮಾಡಬೇಕು ಹಾಗೂ ಕನಿಷ್ಠ ವೇತನ ತಿಂಗಳಿಗೆ 36,000 ನೀಡಬೇಕು ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಿ ಕಾಯಂ ಮಾಡಬೇಕು. ಕ್ರೈಸ್ ವಸತಿ ಶಾಲೆ ಗಳಲ್ಲಿ ಕೆಲಸ ಮಾಡುವ ಪ್ರಥಮ ದರ್ಜೆ ಸಹಾಯಕರನ್ನು ಕೃಪಾಂಕ ನೀಡಿ ಖಾಯಂ ಗೊಳಿಸಬೇಕು. ಕಾನೂನ ಪ್ರಕಾರ ವಾರದ ರಜೆ ಕಡ್ಡಾಯವಾಗಿ ನೀಡಬೇಕು.ಸರಕಾರ ಇಲಾಖೆಯಿಂದ ವೇತನ ಮಾಡಬೇಕು. ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ಎಲ್ಲರನ್ನು ಖಾಯಂ ಮಾಡಬೇಕೆಂದು ಅಗ್ರಹಿಸಿ ನಡೆಯುತ್ತಿರುವ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ಅದರ ಪೂರ್ವ ಭಾವಿಯಾಗಿ ಗಂಗಾವತಿಯ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ನಲ್ಲಿ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳು ಭಾಗವಹಿಸಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಗ್ಯಾನೇಶ್ ಕಡಗದ. ಕಾರ್ಯದರ್ಶಿ ದಾವಲ್ ಸಾಬ್. ಉಪಾಧ್ಯಕ್ಷ ಮೊಮ್ಮದ್ ರಫಿ. ಖಜಾಂಚಿ ಪಕೀರಪ್ಪ ಮುಖಂಡರಾದ ಪಾರ್ವತಿ ರೇಖಾ ತಿಮ್ಮಣ್ಣ ನೂರ್ ಪಾಷ ಮಂಜುನಾಥ. ಶಾಂತಮ್ಮ ರುಕ್ಮಿಣಿ. ರಮೇಶ ವಿಜಯಲಕ್ಷ್ಮಿ. ಸೋಮನಾಥ್. ಆನಂದ.

Leave a Reply

Your email address will not be published. Required fields are marked *