ಸಂಪೂರ್ಣ ಅನುಷ್ಠಾನಕ್ಕಾಗಿ ಲಕ್ಷಾಂತರ ಜನತೆ ಬೆಳಗಾವಿ ಛಲೋ ಅಭಿಯಾನಮಾದಿಗ ಮೀಸಲಾತಿ ಜಾರಿಗೆ ಆಗ್ರಹಿಸಿ ಡಿ.೧೭ಕ್ಕೆ ಆಮರಣಾಂತ ಉಪವಾಸ ಸತ್ಯಾಗ್ರಹ…

ಸಂಪೂರ್ಣ ಅನುಷ್ಠಾನಕ್ಕಾಗಿ ಲಕ್ಷಾಂತರ ಜನತೆ ಬೆಳಗಾವಿ ಛಲೋ ಅಭಿಯಾನಮಾದಿಗ ಮೀಸಲಾತಿ ಜಾರಿಗೆ ಆಗ್ರಹಿಸಿ ಡಿ.೧೭ಕ್ಕೆ ಆಮರಣಾಂತ ಉಪವಾಸ ಸತ್ಯಾಗ್ರಹ…

ಗಂಗಾವತಿ: ಕಳೆದ ಮುವತ್ತೆöÊದು ವರ್ಷಗಳಿಂದ ನಿರಂತರ ಮೂಗಿಗೆ ತುಪ್ಪಾ ಹಚ್ಚುತ್ತಿರುವ ಸರಕಾರಗಳು ಇನ್ನೂ ಕೂಡಾ ಮಾದಿಗ ಸಮದಾಯಕ್ಕೆ ಒಳ ಮೀಸಲಾತಿ ಸಂಪೂರ್ಣ ಜಾರಿಗೆ ತಾರದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು ಕೂಡಲೆ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಬೆಳಗಾವಿ ಅಧಿವೇಶನದ ವೇಳೆ ಡಿ.೧೭ ರಂದು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿ ಕರ್ನಾಟಕ ರಾಜ್ಯ ಘಟಕ ಆಚರಿಸಲಿದೆ ಎಂದು ಹೋರಾಟ ಸಮಿತಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಸುಭಾಷ್ ಕನಕಗಿರಿ ಇವರು ತಿಳಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಗಂಗಣ್ಣಾ ಸಿದ್ದಾಪುರ ಮಾತನಾಡಿ, ಅನೇಕ ತ್ಯಾಗ ಬಲಿದಾನ ಹಾಗು ಸುಪ್ರೀಮ್ ಕೋರ್ಟ್ ಆದೇಶದ ಮೇರೆಗೆ ಒಳ ಮೀಸಲಾತಿ ಹಂಚಿಕೆಯಾದರೂ ಸಂಪೂರ್ಣ ಜಾರಿಗೊಂಡಿಲ್ಲ, ರಾಜ್ಯ ಸರಕಾರದ ಎಲ್ಲಾ ಸರಕಾರ ಹುದ್ದೆಗಳು ಸೇರಿದಂತೆ ಬ್ಯಾಕ್‌ಲಾಗ್ ಹುದ್ದೆಗಳಲ್ಲಿಯೂ ಕೂಡಲೆ ಸಂಪೂರ್ಣ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿದರು. ಕಾರಟಗಿ ತಾಲೂಕು ಅಧ್ಯಕ್ಷ ಶೀವಣ್ಣ ಈಳಿಗನೂರು ಇವರು ಮಾತನಾಡಿ, ರಾಷ್ಟಿçÃಯ ಅಧ್ಯಕ್ಷ ಪದ್ಮಭೂಷಣ ಮಂದಕೃಷ್ಣ ಮಾದಿಗ ಹಾಗು ರಾಜ್ಯಧ್ಯಕ್ಷ ನರಸಪ್ಪ ಇವರ ನೇತೃತ್ವದ ಹೋರಾಟದ ಫಲವಾಗಿ ಸರಕಾರಗಳು ಕಣ್ಣು ತೆರೆದಿದ್ದು, ಸಂಪೂರ್ಣ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿವೆ ಒಳ ಮೀಡಲಾಗಿ ಎಲ್ಲಾ ಜನಾಂಗಗಳ ಜನ ಸಂಖ್ಯೆ ಆಧಾರದ ಮೇಲೆ ಜಾರಿಯಾಗಬೇಕಿದ್ದು, ಜಾರಿಗೆ ಹಿಂದೇಟು ಹಾಕಲು ಕಾರಣವೇನು, ಅದಕ್ಕಾಗಿ ಬೆಳಗಾವಿ ಅಧಿವೇಶನದ ವೇಳೆ ಲಕ್ಷಾಂತರ ಜನತೆ ಮೀಸಲಾತಿ ಅನುಷ್ಠಾನಕ್ಕೆ ಸೇರಬೇಕಿದ್ದು ಕೊಪ್ಪಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾಯ ಆಗಮಿಸಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಸಮಿತಿ ಗಂಗಾವತಿ ತಾಲೂಕು ಅಧ್ಯಕ್ಷ ಮಹಾದೇವ ಬಡಿಗೇರಾ, ಪ್ರಧಾನ ಕಾರ್ಯದರ್ಶಿ ಯಮನೂರಪ್ಪ ದೊಡ್ಡಮನಿ ಇದ್ದರು.

Leave a Reply

Your email address will not be published. Required fields are marked *